ಅಹಿಂದದಿಂದಲೇ ಅಧಿಕಾರಕ್ಕೆ - ಈಗ ಸಿದ್ಧರಾಮಯ್ಯ ಅಹಿಂದದಿಂದ ದೂರ ; ಕಟೀಲ್ ವಾಗ್ದಾಳಿ
ಗಲಭೆಕೋರರ ದಾಳಿಯಿಂದ ಎರಡು ಪೊಲೀಸ್ ಠಾಣೆಗಳಿಗೆ ಹಾನಿಯಾಗಿದ್ದು, ಶಾಸಕರ ಮನೆ ಸಂಪೂರ್ಣ ಜಖಂ ಆಗಿದೆ. ಆದರೆ, ಅಹಿಂದ ಚಳುವಳಿ ಪ್ರಾರಂಭ ಮಾಡಿ ಅದರಿಂದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಯಾಕೆ ಘಟನಾ ಸ್ಥಳಕ್ಕೆ ಬಂದಿಲ್ಲ.
ಬೆಂಗಳೂರು(ಆಗಸ್ಟ್. 17): ಅಹಿಂದ ಹೆಸರಲ್ಲಿ ಮುಖ್ಯಮಂತ್ರಿಯಾದ ವಿರೋಧ ಪಕ್ಷದ ನಾಯಕರದಾ ಸಿದ್ದರಾಮಯ್ಯನವರು ಈಗ ಅಹಿಂದದಿಂದ ಹಿಂದೆ ಇಟ್ಟಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಗಲಭೆ ಪೀಡಿತ ಪ್ರದೇಶಗಳಾದ ಡಿ ಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರಿಶೀಲನೆ ನಡೆಸಿದರು. ಗಲಭೆಕೋರರ ದಾಳಿಯಿಂದ ಎರಡು ಪೊಲೀಸ್ ಠಾಣೆಗಳಿಗೆ ಹಾನಿಯಾಗಿದ್ದು, ಶಾಸಕರ ಮನೆ ಸಂಪೂರ್ಣ ಜಖಂ ಆಗಿದೆ. ಆದರೆ, ಅಹಿಂದ ಚಳುವಳಿ ಪ್ರಾರಂಭ ಮಾಡಿ ಅದರಿಂದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಯಾಕೆ ಘಟನಾ ಸ್ಥಳಕ್ಕೆ ಬಂದಿಲ್ಲ. ಅಹಿಂದ ಹೆಸರಲ್ಲಿ ಮುಖ್ಯಮಂತ್ರಿಯಾದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನ ಹಿಂದೆ ಇಡುವ ಕೆಲಸ ಮಾಡಿದರು. ಅದೇ ರೀತಿ ಶ್ರೀನಿವಾಸ್ ರನ್ನ ಹಿಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಎಸ್ ಟಿ ಸೋಮಶೇಖರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರನ್ನೊಳಗೊಂಡ ಬಿಜೆಪಿ ನಿಯೋಗ ಗಲಭೆಕೋರರಿಂದ ದಾಳಿಗೆ ಒಳಗಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಪರಿಶೀಲನೆ ನಡೆಸಿದರು. ಮನೆ ಬಳಿ ಬೆಂಕಿಗೆ ಆಹುತಿಯಾದ ವಾಹನಗಳು, ಚೆಲ್ಲಾ ಪಿಲ್ಲಿಯಾಗಿ ಬಿದ್ದ ವಸ್ತುಗಳನ್ನ ನೋಡಿ ಘಟನೆ ತುಂಬ ಭಯಾನಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಅಗಮಿಸಿದ ಬಿಜೆಪಿ ನಿಯೋಗ ಪೊಲೀಸ್ ಠಾಣೆಯನ್ನ ನೋಡಿ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇದು ರಾಷ್ಟ್ರ ವಿರೋಧಿ ಘಟನೆಯಾಗಿದ್ದು, ಕೃತ್ಯದಲ್ಲಿ ಭಾಗಿಯಾದವರಿಗೆ ಸರ್ಕಾರಿ ಸವಲತ್ತುಗಳನ್ನ ನೀಡಬಾರದು ಎಂದು ಒತ್ತಾಯ ಮಾಡಿದರು.
ಸರ್ಕಾರದ ಅನುಮತಿ ಇಲ್ಲದೇ ನೀರು, ವಿದ್ಯುತ್ ಪಡೆಯುವವರ ಮೇಲೆ ನಿಗಾ ಇಡಬೇಕು ಇದೊಂದು ದೇಶದ್ರೋಹಿ ಕೃತ್ಯ ಎಂದು ಘಟನೆಯನ್ನ ತೀವ್ರವಾಗಿ ಖಂಡಿಸಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ