Guru Purnima 2019: ಇಂದು ಗುರುಪೂರ್ಣಿಮೆ; ವಿದ್ಯೆ ಕಲಿಸಿದ ಗುರುವನ್ನು ನೆನೆಯುವ ದಿನ

Guru Purnima 2019: ಮಾಧವಾಚಾರ್ಯ, ಆದಿ ಶಂಕರ, ರಾಮಾನುಜಾಚಾರ್ಯ ಮುಂತಾದ ಪ್ರಸಿದ್ಧ ಗುರುಗಳು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಪಾಠ ಹೇಳಿಕೊಟ್ಟ, ಬದುಕಿನ ಮಾರ್ಗ ತೋರಿದವರಿಗೆ ನಮ್ಮ ಕೃತಜ್ಞತೆ ಅರ್ಪಿಸಲು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

Sushma Chakre | news18
Updated:July 16, 2019, 10:09 AM IST
Guru Purnima 2019: ಇಂದು ಗುರುಪೂರ್ಣಿಮೆ; ವಿದ್ಯೆ ಕಲಿಸಿದ ಗುರುವನ್ನು ನೆನೆಯುವ ದಿನ
ಹಿವ್ರಾದಲ್ಲಿರುವ ಬೇಲೂರು ಮಠದ ಮುಂದೆ ಸಾಲುಗಟ್ಟಿ ನಿಂತ ಭಕ್ತರು
  • News18
  • Last Updated: July 16, 2019, 10:09 AM IST
  • Share this:
ಬೆಂಗಳೂರು (ಜು.16): 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ಮಾತಿದೆ. ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಅತ್ಯಂತ ಪ್ರಮುಖ ಸ್ಥಾನ ಇರುತ್ತದೆ. ನಮ್ಮನ್ನು ತಿದ್ದಿ, ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡುವ ಗುರು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಆ ಗುರುವನ್ನು ನೆನಪಿಸಿಕೊಳ್ಳುವ ದಿನವೇ ಗುರುಪೂರ್ಣಿಮೆ.

ಭಾರತದಲ್ಲಿ ಗುರುವಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ತಂದೆ-ತಾಯಿಯ ನಂತರದ ಸ್ಥಾನವನ್ನು ಹಿರಿಯರು ಹಿಂದಿನಿಂದಲೂ ಗುರುವಿಗೆ ನೀಡುತ್ತಾ ಬಂದಿದ್ದಾರೆ. ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಜೀವನದ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ನೀಡಿದ ಗುರುಗಳಿಗೆ ಅರ್ಪಿಸಲಾಗುತ್ತದೆ.

ಆಷಾಢ ಮಾಸದಲ್ಲಿ ಆಚರಿಸಲಾಗುವ ಗುರುಪೂರ್ಣಿಮೆಯಂದು ವಿದ್ಯಾರ್ಥಿಗಳು ತಮ್ಮ ಗುರುವಿಗೆ ತಮ್ಮ ಧನ್ಯವಾದ ಅರ್ಪಿಸುತ್ತಾರೆ, ಪೂಜಿಸುತ್ತಾರೆ. ಹಿಂದು ಪುರಾಣಗಳ ಪ್ರಕಾರ ಮಹಾಭಾರತ ಮಹಾಕಾವ್ಯವನ್ನು ಸೃಷ್ಟಿಸಿದ ವೇದ ವ್ಯಾಸರ ಜನ್ಮದಿನದಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇಂದು ಮಧ್ಯರಾತ್ರಿ 1.48ರಿಂದ ನಾಳೆ ಮುಂಜಾನೆ 3.07ರವರೆಗೆ ಗುರುಪೂರ್ಣಿಮೆ ತಿಥಿ ಇರುತ್ತದೆ. ಇಂದು ರಾತ್ರಿ ಪಾರ್ಶ್ವ ಚಂದ್ರಗ್ರಹಣ ಕೂಡ ಇರುವುದು ಅಚ್ಚರಿಯ ಸಂಗತಿ.

eve-of-Guru-Purnima

Chandra Grahan 2019: 149 ವರ್ಷಗಳ ಬಳಿಕ ಗೋಚರವಾಗುತ್ತಿದೆ ಪಾರ್ಶ್ವ ಚಂದ್ರಗ್ರಹಣ; ಮಧ್ಯರಾತ್ರಿ ಗೋಚರ

ಮಾಧವಾಚಾರ್ಯ, ಆದಿ ಶಂಕರ, ರಾಮಾನುಜಾಚಾರ್ಯ ಮುಂತಾದ ಪ್ರಸಿದ್ಧ ಗುರುಗಳು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಪಾಠ ಹೇಳಿಕೊಟ್ಟ, ಬದುಕಿನ ಮಾರ್ಗ ತೋರಿದವರಿಗೆ ನಮ್ಮ ಕೃತಜ್ಞತೆ ಅರ್ಪಿಸಲು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಹಿಂದುಗಳ ಹಾಗೇ ಬೌದ್ಧ ಧರ್ಮದವರಿಗೂ ಇಂದು ಮಹತ್ವದ ದಿನ. ಗೌತಮ ಬುದ್ಧನ ಭಕ್ತರು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧ ಸನ್ಯಾಸಿಯಾಗಿ ತನ್ನ ಮೊದಲ ಪ್ರವಚನ ನೀಡಿದ ದಿನವೆಂದು ಬೌದ್ಧರು ಈ ದಿನವನ್ನು ಆಚರಿಸುತ್ತಾರೆ.

First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ