‘ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ’: ಮೇಲ್ಜಾತಿಗೆ ಮೀಸಲಾತಿ ವಿಚಾರ ಕೇವಲ ಚುನಾವಣೆ ಗಿಮಿಕ್​​; ಸಿದ್ದರಾಮಯ್ಯ!

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿಯೇ ಈ ನಿರ್ಧಾರ ಕೈಗೊಂಡಿದ್ಯಾಕೇ? ಎಂದು ಕೇಂದ್ರಕ್ಕೆ ಪ್ರಶ್ನಿಸಿವೆ. ದೇಶದಲ್ಲಿ ಉದ್ಯೋಗವೇ ಸಿಗುತ್ತಿಲ್ಲ. ನಿಮ್ಮ ಅವಧಿಯಲ್ಲಿಯೇ ಉದ್ಯೋಗಗಳ ಸಂಖ್ಯೆ ಕ್ಷೀಣಿಸಿದೆ. ಈ ಪರಿಸ್ಥಿತಿಯಲ್ಲಿ ಮೇಲ್ಜಾತಿ ಮೀಸಲಾತಿಯಿಂದ ಯಾರಿಗೆ ಲಾಭ? ಎಂದು ಪ್ರಶ್ನಿಸುವ ಮುಖೇನ ಕೇಂದ್ರಕ್ಕೆ ವಿಪಕ್ಷಗಳು ಚಾಟಿ ಬೀಸಿವೆ.

Ganesh Nachikethu | news18
Updated:January 9, 2019, 7:46 PM IST
‘ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ’: ಮೇಲ್ಜಾತಿಗೆ ಮೀಸಲಾತಿ ವಿಚಾರ ಕೇವಲ ಚುನಾವಣೆ ಗಿಮಿಕ್​​; ಸಿದ್ದರಾಮಯ್ಯ!
ಸಿದ್ದರಾಮಯ್ಯ
Ganesh Nachikethu | news18
Updated: January 9, 2019, 7:46 PM IST
ಬೆಂಗಳೂರು(ಜ.09): ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸಮುದಾಯಕ್ಕೆ ಶೇ.10 ಮೀಸಲಾತಿ ಕಲ್ಪಿಸುವುದು ಸ್ವಾಗತಾರ್ಹ. ಆದರೆ, ಲೋಕಸಭಾ ಚುನಾವಣೆ ಹೊತ್ತಲಿಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೀಸಲಾತಿ ಮಸೂದೆ ಮಂಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಬಿಜೆಪಿ ಆರಂಭದಿಂದಲೂ ಮೀಸಲಾತಿ ವಿರೋಧಿ ಪಕ್ಷವಾಗಿದ್ದು, ಕೇಂದ್ರ ಸಚಿವ ಸಂಪುಟದ ಈ ನಿರ್ಧಾರ ಕೇವಲ ಚುನಾವಣೆ ಗಿಮಿಕ್​​ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರು ಅನಾದಿಕಾಲದಿಂದಲೂ ಮೀಸಲಾತಿಯನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಈಗ ಹಠಾತ್ತನೇ ಆರ್ಥಿಕವಾಗಿ ಹಿಂದುಳಿದ ಅಗ್ರಗಣ್ಯ ಜಾತಿಗಳಿಗೆ ಮೀಸಲಾತಿ ನೀಡಲು ಮುಂದಾಗಿದ್ದಾರೆ. ಮೇಲ್ಜಾತಿಯ ಬಡವರಿಗೆ ಮೀಸಲಾತಿ ನೀಡಬೇಕೆನ್ನುವುದು ಒಳ್ಳೆಯ ವಿಚಾರವೇ. ಲೋಕಸಭೆ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಸಂಸತ್​ನಲ್ಲಿ ಬಿಲ್​​ ಮಂಡನೆ ಮಾಡಿರುವುದು ಮತಬ್ಯಾಂಕ್ ರಾಜಕಾರಣಕ್ಕಾಗಿಯೇ ಎಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ಮೇಲ್ಜಾತಿಗೆ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ನಿನ್ನೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಲೋಕಸಭೆಯಲ್ಲಿ ​ಅಂಗೀಕಾರಗೊಂಡ ನಂತರ ಇಂದು ರಾಜ್ಯಸಭೆಯಲ್ಲಿ ಬಿಲ್​​ ಮಂಡನೆ ಮಾಡಲಾಯ್ತು. ಈಗಾಗಲೇ ರಾಜ್ಯಸಭೆಯಲ್ಲಿ ಮಸೂದೆ ಸುತ್ತ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಮಸೂದೆಗೆ ಅಸ್ತು ನೀಡಲು ಕಾಂಗ್ರೆಸ್​​ ಸೇರದಂತೆ ವಿರೋಧ ಪಕ್ಷಗಳು ತಕಾರರು ತೆಗೆಯುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: 1992ರಲ್ಲಿ ಪಿವಿಎನ್ ರಾವ್​ಗೆ ಅಡ್ಡಗಾಲಾಗಿದ್ದ ಇಂದ್ರಾ ಸಾಹನಿಯಿಂದ ಈಗ ಮೋದಿಗೆ ತಡೆ?

ಹಾಗೆಯೇ ಮೀಸಲಾತಿ ಕಲ್ಪಿಸುವ ಸಲುವಾಗಿಯೇ ಉನ್ನತ ಸಮಿತಿಯೊಂದನ್ನು ರಚಿಸುವಂತೆ ಆಗ್ರಹಿಸಿವೆ. ಜೊತೆಗೆ ಬಿಲ್​​ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ; ಆದರೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿಯೇ ಈ ನಿರ್ಧಾರ ಕೈಗೊಂಡಿದ್ಯಾಕೇ? ಎಂದು ಕೇಂದ್ರಕ್ಕೆ ಪ್ರಶ್ನಿಸಿವೆ. ದೇಶದಲ್ಲಿ ಉದ್ಯೋಗವೇ ಸಿಗುತ್ತಿಲ್ಲ. ನಿಮ್ಮ ಅವಧಿಯಲ್ಲಿಯೇ ಉದ್ಯೋಗಗಳ ಸಂಖ್ಯೆ ಕ್ಷೀಣಿಸಿದೆ. ಈ ಪರಿಸ್ಥಿತಿಯಲ್ಲಿ ಮೇಲ್ಜಾತಿ ಮೀಸಲಾತಿಯಿಂದ ಯಾರಿಗೆ ಲಾಭ? ಎಂದು ಪ್ರಶ್ನಿಸುವ ಮುಖೇನ ಕೇಂದ್ರಕ್ಕೆ ವಿಪಕ್ಷಗಳು ಚಾಟಿ ಬೀಸಿವೆ.

ಇನ್ನು ಮೀಸಲಾತಿಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಶೇ. 50ಕ್ಕೆ ಮಿತಿಗೊಳಿಸಿದೆ. ಸಂವಿಧಾನದ ಅಂಶಗಳನ್ನ ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟಿದೆ. ಈಗಾಗಲೇ ಹಿಂದುಳಿದವರು, ದಲಿತರು ಮೊದಲಾದವರಿಗೆ ನೀಡಿರುವ ಒಟ್ಟಾರೆ ಮೀಸಲಾತಿಯು ಶೇ. 49 ಇದೆ. ಈಗ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಒದಗಿಸಿದರೆ ಸುಪ್ರೀಂ ಕೊಟ್ಟ ಮಿತಿಯು ಮೀರಿ ಹೋಗುತ್ತದೆ. ಇದು ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತದೆ.
Loading...

ಇದನ್ನೂ ಓದಿ: ದೀದಿ ನಾಡಲ್ಲಿ ಗರಿಗೆದರಿದ ರಾಜಕೀಯ: ಟಿಎಂಸಿ ಸಂಸದ ಸೌಮಿತ್ರ ಖಾನ್‌ ಬಿಜೆಪಿಗೆ ಸೇರ್ಪಡೆ!

ಒಂದು ವೇಳೆ ಕೇಂದ್ರವು ತನ್ನ ನಿರ್ಧಾರಕ್ಕೆ ಬದ್ಧವಾಗಿ ಇದನ್ನು ಜಾರಿಗೊಳಿಸಲೇಬೇಕೆಂದರೆ ಮೀಸಲಾತಿ ವಿಚಾರವಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಬಹುದು. ಈ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಸಂವಿಧಾನ ತಿದ್ದುಪಡಿ ವಿಧೇಯಕವು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ತುಂಬಿದ ಸದನಗಳಲ್ಲಿ ಕಟ್ಟುನಿಟ್ಟಾಗಿ ಅನುಮೋದನೆಯಾಗಬೇಕು. ಎನ್​ಡಿಎ ಸರಕಾರಕ್ಕೆ ಲೋಕಸಭೆಯಲ್ಲಿ ಬಹುಸಂಖ್ಯೆ ಇದೆ. ಆದರೆ, ರಾಜ್ಯಸಭೆಯಲ್ಲಿ ಅಷ್ಟು ಬಲ ಇಲ್ಲ. ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಹಸಿರುನಿಶಾನೆ ಸಿಕ್ಕುತ್ತದಾದರೂ ರಾಜ್ಯಸಭೆಯಲ್ಲಿ ಅವಕಾಶ ತೀರಾ ಕಡಿಮೆ ಎನ್ನುತ್ತಾರೆ ತಜ್ಞರು.

--------------
ಭಾರತ ಬಂದ್​ ಬಿಸಿಯಲ್ಲೂ ಕರುನಾಡ ಸಿಂಗಂ ರವಿ ಚೆನ್ನಣ್ಣವರ್ ಹವಾ
First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...