• Home
  • »
  • News
  • »
  • state
  • »
  • Siddeshwar Swamiji: ಅವತಾರ ಮುಗಿಸಿದ 'ಸರಳ ಸಂತ', ಸಿದ್ದೇಶ್ವರ ಸ್ವಾಮೀಜಿ ಇಚ್ಛೆಯಂತೆ ಅಗ್ನಿಸ್ಪರ್ಶ; ಜ್ಞಾನಯೋಗಾಶ್ರಮದಲ್ಲೀಗ ನೀರವ ಮೌನ!

Siddeshwar Swamiji: ಅವತಾರ ಮುಗಿಸಿದ 'ಸರಳ ಸಂತ', ಸಿದ್ದೇಶ್ವರ ಸ್ವಾಮೀಜಿ ಇಚ್ಛೆಯಂತೆ ಅಗ್ನಿಸ್ಪರ್ಶ; ಜ್ಞಾನಯೋಗಾಶ್ರಮದಲ್ಲೀಗ ನೀರವ ಮೌನ!

ಸಿದ್ದೇಶ್ವರ ಸ್ವಾಮೀಜಿ ಸಂಗ್ರಹ ಚಿತ್ರ

ಸಿದ್ದೇಶ್ವರ ಸ್ವಾಮೀಜಿ ಸಂಗ್ರಹ ಚಿತ್ರ

ಸಿದ್ದೇಶ್ವರ ಸ್ವಾಮೀಜಿ ಅವರು ವಿಲ್‌ನಲ್ಲಿ (Will) ಬರೆದಿರುವಂತೆ ಮಣ್ಣು ಮಾಡುವ ಬದಲು, ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ (Jnana Yogashrama) ಆವರಣದಲ್ಲಿಯೇ ಸಿದ್ದೇಶ್ವರ ಸ್ವಾಮೀಜಿ ಅಂತ್ಯಸಂಸ್ಕಾರ ನಡೆಯಿತು.

  • News18 Kannada
  • 4-MIN READ
  • Last Updated :
  • Karnataka, India
  • Share this:

ವಿಜಯಪುರ: ನಡೆದಾಡುವ ಸಂತ, ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Shri Siddeshwar Swamiji) ಅಂತ್ಯಕ್ರಿಯೆ (Funeral) ನಡೆದಿದೆ. ಅವರು ವಿಲ್‌ನಲ್ಲಿ (Will) ಬರೆದಿರುವಂತೆ ಮಣ್ಣು ಮಾಡುವ ಬದಲು, ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ವಿಜಯಪುರದ (Vijayapur) ಜ್ಞಾನ ಯೋಗಾಶ್ರಮದ (Jnana Yogashrama) ಆವರಣದಲ್ಲಿಯೇ ಸಿದ್ದೇಶ್ವರ ಸ್ವಾಮೀಜಿ ಅಂತ್ಯಸಂಸ್ಕಾರ ನಡೆಯಿತು. ಇಂದು ಬೆಳಗ್ಗೆಯಿಂದ ವಿಜಯಪುರ ಸೈನಿಕ ಶಾಲೆ (Militery School) ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವ (government honors) ಸಲ್ಲಿಸಲಾಯಿತು. ಕಳೆದ 8 ವರ್ಷಗಳ ಹಿಂದೆ, ಅಂದರೆ 2014ರಲ್ಲಿಯೇ ತಮ್ಮ ಅಂತ್ಯಸಂಸ್ಕಾರದ ಕುರಿತಂತೆ ಸಿದ್ದೇಶ್ವರರು ವಿಲ್‌ನಲ್ಲಿ ಬರೆದಿದ್ದರು. “ನನ್ನನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು, ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ, ಶ್ರಾದ್ಧೀಯ ಕರ್ಮಗಳನ್ನು ಮಾಡುವಂತಿಲ್ಲ“ ಅಂತ ಬರೆದಿದ್ದರು. ಅದರ ಪ್ರಕಾರವೇ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯ್ತು.


ನಿನ್ನೆ ಅವತಾರ ಮುಗಿಸಿದ್ದ ಅವತಾರ ಪುರುಷ


ಸಿದ್ದೇಶ್ವರ ಶ್ರೀಗಳಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಆಶ್ರಮದಲ್ಲೇ ವಿಶೇಷ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಅವರು ಮೃತಪಟ್ಟಿದ್ದಾರೆ ಅಂತ ಆಶ್ರಮದ ಮೂಲಗಳು ಪ್ರಕಟಣೆ ಹೊರಡಿಸಿದ್ದವು.




ಅಗ್ನಿಸ್ಪರ್ಶ ಮಾಡುವಂತೆ ತಿಳಿಸಿದ್ದ ಸ್ವಾಮೀಜಿಗಳು


ಸರಳವಾಗಿಯೇ ಬದುಕಿ ಬಾಳಿದ್ದ ಸಿದ್ದೇಶ್ವರ ಶ್ರೀಗಳು ಮರಣದಲ್ಲೂ ಶ್ರೀಗಳು ಸರಳತೆ ಮೆರೆದಿದ್ದಾರೆ. ನನ್ನನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು, ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ, ಶ್ರಾದ್ಧೀಯ ಕರ್ಮಗಳನ್ನು ಮಾಡುವಂತಿಲ್ಲ ಅಂತ 2014ರಲ್ಲಿಯೇ ವಿಲ್ ಬರೆದಿದ್ದಾರಂತೆ. ಅಲ್ಲದೇ ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಅಂತ ಹೇಳಿದ್ದರಂತೆ. ಅದರಂತೆ ಇಂದು ಅಗ್ನಿಸ್ಪರ್ಶ ಮಾಡಲಾಯಿತು.


ಇದನ್ನೂ ಓದಿ: Siddeshwar Swamiji: ಬಿಳಿ ಬಟ್ಟೆಯೇ ಶೃಂಗಾರ, ಜೇಬು ಇಲ್ಲದ ಫಕೀರ! 'ಜ್ಞಾನಯೋಗಿ' ಸಿದ್ದೇಶ್ವರರ ಹೆಜ್ಜೆ ಗುರುತು ಇಲ್ಲಿವೆ


ಅಂತಿಮ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಭಾಗಿ


ಇಂದು ಮುಂಜಾನೆಯಿಂದಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸೈನಿಕ ಮೈದಾನದಲ್ಲಿ ಸರ್ಕಾರದ ವತಿಯಿಂದ ಸಕಲ ಗೌರವಗಳನ್ನ ಸಮರ್ಪಿಸಿದ್ರು. ಆಮೇಲೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಟ್ರು. ಸಂಜೆ ಅಂತಿಮಯಾತ್ರೆಗೆ ಅಲಂಕೃತ ವಾಹನಕ್ಕೆ ಜ್ಞಾನ ಶರೀರವನ್ನ ಇಟ್ಟು ಮೆರವಣಿಗೆ ಹೊರಟ್ರು. ಸಂಜೆ 5.35ಕ್ಕೆ ಅಂತಿಮ ಮೆರವಣಿಗೆ ಶುರುವಾಯ್ತು. ಮೆರವಣಿಗೆಯಲ್ಲಿ ಮೈದಾನದಲ್ಲಿದ್ದ ಲಕ್ಷಾಂತರ ಭಕ್ತರು ಭಾಗಿಯಾದ್ರು.




ಚಿತೆಗೆ ಶ್ರೀಗಂಧದ ತುಂಡುಗಳ ಬಳಕೆ


ಇನ್ನೊಂದ್ಕಡೆ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರರ ಆಜ್ಞೆಯಂತೆ ಅಗ್ನಿಸ್ಪರ್ಶಕ್ಕೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ತಿದ್ರು. ಶ್ರೀಗಳ ಅಗ್ನಿಸ್ಪರ್ಶಕ್ಕೆ ವಿಶೇಷವಾಗಿ ಭಕ್ತರು, ಅನೇಕ ಮಠಾಧೀಶರುಗಳು ಕಳಿಸಿದ್ದ ಶ್ರೀಗಂಧದ ಮರದ ತುಂಡುಗಳನ್ನಿಟ್ಟು ರೆಡಿಮಾಡಿಕೊಂಡ್ರು. ಸಂಜೆ ಸೂರ್ಯಾಸ್ತಕ್ಕೂ ಮುನ್ನ ಶ್ರೀಗಳ ಜ್ಞಾನ ಶರೀರದ ಮೆರವಣಿಗೆ ಸೈನಿಕ​ ಮೈದಾನದಿಂದ ಸಾಗ್ತಾಬಂತು.. ದಾರಿಯುದ್ಧಕ್ಕೂ ಲಕ್ಷಾಂತರ ಭಕ್ತರು ಯಾತ್ರೆಯಲ್ಲಿದ್ರು. ಕೈಮುಗಿದು ಕಣ್ಣೀರು ಹಾಕ್ತಿದ್ರು.


ಹಿರಿಯ ಶ್ರೀಗಳಿಂದ ಸಿದ್ಧತೆ ಪರಿಶೀಲನೆ


ಸಂಜೆ 6.30 ನಿಮಿಷ ಕಳೆದ್ರೂ ಆಶ್ರಮ ತಲುಪೋದಕ್ಕೆ ಆಗಲಿಲ್ಲ.. ಯಾಕಂದ್ರೆ ಇಡೀ ವಿಜಯಪುರದ ರಸ್ತೆ ರಸ್ತೆಗಳಲ್ಲೂ ಲಕ್ಷಾಂತರ ಭಕ್ತರು ನಿಂತಿದ್ರು. ಸರ್ಕಲ್​ಗಳಲ್ಲಿ, ಕಟ್ಟಡಗಳ ಮೇಲೆ, ವಾಹನಗಳ ಮೇಲೆಲ್ಲಾ ಜನವೋ ಜನ.. ಅಂತಿಮ ಯಾತ್ರೆ ತಡವಾಗ್ತಿದೆ ಅಂತ ಗೊತ್ತಾದ್ಮೇಲೆ ಈಕಡೆ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳಾಗ್ತಿತ್ತು. ಸುತ್ತೂರು ಶ್ರೀಗಳು ಬಂದು ಅಂತಿಮ ವಿಧಿವಿಧಾನದ ಬಗ್ಗೆ ಪರಿಶೀಲಿಸಿದ್ರು. ಸಿರಿಗೆರೆ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ಅಗ್ನಿಕುಂಡಕ್ಕೆ ನಮಿಸಿದ್ರು.




ಗಣ್ಯರಿಂದ ಅಂತಿಮ ನಮನ


ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸೇರಿ ಹಲವರು ಅಗ್ನಿಕುಂಡಕ್ಕೆ ಕರ್ಪೂರ ಇಟ್ಟು ನಮಿಸಿದ್ರು.  ಜ್ಞಾನಯೋಗಾಶ್ರಮಕ್ಕೆ ಅಂತಿಮಯಾತ್ರೆ ಬರೋದಕ್ಕೆ ರಾತ್ರಿ 7 ಗಂಟೆ 50 ನಿಮಿಷ ಆಯ್ತು. ದಾರಿಯುದ್ದಕ್ಕೂ ಜನ ದೀಪಗಳನ್ನ ಹಿಡಿದು ಭಕ್ತಿಭಾವ ತೋರಿಸಿದ್ರು. ಹೂಮಳೆ ಸುರಿಸಿ ದೇವರಿಗೆ ನಮನ ಸಲ್ಲಿಸಿದ್ರು.


ಇದನ್ನೂ ಓದಿ: Siddeshwar Swamiji: ಪದ್ಮಶ್ರೀ ತಿರಸ್ಕಾರ, ಡಾಕ್ಟರೇಟ್ ಸ್ವೀಕರಿಸಲು ನಕಾರ! ಪ್ರವಚನಗಳ ಮೂಲಕ ಬದುಕಲು ಕಲಿಸಿದ ಸಿದ್ದೇಶ್ವರ ಶ್ರೀಗಳು


ಜ್ಞಾನಯೋಗಾಶ್ರಮದ ಅಧ್ಯಕ್ಷರಿಂದ ಅಗ್ನಿಸ್ಪರ್ಶ


ರಾತ್ರಿ 8 ಗಂಟೆಗೆ ಸಿದ್ದೇಶ್ವರ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಬಳಿಗೆ ಜ್ಞಾನ ಶರೀರವನ್ನ ತರಲಾಯ್ತು. ಆಶ್ರಮದ ಸಂಪ್ರದಾಯದಂತೆ ಅಂತಿಮ ಪೂಜೆ-ಪುನಸ್ಕಾರಗಳನ್ನ ನೆರವೇರಿಸಿದ್ರು. ರಾತ್ರಿ ಸಿದ್ದೇಶ್ವರ ಗುರುಗಳಿದ್ದ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗಸ್ವಾಮೀಜಿಗಳಿಂದ ನಡೆದಾಡುವ ಯೋಗಿ, ಕಾಯಕಯೋಗಿ, ಜ್ಞಾನಯೋಗಿಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೆರವೇರಿತು.

Published by:Annappa Achari
First published: