• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramotsava: ಬಿಜೆಪಿಯಿಂದಲೂ ಬೆಣ್ಣೆನಗರಿಯಲ್ಲಿ ಸಮಾವೇಶಕ್ಕೆ ಪ್ಲಾನ್; ಕಾಂಗ್ರೆಸ್​ಗೆ ಟಕ್ಕರ್

Siddaramotsava: ಬಿಜೆಪಿಯಿಂದಲೂ ಬೆಣ್ಣೆನಗರಿಯಲ್ಲಿ ಸಮಾವೇಶಕ್ಕೆ ಪ್ಲಾನ್; ಕಾಂಗ್ರೆಸ್​ಗೆ ಟಕ್ಕರ್

ದಾವಣಗೆರೆಯಲ್ಲಿ ಬಿಜೆಪಿಯಿಂದಲೂ ಸಮಾವೇಶಕ್ಕೆ ಪ್ಲಾನ್

ದಾವಣಗೆರೆಯಲ್ಲಿ ಬಿಜೆಪಿಯಿಂದಲೂ ಸಮಾವೇಶಕ್ಕೆ ಪ್ಲಾನ್

ಸಿದ್ದರಾಮೋತ್ಸವದಿಂದ ಬಿಜೆಪಿ ಕಂಗೆಟ್ಟಿದೆ. ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಬಿಜೆಪಿ ಕೂಡ ಚಿಂತನೆ ನಡೆಸ್ತಿದೆ. ಸಿದ್ದರಾಮೋತ್ಸವ ನಡೆದ ದಾವಣಗೆರೆಯಲ್ಲೇ ಬಿಜೆಪಿ ಕೂಡ ಸಮಾವೇಶಕ್ಕೆ ಚಿಂತನೆ ನಡೆಸಿದೆ.

  • Share this:

ಸಿದ್ದರಾಮೋತ್ಸವದಿಂದ ರಾಜ್ಯ ಕಾಂಗ್ರೆಸ್​ಗೆ (KPCC) ಚೈತನ್ಯ ಬಂದಿದೆ. ಇಷ್ಟು ದಿನ ಹೊರಗೆ ಕಾಣಿಸ್ತಿದ್ದ ಸಿದ್ದು-ಡಿಕೆಶಿ (Siddaramaiah) ನಡುವಿನ ವೈಮನಸ್ಸು ಬಹುತೇಕ ಸರಿದಿದೆ. ಇಬ್ಬರೂ ಜೊತೆಯಾಗಿ ಕೇಕ್​ ಕಟ್​ ಮಾಡಿ ಒಬ್ಬರಿಗೊಬ್ಬರು ತಿನ್ನಿಸಿದ್ದಾರೆ. ರಾಜ್ಯ ಕಾಂಗ್ರೆಸ್ (Karnataka Congress) ಕಾರ್ಯಕರ್ತರು ಕೂಡ ಇದರಿಂದ ಖುಷಿಯಾಗಿದ್ದಾರೆ. ಮಾತ್ರವಲ್ಲದೇ ಇದನ್ನೇ ಚುನಾವಣೆಗೆ (Election) ರಣೋತ್ಸವ ಅಂತಾನೂ ಬಿಂಬಿಸಲಾಗ್ತಿದೆ. ಕಾಂಗ್ರೆಸ್​ ಹೈಕಮಾಂಡ್​ ಕೂಡ ಕೊಂಚ ನಿಟ್ಟುಸಿರು ಬಿಟ್ಟಿದೆ. ಆದರೆ ಇದೇ ಯಶಸ್ಸು ಕಮಲ ಪಾಳಯಕ್ಕೆ (BJP) ಸಂಕಟ ತಂದೊಡ್ಡಿದೆ. ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಬಿಜೆಪಿ ಕೂಡ ಚಿಂತನೆ ನಡೆಸ್ತಿದೆ. ಸಿದ್ದರಾಮೋತ್ಸವ ನಡೆದ ದಾವಣಗೆರೆಯಲ್ಲೇ (Davanagere) ಬಿಜೆಪಿ ಕೂಡ ಸಮಾವೇಶಕ್ಕೆ ಚಿಂತನೆ ನಡೆಸಿದೆ.


ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬ ಸಿದ್ದರಾಮೋತ್ಸವ ಬಿಜೆಪಿ ಪಾಳಯಕ್ಕೆ ಟೆನ್ಶನ್ ತಂದಿಟ್ಟಿದೆ. ಅದರಲ್ಲೂ ಯಾರೂ ನಿರೀಕ್ಷಿಸದ ರೀತಿಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನ ಆಗಮಿಸಿದ್ದರು. ಹಾಗಾಗಿ ಎಲ್ಲರೂ ಇದನ್ನು ಚುನಾವಣೆಗೆ ರಣಕಹಳೆ ಅಂತಾನೇ ಬಿಂಬಿಸ್ತಿದ್ದಾರೆ.


ಬಿಜೆಪಿಯಿಂದಲೂ ಬೃಹತ್ ಸಮಾವೇಶ?


ಸಿದ್ದರಾಮೋತ್ಸವದಿಂದ ಬೆಚ್ಚಿಬಿದ್ದಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ನಾಯಕರು ಅದರಂತೆ ಸಮಾವೇಶ ನಡೆಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಒಗ್ಗಟ್ಟಿನ ಮಂತ್ರದಿಂದ ಭಯಗೊಂಡು ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಮೆಗಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.


Siddaramostava effect BJP planning convention in Davanagere
ಅಮಿತ್ ಶಾ-ಬಸವರಾಜ ಬೊಮ್ಮಾಯಿ ಮಾತುಕತೆ


ದಾವಣಗೆರೆಯಲ್ಲೇ ಕಾಂಗ್ರೆಸ್​ಗೆ ಟಕ್ಕರ್?


ಸಿದ್ದರಾಮೋತ್ಸವ ನಡೆದ ದಾವಣಗೆರೆಯಿಂದಲೇ ಕಾಂಗ್ರೆಸ್​ಗೆ ಠಕ್ಕರ್ ಕೊಡಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ದಾವಣಗೆರೆಯಲ್ಲೇ ಪಕ್ಷದ ವತಿಯಿಂದ ಅದ್ಧೂರಿ ಕಾರ್ಯಕ್ರಮ ಮಾಡೋ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸರ್ಕಾರದ ಸಾಧನೆ ಹೆಸರಿನಲ್ಲಿ ಪರೋಕ್ಷವಾಗಿ ಶಕ್ತಿ ಪ್ರದರ್ಶನಕ್ಕೆ ಕಮಲ ನಾಯಕರು ನಿರ್ಧರಿಸಿದ್ದಾರೆ.


ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ, ಕಾರ್ಯಕರ್ತರ ರಾಜೀನಾಮೆ ಶಾಕ್! ಬಸವರಾಜ ಬೊಮ್ಮಾಯಿ ಮೇಲೆ ಅಮಿತ್ ಶಾ ಅಸಮಾಧಾನ


ದಾವಣಗೆರೆಯಲ್ಲಿ ಜನೋತ್ಸವ ಮಾಡೋ ಬಗ್ಗೆ ಹಿರಿಯ ನಾಯಕರು ಸಲಹೆ ಕೊಟ್ಟಿದ್ದಾರೆ. ಸಿದ್ದರಾಮೋತ್ಸವಕ್ಕೆ ಬಿಜೆಪಿ ಪರ್ಯಾಯ ಶಕ್ತಿ ಪ್ರದರ್ಶನಕ್ಕೆ ಪ್ಲಾನ್ ನಡೆಯುತ್ತಿದೆ.


ಅಮಿತ್​ ಶಾಗೆ ಸಿದ್ದರಾಮೋತ್ಸವ ವರದಿ


ಸಿದ್ದರಾಮೋತ್ಸವ ಭರ್ಜರಿ ಯಶಸ್ಸಿನ ಬಳಿಕ ರಾಜ್ಯ ಬಿಜೆಪಿ ನಾಯಕರು ಅಮಿತ್ ಶಾಗೆ ಅದರ ವರದಿ ನೀಡಿದ್ದಾರೆ. ಯಡಿಯೂರಪ್ಪ ಕೂಡ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಕೇಳಿಸಿಕೊಂಡ ಅಮಿತ್ ಶಾ, ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸೋಣ ಎಂದಿದ್ದಾರೆ.


Siddaramostava effect BJP planning convention in Davanagere
ಅಮಿತ್​ ಶಾ


20 ನಿಮಿಷಗಳ ಮಾತುಕತೆಯಲ್ಲಿ ಯಡಿಯೂರಪ್ಪ, ಸಿದ್ದರಾಮೋತ್ಸವ  ಸಮಾವೇಶ ಚುನಾವಣಾ ಪ್ರಚಾರದ ದಿಕ್ಕನ್ನು ತೋರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಂಗ್ರೆಸ್ ಕೂಡ ಆ ಜನರನ್ನ ನಿರೀಕ್ಷೆ ಮಾಡಿರಲಿಲ್ಲ. ನಮಗೆ ಪರಿಣಾಮಕಾರಿ ರಾಜಕೀಯ ತಂತ್ರಗಾರಿಕೆ ಅಗತ್ಯ ಇದೆ ಅಂತಾ ಅಮಿತ್ ಶಾಗೆ ತಿಳಿಸಿದ್ದಾರೆ.


ಇದನ್ನೂ ಓದಿ: ‘ಈಗ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿದ್ದೇವೆ, 100ನೇ ವರ್ಷವನ್ನೂ ನಾವೇ ಆಚರಿಸ್ತೇವೆ’


ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ


ಕರ್ನಾಟಕದಲ್ಲಿ ಇತ್ತಿಚೆಗೆ ನಡೆಯುತ್ತಿರೋ ಬೆಳವಣಿಗೆ ಬಗ್ಗೆ ಕಾರ್ಯಕರ್ತರು ಮಾತ್ರವಲ್ಲದೇ ಶಾಸಕರು, ಸಚಿವರು ಕೂಡ ಬೇಸತ್ತಿದ್ದಾರೆ. ಅಮಿತ್ ಶಾ ಭೇಟಿ ವೇಳೆ ಬಿಎಸ್​ವೈ, ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆ ಮಾಡಿ ಅಂತಾ ಸಲಹೆ ಕೊಟ್ಟಿದ್ದಾರೆ. ಪಕ್ಷಕ್ಕೆ ಉತ್ಸಾಹಿ ಕೆಲಸಗಾರರನ್ನ ರಾಜ್ಯಾಧ್ಯಕ್ಷರ ಹುದ್ದೆಗೆ ನೇಮಕ ಮಾಡಿ ಅಂತಾನೂ ಸೂಚಿಸಿದ್ದಾರೆ.


ಹಾಗಾಗಿ ಇದು ನಳೀನ್ ಕಟೀಲ್ ಮತ್ತು ಬಿಜೆಪಿ ಪಾಳಯಕ್ಕೂ ಎಚ್ಚರಿಕೆಯ ಕರಗಂಟೆಯಾಗಿದೆ. ಮತ್ತೊಂದೆಡೆ ಸಿದ್ದರಾಮೋತ್ಸವ ಬಿಜೆಪಿಯ ಆತಂಕ ಹೆಚ್ಚಿಸಿದೆ.


ಸಿದ್ದರಾಮೋತ್ಸವ ಯಶಸ್ವಿಯಿಂದ ಕಂಗೆಟ್ಟಿರುವ ಕಮಲ ಪಾಳಯಕ್ಕೆ ಬೂಸ್ಟರ್​ ಡೋಸ್​ ಬೇಕಿದೆ. ಹೈಕಮಾಂಡ್​ ಕೂಡ ರಾಜ್ಯ ಬಿಜೆಪಿಯ ಮುಂದಿನ ನಿರ್ಧಾರಕ್ಕೆ ಏನು ಹೇಳುತ್ತೋ ಗೊತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಮಾತ್ರ ದಾವಣಗೆರೆಯಲ್ಲೇ ಬೃಹತ್ ಸಮಾವೇಶಕ್ಕೆ ಚಿಂತನೆ ನಡೆಸ್ತಿದೆ.

First published: