ಸಿಎಂ ಆಗಬೇಕೆಂಬ ಹುಚ್ಚು ಎಲ್ಲರಿಗೂ ಇರುತ್ತೆ ಅಂದ್ರು Zameer Ahmed Khan: ಸಂಡೇ ಕೂಲ್ ಆಗಿರಬೇಕೆಂದ್ರು Siddaramaiah

ಕುಮಾರಸ್ವಾಮಿಗೆ ಯಾವ ಹುಚ್ಚು ಇರೋದು..? ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇರೋದು. ಅವರೇನೂ ಜನಸೇವೆ ಮಾಡಬೇಕು ಅಂತಾ ಇದೀಯಾ?  ಅವರಿಗೂ ಸಿಎಂ ಆಗಬೇಕು‌ ಅಂತಾಲೇ ಹುಚ್ಚು ಇರೋದು.  ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತೆ.

ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್

ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್

  • Share this:
ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಗೆ ಸಿಎಂ ಆಗಬೇಕು ಎಂಬ ಹುಚ್ಚು ಇದೆ ಎಂದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್ (MLA Zameer Ahmed Khan)  ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಗೆ ಯಾವ ಹುಚ್ಚು ಇರೋದು..? ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇರೋದು. ಅವರೇನೂ ಜನಸೇವೆ ಮಾಡಬೇಕು ಅಂತಾ ಇದೀಯಾ?  ಅವರಿಗೂ ಸಿಎಂ ಆಗಬೇಕು‌ ಅಂತಾಲೇ ಹುಚ್ಚು ಇರೋದು.  ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತೆ. ಸಿ.ಎಂ. ಇಬ್ರಾಹಿಂ (MLC CM Ibrahim)ಪಕ್ಷ ಬಿಡಲ್ಲ,  ಕಾಂಗ್ರೆಸ್ ನಲ್ಲಿ ಇರ್ತಾರೆ.  ನಾನೂ ಇಬ್ರಾಹಿಂ ಅವರರನ್ನು ಭೇಟಿ ಆಗುತ್ತೇನೆ ಎಂದರು. ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್(Congress) 3ನೇ ಸ್ಥಾನಕ್ಕೆ  ಬರಲಿದೆ ಎಂಬ ಇಬ್ರಾಹಿಂ ಹೇಳಿಕೆ ಗೆ ಜಮೀರ್ ಅಹ್ಮದ್ ಟಾಂಗ್ ನೀಡಿದರು. ಯಾರು ಯಾವ ಸ್ಥಾನಕ್ಕೆ ಬರಬೇಕು ಅನ್ನೋದನ್ನು ಮತದಾರರು ನಿರ್ಧಾರ ಮಾಡ್ತಾರೆ ಎಂದು ತಿರುಗೇಟು ನೀಡಿದರು.

ಪರಿಷತ್ ವಿಪಕ್ಷ ನಾಯಕರಾಗಿ ಅಲ್ಪಸಂಖ್ಯಾತರನ್ನ ಮಾಡಬೇಕಿತ್ತು. ಆದ್ರೆ ಆಗಲಿಲ್ಲ. ಈ ಸಂಬಂಧ ನಮಗೂ ಸಹ ನೋವು ಇದೆ ನಾವು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದೇವು, ಆದ್ರೆ ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ತೀರ್ಮಾನ ಮಾಡಿಬಿಟ್ಟಿದೆ. ನಾನು‌ ಊರಲ್ಲಿ ಇರಲಿಲ್ಲ, ನಾನು‌ ಅವರನ್ನ ಭೇಟಿಯಾಗಿ ಮಾತುಕತೆ ನಡೆಸ್ತೀನಿ‌ ಈಗಾಗಲೇ ನಮ್ಮ ನಾಯಕರಾದ ಸಿದ್ದರಾಮಯ್ಯ ಕೂಡ ಇಬ್ರಾಹಿಂ ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಕನಸು ಇದೆ ಅಂತ ಕುಮಾರಸ್ವಾಮಿ ಹೇಳಿಕೆಯ ಇವತ್ತಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಓ  ಆ. ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ.. ನಾನು ಹಿಜಾಬ್ ಬಗ್ಗೆ ಮಾತನಾಡಿದ್ದು ನಿಜ, ಆದ್ರೆ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರು ಯಾರು ನನ್ನ ಬಗ್ಗೆ ಮಾತನಾಡೋಕೆ ಎಂದು ಕಿಡಿಕಾರಿದರು.

ಇದನ್ನೂ ಓದಿ:  Hijab ಗಲಾಟೆಯಲ್ಲಿ ಭಯೋತ್ಪಾದಕ, ಉಗ್ರ ಸಂಘಟನೆಗಳ ಕೈವಾಡ: MP Renukacharya ಹೇಳಿಕೆ

ಅವರದ್ದು ಒಂದು ರಾಜಕೀಯ ಪಕ್ಷದ ನಾಯಕರು ನಾನು ಅವರ ಬಗ್ಗೆ ಮಾತನಾಡಲ್ಲ. ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ. ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡೋದಿಲ್ಲ. ನಾನು ಹಿಜಾಬ್ ಬಗ್ಗೆ ಮಾತನಾಡಿದ್ದು ಆದ್ರೆ ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ ಎಂದು.

ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯಲ್ಲ

ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ. ಅವನು ಎಲ್ಲೂ ಹೋಗಲ್ಲ ಅನ್ನೋ ವಿಶ್ವಾಸವಿದೆ. ಮಹದೇವಪ್ಪ ಅವರ ಜತೆ ಮಾತನಾಡಿದ್ದಾರೆ. ವಿಪಕ್ಷ ಸ್ಥಾನ ಸಿಗಲಿಲ್ಲ ಎಂದು ಬೇಸರದಲ್ಲಿದ್ದಾರೆ. ಕೋಪ ಕಡಿಮೆ ಆದ ಮೇಲೆ ಭೇಟಿ ಮಾಡ್ತೀನಿ. ಅವನು ನನ್ನ ಸ್ನೇಹಿತ ಬಿಡ್ರಿ ಎಂದು ಹಳೆ ಮಾತನ್ನು ಪುನರುಚ್ಚಿಸಿದರು.

ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ನೆಮ್ಮದಿಯಾಗಿಲ್ಲ ಎಂಬ ಇಬ್ರಾಹಿಂ ಹೇಳಿಕೆಗೂ ಪ್ರತಿಕ್ರಿಯೆ ನೀಡಿದರು. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಬಿಡಿ. ಅವರು ಏನಾದ್ರು ಮಾಡ್ಲಿ ಸಂಬಂಧ ಇಲ್ಲ. ವೀರೇಂದ್ರ ಪಾಟೀಲ್ ಜೊತೆ ಕಾಂಗ್ರೆಸ್ ಜೊತೆ ಹೋಗಿದ್ದ, ಆಗ ನಾನು ಕಾಂಗ್ರೆಸ್ ನಲ್ಲಿ ಇರಲಿಲ್ಲ. ನಾನು ಆಗ ಇಲ್ಲ ಅಂದ್ಮೇಲೆ‌ ನಾನೇಕೆ ಆಗಿನ ಘಟನೆ ಬಗ್ಗೆ ಮಾತಾಡಲಿ.

ಇದನ್ನೂ ಓದಿ:  Hijab Controversy: ಹಿಜಾಬ್ ವಿವಾದಕ್ಕೆ ಸರ್ಕಾರದಿಂದ ಸಮವಸ್ತ್ರ ಅಸ್ತ್ರ; ವಿದ್ಯಾರ್ಥಿಗಳ ಸಹಿಯುಳ್ಳ ತಿಳುವಳಿಕೆ ಪತ್ರ ವೈರಲ್

ನಾನು ಯಾವಗಲೂ ಕೂಲ್ ಆಗಿರುತ್ತೇನೆ

ಸಂಡೇ ಕೂಲ್ ಆಗಿಯೇ ಇರಬೇಕಲ್ಲವಾ.!? ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ. ನಾನು ತಲೆಕೆಡಿಸಿಕೊಳ್ಳೋದು ಯಾವಾಗ ಅಂದ್ರೆ ಸಮಾಜದಲ್ಲಿ ಡಿಸ್ಟರ್ಬ್ ಆದಾಗ  ಮಾತ್ರ.  ಇಲ್ಲ ಅಂದ್ರೆ ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ ಎಂದು ತಮ್ಮದೇ ಶೈಲಿಯಲ್ಲಿ ನಗೆ ಚಟಾಕಿ ಹಾರಿಸಿದರು.
Published by:Mahmadrafik K
First published: