ವಿಜಯಪುರ: ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಜ್ಞಾನಯೋಗಾಶ್ರಮದ (Jnanayogashrama) ಸಿದ್ದೇಶ್ವರ ಶ್ರೀಗಳ (Siddeshwara Swamiji) ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದು, ಶ್ರೀಗಳು ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ. ಇಂದು ಸಂಜೆ ಸ್ವಾಮೀಜಿಗಳ ಆರೋಗ್ಯದ ಕುರಿತಂತೆ (Siddeshwara Swamiji Health Bulletin) ಮಾಹಿತಿ ನೀಡಿ ಡಾ. ಎಸ್.ಬಿ ಪಾಟೀಲ್, ಶ್ರೀಗಳಿಗೆ ಉಸಿರಾಟದ ತೊಂದರೆಯಾಗಿದೆ. ಆದರೆ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂಧಿಸುತ್ತಿದ್ದಾರೆ. ನಾವು ಎಲ್ಲಾ ಪ್ರಯತ್ನಗಳನ್ನ ಮಾಡುತ್ತಿದ್ದೇವೆ. ಚಿಕಿತ್ಸೆಗೆ ಬೇಕಾದ ಎಲ್ಲ ಉಪಕರಣ ಇಲ್ಲಿವೆ. ಸಾಮೀಜಿಗಳು ಗುಣಮುಖರಾಗಲಿ ಎಂದು ಭಕ್ತರು ಪ್ರಾರ್ಥನೆ ಮಾಡಬೇಕು. ನಾವೂ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಭಕ್ತರು ಆತಂಕ ಪಡಬಾರದು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮಾಹಿತಿ ನೀಡಿದ ವಿಜಯಪುರ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನ್ನವರ ಅವರು, ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಸ್ವಲ್ಪ ಉಸಿರಾಟದಲ್ಲಿ ತೊಂದರೆ ಇದೇ. ಆಶ್ರಮದಲ್ಲಿ ಚಿಕಿತ್ಸೆ ಮುಂದುರೆಸಿದ್ದೇವೆ. ಆಕ್ಸಿಜನ್ ಮೇಲೆ ಇದ್ದಾರೆ, ಐವಿ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆ ದಾಖಲಿಸಲು ಮನವೊಲಿಕೆಗೆ ಯತ್ನ ಮಾಡಿದ್ದೇವೆ. ಆಸ್ಪತ್ರೆ ದಾಖಲಿಸಲು ಬೇಡಾ ಅಂತಾ ಹೇಳಿದ್ದಾರೆ. ಹೀಗಾಗಿ ಆಶ್ರಮದಲ್ಲಿ ಚಿಕಿತ್ಸೆ ಮುಂದುವರಿಸಿದ್ದೇವೆ. ಸ್ವಾಮೀಜಿಗಳು ಮಾತನಾಡುತ್ತಿಲ್ಲ, ಆದರೆ ಸನ್ನೆಗಳ ಮೂಲಕ ತಿಳಿಸುತ್ತಿದ್ದಾರೆ ಎಂದು ತಿಳಿಸಿದರು.
ಸಿದ್ಧೇಶ್ವರ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ವಿಜಯಪುರ ನಗರದ ಅಬ್ದುಲ್ ರಜಾಕ್ ಖಾದ್ರಿ ದರ್ಗಾದಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದಿಂದ ಪ್ರಾರ್ಥನೆ ಮಾಡಿದ್ದು, ನಡೆದಾಡುವ ದೇವರು ಚೇತರಿಸಿಕೊಳ್ಳಿ ಎಂದು ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.
ಇನ್ನು, ಸಿದ್ದೇಶ್ವರ ಶ್ರೀ ನೋಡಲು ಅಜ್ಜರೊಬ್ಬರು ಕಳೆದ ಮೂರು ದಿನಗಳಿಂದ ಉಪವಾಸ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ. ಅತ್ತರಕಿ ಗ್ರಾಮದ ಅಜ್ಜ ಲೋಕಪ್ಪ ಕಳೆದ ಮೂರು ದಿನಗಳ ಹಿಂದೆ ಶ್ರೀಗಳ ಆರ್ಶೀವಾದ ಪಡೆಯಲು ಆಶ್ರಮಕ್ಕೆ ಆಗಮಿಸಿದ್ದರು. ಆಶ್ರಮದ ಸಿಬ್ಬಂದಿ, ಪೊಲೀಸರ ಸಹಕಾರದಿಂದ ಇಂದು ನೇರವಾಗಿ ಶ್ರೀಗಳ ದರ್ಶನ ಪಡೆದುಕೊಂಡಿದ್ದಾರೆ. ಶ್ರೀಗಳ ದರ್ಶನ ಪಡೆಯಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ವಿಜಯಪುರದಲ್ಲಿ ಇಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದೆ.
ಶ್ರೀಗಳು ಆದಷ್ಟು ಬೇಗ ಗುಣಮುಖರಾಗಿ ಎಂದಿನಂತೆ ತಮ್ಮ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. pic.twitter.com/hKUyHN2Iq1
— Siddaramaiah (@siddaramaiah) January 2, 2023
ಅಲ್ಲದೇ, ಆಧ್ಯಾತ್ಮಿಕವಾಗಿ ಬಹಳ ಆಳ ಜ್ಞಾನ ಪಡೆದುಕೊಂಡಿದ್ದರು. ಅನೇಕ ಸಂತರಲ್ಲಿ ಇವರು ಬಹಳ ಅಪರೂಪದ ಸಂತ. ಅವರ ಆರೋಗ್ಯ ಬೇಗ ಗುಣಮುಖರಾಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಹೋದಾಗ ಅವರು ಕಣ್ಣು ಮುಚ್ಚಿಕೊಂಡಿದ್ರು, ಮಾತಾಡ್ತಿರಲಿಲ್ಲ. ಅವರಿಗೆ ಆಕ್ಸಿಜನ್ ಕೊಟ್ಟಿದ್ದರಿಂದ ಮಾತಾಡ್ತಿರಲಿಲ್ಲ. ಹೀಗಾಗಿ ನಾನು ಮಾತಾಡಲು ಆಗಲಿಲ್ಲ, ಆದರೆ ವೈದ್ಯರು ಆರೋಗ್ಯ ಸ್ಥಿರವಾಗಿದೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ