ವಿಜಯಪುರ(ಜ.02): ವಿಜಯಪುರ ಜ್ಞಾನಯೋಗಾಶ್ರಮದ (Jnanayogashrama) ಸಿದ್ದೇಶ್ವರ ಶ್ರೀಗಳ (Sri Siddeshwara Swamiji) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಆಶ್ರಮದಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿರುವಾಗ ಶ್ರೀಗಳನ್ನು ನೋಡಲು ಯೋಗಾಶ್ರಮದತ್ತ ಭಕ್ತಸಾಗರ ಹರಿದು ಬರುತ್ತಿದ್ದು, ಎಲ್ಲರಲ್ಲೂ ಆತಂಕ ಹೆಚ್ಚಾಗಿದೆ. ಹೀಗಿರುವಾಗ ಆಶ್ರಮದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು ಶ್ರೀಗಳು ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ಅತ್ತ ಪೊಲೀಸರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.
ಹೌದು ಶ್ರೀಗಳ ಅನಾರೋಗಹ್ಯ ಹಿನ್ನೆಲೆ ನಸುಕಿನ ಜಾವದಿಂದಲೇ ಭಕ್ತರು ಆಶ್ರಮದ ಕಡೆ ಬರಲಾರಂಭಿಸಿದ್ದು, ಪ್ರಣವ ಮಂಟಪದಲ್ಲಿರುವ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ ಐದು ಗಂಟೆಗೆ ಪ್ರಾರ್ಥನೆ ಸಲ್ಲಿಸಿದ್ದು, ಆರು ಗಂಟೆಯಿಂದ ಪೂಜೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Amogha Siddeshwara Fair: ನೂರಾರು ಪಲ್ಲಕ್ಕಿಗಳ ಮುಖಾಮುಖಿ! ಇದು ಭಂಡಾರದೊಡೆಯ ಅಮೋಘ ಸಿದ್ದೇಶ್ವರ ಜಾತ್ರಾ ವೈಭidnfnU ವ
8 ಗಂಟೆಗೆ ಹೆಲ್ತ್ ಬುಲೆಟಿನ್
ಶ್ರೀಗಳ ಇಚ್ಛೆಯಂತೆ ಅವರಿಗೆ ಅನಾರೋಗ್ಯ ಕಾಡುತ್ತಿದ್ದರೂ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಶ್ರೀಗಳು ಪೌಷ್ಟಿಕಾಂಶ ಆಹಾರ ಸೇವನೆಗೆ ಒಪ್ಪದೇ ಕಳೆದ ಹತ್ತು ದಿನಗಳಿಂದಲೂ ಗಂಜಿ ಮಾತ್ರ ಸೇವಿಸುತ್ತಿದ್ದಾರೆನ್ನಲಾಗಿದೆ.
ಜ್ಞಾನಯೋಗಿ ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದೆನು.
ಭಗವಂತನ ಕೃಪೆಯಿಂದ ಶ್ರೀಗಳು ಶೀಘ್ರವೇ ಗುಣಮುಖರಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. pic.twitter.com/kaxJesMo1x
— Pralhad Joshi (@JoshiPralhad) December 31, 2022
ಇನ್ನು ಶ್ರೀಗಳ ಬಗ್ಗೆ ಭಕ್ತರಲ್ಲಿ ಆವರಿಸುತ್ತಿರುವ ಆತಂಕವನ್ನು ಗಮನಿಸಿ, ಸೋಮವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಹೆಲ್ತತ ಬುಲೆಟಿನ್ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಮಲ್ಲಣ್ಣ ಮೂಲಿಮನಿ ಹಾಗೂ ಇತರ ವೈದ್ಯರಿಂದ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.
ಸಿದ್ದರಾಮಯ್ಯ ಭೇಟಿ
ಇನ್ನು ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಹೀಗಿರುವಾಗ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂಬಿ ಪಾಟೀಲ್ ಕೂಡಾ ಶ್ರೀಗಳನ್ನು ನೋಡಲು ಆಗಮಿಸಲಿದ್ದಾರೆ.
ಇದನ್ನೂ ಓದಿ: Telangana: ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಅಮ್ಮನೂ ಪಾಸ್, ಮಗಳೂ ಪಾಸ್! ಒಟ್ಟಿಗೆ ಸಾಧನೆ ಮಾಡಿದ ತಾಯಿ-ಮಗಳು!
ಡಿಸೆಂಬರ್ 30ರಂದು ದರ್ಶನ ನೀಡಿದ್ದ ಶ್ರೀಗಳು
ಅನಾರೋಗ್ಯದ ಹಿನ್ನೆಲೆ ಭಕ್ತರು ಆತಂಕಕ್ಕೆ ಒಳಗಾಗಗಿರುವ ಹಿನ್ನೆಲೆ ಡಿಸೆಂಬರ್ 30ರಂದು ಮೊದಲ ಮಹಡಿಯಿಂದಲೇ ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಮೊದಲ ಮಹಡಿಯ ಗೋಡೆ ತೆರವು ಮಾಡಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವೀಲ್ ಚೇರ್ನಲ್ಲಿಯೇ ಬಂದ ಸ್ವಾಮೀಜಿಗಳ ಭಕ್ತರಿಗೆ ದರ್ಶನ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ