• Home
  • »
  • News
  • »
  • state
  • »
  • Siddaramaiah: ನನ್ನನ್ನು ಕಂಡ್ರೆ ಬಿಜೆಪಿ ಅವ್ರಿಗೆ ಹೊಟ್ಟೆ ಕಿಚ್ಚು, ನನ್ನ ಬರ್ತ್ ಡೇ ಕಾರ್ಯಕ್ರಮಕ್ಕೆ ಅವ್ರನ್ನ ಕರೆಯೋದಿಲ್ಲ

Siddaramaiah: ನನ್ನನ್ನು ಕಂಡ್ರೆ ಬಿಜೆಪಿ ಅವ್ರಿಗೆ ಹೊಟ್ಟೆ ಕಿಚ್ಚು, ನನ್ನ ಬರ್ತ್ ಡೇ ಕಾರ್ಯಕ್ರಮಕ್ಕೆ ಅವ್ರನ್ನ ಕರೆಯೋದಿಲ್ಲ

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ನನ್ನ ಮೇಲಿನ ಹೊಟ್ಟೆ ಕಿಚ್ಚಿನಿಂದ ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಆರ್ ಎಸ್ ಎಸ್ ನವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ನಾನ್ಯಾವತ್ತು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ನಾನು ಹುಟ್ಟಿದ ದಿನಾಂಕವೇ ಸರಿಯಾಗಿ ಗೊತ್ತಿಲ್ಲ. ನನ್ನ ಹಿತೈಷಿಗಳು, ಆಪ್ತರು ಸ್ವಾಗತ ಸಮಿತಿ ಮಾಡಿಕೊಂಡು ಮಾಡುತ್ತಿದ್ದಾರೆ

ಮುಂದೆ ಓದಿ ...
  • Share this:

ಬೆಂಗಳೂರು (ಜು.2): ಕರ್ನಾಟಕದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರಿಗೆ 75 ವರ್ಷ ತುಂಬಿದ ಹಿನ್ನೆಲೆ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಸಿದ್ದರಾಮೋತ್ಸವ ನಡೆಸಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಅಗಸ್ಟ್​ 3ರಂದು ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ, (Rahul Gandhi) ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ಕೆ ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು (Congress Leaders) ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇತ್ತ ಸಿದ್ದರಾಮೋತ್ಸವಕ್ಕೆ ಬಗ್ಗೆ ಬಿಜೆಪಿ ನಾಯಕರು (BJP Leadesrs) ವ್ಯಂಗ್ಯ ಮಾಡ್ತಿದ್ದಾರೆ. ಬಿಜೆಪಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ಅವರಿಗೆ ನನ್ನ ಕಂಡ್ರೆ ಹೊಟ್ಟೆ ಕಿಚ್ಚು ಹೀಗಾಗಿ ನನ್ನ ಹುಟ್ಟುಹಬ್ಬದ (Birthday) ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


75 ವರ್ಷ ಅಮೃತ ಮಹೋತ್ಸವ ಇದ್ದಂತೆ


3-8-2022ಕ್ಕೆ ನನಗೆ 75 ವರ್ಷ ತುಂಬುತ್ತಿದೆ ಹೀಗಾಗಿ ನನ್ನ‌ ಸ್ನೇಹಿತರು ಸ್ಪೆಷಲ್ ಕಾರ್ಯಕ್ರಮ ಮಾಡ್ತಿದ್ದಾರೆ. ನನ್ನ ಈ ‌ಡೇಟ್ ಆಫ್ ಬರ್ತ್ ಕೂಡ ಸರಿಯಾಗಿಲ್ಲ.75 ವರ್ಷ ಅಮೃತ ಮಹೋತ್ಸವ ಇದ್ದಂತೆ ಅದಕ್ಕೆ ನಮ್ಮ‌ಸ್ನೇಹಿತರು, ಅಭಿಮಾನಿಗಳು‌ ಮಾಡ್ತಿದ್ದಾರೆ. ನಾನು ಇದನ್ನ ಒಪ್ಪಿಕೊಂಡಿದ್ದೇನೆ. ಇದು ನನ್ನ ಶಕ್ತಿ ಪ್ರದರ್ಶನವಲ್ಲ. 1984 ರಲ್ಲಿ ನಾನು ರಾಜಕೀಯಕ್ಕೆ ಬಂದೆ. ಇದೊಂದು ಜೀವನದಲ್ಲಿ ಮೈಲಿಗಲ್ಲು. ಅದಕ್ಕಾಗಿ ನಾನು ಒಪ್ಪಿಕೊಂಡಿದ್ದೇನೆ ಎಂದು ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ.


ಹೊಟ್ಟೆ ಕಿಚ್ಚಿನಿಂದ ಬಿಜೆಪಿ ವಿರೋಧ ಮಾಡ್ತಿದೆ


ಹೊಟ್ಟೆ ಕಿಚ್ಚಿನಿಂದ ಬಿಜೆಪಿ ಅವರು ವಿರೋಧ ಮಾಡುತ್ತಿದ್ದಾರೆ. ಯಡಿಯೂರಪ್ಪ77ನೇ ಬರ್ತ್ ಡೇ ಮಾಡಿಕೊಂಡ್ರು. ಆಗ ಅವರು ಯಾಕೆ ಮಾಡಿಕೊಂಡ್ರು, ಯಡಿಯೂರಪ್ಪನವರ ಬಗ್ಗೆ ಯಾಕೆ ಕೇಳಲಿಲ್ಲ. ನಾನು ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಶೋಕ್ ದೊಡ್ಡ ದೊಡ್ಡ ಜಾಹಿರಾತು ಕೊಟ್ಟಿದ್ರಲ್ಲ ಅದರ ಬಗ್ಗೆ ನೀವು ಕೇಳ್ರಪ್ಪ ಎಂದು ಬಿಜೆಪಿ ವಿರೋಧಕ್ಕೆ ಸಿದ್ದರಾಮಯ್ಯ ಕಿಡಿಕಾರಿದ್ರು.


ಇದನ್ನೂ ಓದಿ:  Karnataka Assembly Election: ರಾಜ್ಯದಲ್ಲಿ ಇದೇ ಡಿಸೆಂಬರ್‌ನಲ್ಲಿ ಎಲೆಕ್ಷನ್! ತಯಾರಿ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಎಚ್‌ಡಿಕೆ ಕರೆ


ವಿಪಕ್ಷದವರನ್ನ ಕರೆಯುವುದಿಲ್ಲ- ಸಿದ್ದರಾಮಯ್ಯ


ನನ್ನ ಮೇಲಿನ ಹೊಟ್ಟೆ ಕಿಚ್ಚಿನಿಂದ ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಆರ್ ಎಸ್ ಎಸ್ ನವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ನಾನ್ಯಾವತ್ತು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ನಾನು ಹುಟ್ಟಿದ ದಿನಾಂಕವೇ ಸರಿಯಾಗಿ ಗೊತ್ತಿಲ್ಲ. ನನ್ನ ಹಿತೈಷಿಗಳು, ಆಪ್ತರು ಸ್ವಾಗತ ಸಮಿತಿ ಮಾಡಿಕೊಂಡು ಮಾಡುತ್ತಿದ್ದಾರೆ. ಆರ್ ವಿ ದೇಶಪಾಂಡೆ ಸ್ವಾಗತ ಸಮಿತಿ ಅಧ್ಯಕ್ಷರಿದ್ದಾರೆ, ವಿಪಕ್ಷದವರನ್ನ ಕರೆಯುವುದಿಲ್ಲ, ಸ್ವಾಗತ ಸಮಿತಿಯವರು ಯಾರನ್ನು ಕರೆಯುತ್ತಾರೋ ಗೊತ್ತಿಲ್ಲ. ಯಾರ ವಿರುದ್ಧ ಶಕ್ತಿ ಪ್ರದರ್ಶನವೂ ಅಲ್ಲ ಮಾಧ್ಯಮಗಳ ವಿಶ್ಲೇಷಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಸಿದ್ದರಾಮೋತ್ಸವಕ್ಕೆ ಬಿಜೆಪಿ ವಿರೋಧ


ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬಹಳ ಶಕ್ತಿಶಾಲಿ ಎಂದು ಜನ ಭಾವಿಸಿದ್ದ ಕಾಲಘಟ್ಟ ಇತ್ತು. ಆದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಮತ್ತು ಸಿದ್ದರಾಮಯ್ಯನವರ ಜನ್ಮ ದಿನೋತ್ಸವವನ್ನು ಸಿದ್ದರಾಮೋತ್ಸವ ಎಂಬಂತೆ ಅವರೇ ಆಚರಿಸಿ ಕಾಂಗ್ರೆಸ್ ಹೈಕಮಾಂಡ್‍ಗೆ ಒಂದು ಸಂದೇಶ ಕಳುಹಿಸುತ್ತಿದ್ದಾರೆ.


ಇದನ್ನೂ ಓದಿ:  Chitradurga: ರಾಹುಲ್ ಗಾಂಧಿಯನ್ನು ಹೆದರಿಸಲು ಬಿಜೆಪಿ ತಂತ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರೋಪ


ನಾಯಿ ಬಾಲ ಅಲ್ಲಾಡಿಸುವುದು ಸಹಜ ಪ್ರಕ್ರಿಯೆ. ಬಾಲವೇ ನಾಯಿಯನ್ನು ಅಲ್ಲಾಡಿಸುವುದು ಅಸಹಜ ಪ್ರಕ್ರಿಯೆ. ಬಹುಶಃ ಕಾಂಗ್ರೆಸ್ ಹೈಕಮಾಂಡ್ ತನ್ನನ್ನು ಕರ್ನಾಟಕದ ಮುಂದಿನ ನಾಯಕ ಎಂದು ಪ್ರಕಟಿಸಲು ಒತ್ತಡ ಹೇರುವುದು, ಕಾಂಗ್ರೆಸ್ಸನ್ನು ಬೆಳೆಸಿ ಪೋಷಿಸಿದವರನ್ನು ದೂರ ಮಾಡಿ ಮತ್ತು ಡಾ. ಪರಮೇಶ್ವರ್ ಅವರನ್ನು ದೂರ ಮಾಡಿದಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರನ್ನು ದೂರವಿಡುವ ರಾಜಕೀಯದ ಕುತ್ಸಿತತನ ಇದರಲ್ಲಿ ಇದ್ದಂತೆ ಕಾಣುತ್ತಿದೆ ಎಂದು ಹೇಳಿದ್ರು.

Published by:Pavana HS
First published: