ಕಾಂಗ್ರೆಸ್​​ಗೆ ಹಿನ್ನಡೆಯಾದ್ರೆ ಬಡವರಿಗೆ ಹಿನ್ನಡೆ; ಗಟ್ಟಿಯಾಗಿ ಧ್ವನಿ ಎತ್ತಿ: ಕಾರ್ಯಕರ್ತರಿಗೆ ಸಿದ್ಧರಾಮಯ್ಯ ಕರೆ

ಕಾರ್ಯಕರ್ತರು ಈ ಬಗ್ಗೆ ಜೋರಾಗಿ‌ ಮಾತನಾಡಬೇಕು. ಆಗ‌‌ ಮಾತ್ರ ಬಿಜೆಪಿಯವರು ‌ಸುಮ್ಮನಾಗುತ್ತಾರೆ. ಕಾಂಗ್ರೆಸ್​​ಗೆ ಹಿನ್ನಡೆಯಾದ್ರೆ ಬಡವರಿಗೆ ಹಿನ್ನಡೆ ಯಾಗುತ್ತದೆ. ನಮ್ಮ ಸಿದ್ಧಾಂತವನ್ನು ನಾವು ಹೇಳಬೇಕು. ಬಿಜೆಪಿಯವರೇ ಇದಕ್ಕೆ ಸ್ಪಷ್ಟನೆ ಕೊಡಬೇಕು

ಕಾಂಗ್ರೆಸ್​ ಸಂಸ್ಥಾಪನಾ ದಿನ

ಕಾಂಗ್ರೆಸ್​ ಸಂಸ್ಥಾಪನಾ ದಿನ

  • Share this:
ಬೆಂಗಳೂರು (ಡಿ. 28): ‘ನಾನು ದನದ ಮಾಂಸ ತಿನ್ನುತ್ತೇನೆ’. ಆಹಾರ ಪದ್ಧತಿ ನನ್ನ ಹಕ್ಕು. ನಾನು ವಿಧಾನ ಸಭೆಯಲ್ಲಿ ಕೂಡ ಹೇಳಿದ್ದೆ. ಸಂದರ್ಭ ಬಂದರೆ ತಿನ್ನುತ್ತೇನೆಂದು ಹೇಳಿದ್ದೆ . ಅದನ್ನು ಕೇಳೊಕೆ ನೀವು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  ಗೋಮಾತೆಯನ್ನು ಪೂಜಿಸಿ ತಾಯಿ ಎನ್ನುತ್ತಾರೆ. ಬಿಜೆಪಿಯವರು ಗೋಹತ್ಯೆ ಮಸೂದೆ ತಂದಿದ್ದಾರೆ. ವಯಸ್ಸಾದ ಹಸು ಇಟ್ಟುಕೊಂಡು ಏನು ಮಾಡಬೇಕು. ಸಾಕಲು ಬಿಜೆಪಿಯವರು ಹಣ ಕೊಡುತ್ತಾರಾ. ನಮ್ಮವರು ಇದನ್ನು ಗಟ್ಟಿಯಾಗಿ ಮಾತಾಡಿಲ್ಲ. ಕಾರ್ಯಕರ್ತರು ಈ ಬಗ್ಗೆ ಜೋರಾಗಿ‌ ಮಾತನಾಡಬೇಕು. ಆಗ‌‌ ಮಾತ್ರ ಬಿಜೆಪಿಯವರು ‌ಸುಮ್ಮನಾಗುತ್ತಾರೆ. ಕಾಂಗ್ರೆಸ್​​ಗೆ ಹಿನ್ನಡೆಯಾದ್ರೆ ಬಡವರಿಗೆ ಹಿನ್ನಡೆ ಯಾಗುತ್ತದೆ. ನಮ್ಮ ಸಿದ್ಧಾಂತವನ್ನು ನಾವು ಹೇಳಬೇಕು. ಬಿಜೆಪಿಯವರೇ ಇದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಅವರು ಆಗ್ರಹಿಸಿದರು. ನಾವು ಗಾಂಧಿ ಹಿಂದುತ್ವವಾದಿ, ಬಿಜೆಪಿ ಸಾರ್ವಕರ್​ ಹಿಂದುತ್ವವಾದಿಗಳು

ಕಾಂಗ್ರೆಸ್​ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ಹಿಂದುತ್ವ ಬಿಜೆಪಿ ಸ್ವತ್ತು ಅಲ್ಲ. ದೇಶಕ್ಕೆ ಇವರ ಕಾಣಿಕೆ ಏನು ಇಲ್ಲ. ಪ್ರಾಣ ಆಸ್ತಿ ಕಳೆದುಕೊಂಡಿದರೆ ಅದು ಕಾಂಗ್ರೆಸಿಗರು ಮಾತ್ರ. ಇವರು ಇಂಗ್ಲೀಷ್ ಅವರಿಗೆ ಮುಚ್ಚಳಿಕೆ ಬರೆದುಕೊಟ್ಟರು. ಬಿಜೆಪಿ ಅವರು ಸಾರ್ವಕರ್ ಹಿಂದುತ್ವ ವಾದಿಗಳು. ನಾವು ಗಾಂಧಿ ಹಿಂದುತ್ವ ವಾದಿಗಳು ಎಂದರು.

ಇದನ್ನು ಓದಿ: ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ನಿರ್ಧಾರ; ವಿರೋಧಕ್ಕೆ ಸಚಿವ ಮಾಧುಸ್ವಾಮಿ ಅಚ್ಚರಿ

ಪಕ್ಷದ ಸಿದ್ದಾಂತ ತಿಳಿಯಿರಿ; ಯುವಕರಿಗೆ ಕರೆ

ಸಿದ್ದಾಂತ ಗೊತ್ತಿಲ್ಲದೆ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ನಲ್ಲಿ ಎಷ್ಟೋ ಜನರಿಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ. ಯುವಕರು ಕಾಂಗ್ರೆಸ್ ಪಕ್ಷ ಸಿದ್ದಾಂತ ಬಗ್ಗೆ ತಿಳಿದು ಕೊಳ್ಳಬೇಕು. ಸಾಮಾಜಿಕ ನ್ಯಾಯದ ಪರ ಇರುವ ಪಕ್ಷ ಕಾಂಗ್ರೆಸ್ಈ.  ಬಗ್ಗೆ ಎಲ್ಲರೂ ತಿಳಿದುಕೊಳ್ಳುಬೇಕು. ಬಿಜೆಪಿ ಡೋಂಗಿತನ, ಸೋಗಲಾಡಿತನ ಜನರ ಮುಂದೆ ಹೇಳಬೇಕು. ನಮ್ಮ ವಿಚಾರಗಳಲ್ಲಿ ಬದ್ಧತೆ ಇರಬೇಕು. ಈಶ್ವರಪ್ಪ ಗೆ ಸಂವಿಧಾನ 73,74 ತಿದ್ದುಪಡಿ ಗೊತ್ತಿಲ್ಲ.  ಅವರು ಈಗ ಮಾತನಾಡುತ್ತಾರೆ ಎಂದು ಇದೇ ವೇಳೆ ಟೀಕಿಸಿದರು.
Published by:Seema R
First published: