‘ಸೋಮಶೇಖರ್​​ ರೆಡ್ಡಿ ಬಂಧಿಸದೆ ಜಮೀರ್​​ ಬಂಧಿಸಿರುವುದು ಖಂಡನೀಯ: ಸಿದ್ದರಾಮಯ್ಯ

ಅದರಂತೆಯೇ ಇಂದು ಜಮೀರ್​ ಸೋಮಶೇಖರ್​ ಮನೆಗೆ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾದ ಕಾರಣಕ್ಕೆ ಜಮೀರ್​ ಮತ್ತವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ಧಾರೆ.

news18-kannada
Updated:January 13, 2020, 4:16 PM IST
‘ಸೋಮಶೇಖರ್​​ ರೆಡ್ಡಿ ಬಂಧಿಸದೆ ಜಮೀರ್​​ ಬಂಧಿಸಿರುವುದು ಖಂಡನೀಯ: ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬೆಂಗಳೂರು(ಜ.13): ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಕೋಮುದ್ವೇಷ ಕೆರಳಿಸಿದ್ದ ಶಾಸಕ ಸೋಮಶೇಖರ ರೆಡ್ಡಿಯವರನ್ನು ಬಂಧಿಸಬೇಕಿದ್ದ ಬಿಜೆಪಿ ಸರ್ಕಾರ ಶಾಸಕ ಜಮೀರ್​​ ಜಮೀರ್​ ಅಹ್ಮದ್​​ರನ್ನು ಬಂಧಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಸಿದ್ದರಾಮುಯ್ಯ, ಬಿಜೆಪಿ ಸರ್ಕಾರ ಸೋಮಶೇಖರ್​​ ಬಂಧನ ಮಾಡಬೇಕಿತ್ತು. ಇವರ ಬದಲಿಗೆ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ನಮ್ಮ ಶಾಸಕ ಜಮೀರ್​ ಅಹಮ್ಮದ್​​ ಬಂಧಿಸಲಾಗಿದೆ. ಇದು ಖಂಡನೀಯ ಮತ್ತವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಪೌರತ್ವ ಕಾಯ್ದೆ ಜಾಗೃತಿ ಅಭಿಯಾನದಲ್ಲಿ ಮುಸ್ಲಿಮರ ವಿರುದ್ಧ ಬಿಜೆಪಿ ಶಾಸಕ ಸೋಮಶೇಖರ್​​ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇವರನ್ನು ಬಂಧಿಸುವಂತೆ ಕಾಂಗ್ರೆಸ್​ ಸೇರಿದಂತೆ ಹಲವರು ಒತ್ತಾಯಿಸಿದ್ದರು. ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್​ ಅಂತೂ ಬಳ್ಳಾರಿಗೇ ಬರುತ್ತೇನೆ, ಅದೇನು ಮಾಡ್ತೀರೋ ಮಾಡಿ ಎಂದು ಸೋಮಶೇಖರ್​​ ರೆಡ್ಡಿ ವಿರುದ್ಧ ಗುಡುಗಿದ್ದರು.

ಅದರಂತೆಯೇ ಇಂದು ಜಮೀರ್​ ಸೋಮಶೇಖರ್​ ಮನೆಗೆ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾದ ಕಾರಣಕ್ಕೆ ಜಮೀರ್​ ಮತ್ತವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ಧಾರೆ.

ಇದನ್ನೂ ಓದಿ: ನುಡಿದಂತೆ ಬಳ್ಳಾರಿಗೆ ಬಂದಿದ್ದೇನೆ, ಎಲ್ಲಿ ನಿನ್ನ ಖಡ್ಗ: ಸೋಮಶೇಖರ್​ ರೆಡ್ಡಿ ಮನೆ ಮುಂದೆ ಜಮೀರ್ ಅಬ್ಬರ, ಬೆನ್ನಲ್ಲೇ ವಶಕ್ಕೆ

ಶಾಸಕ ಸೋಮಶೇಖರ ರೆಡ್ಡಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಪಂಕ್ಚರ್ ಹಾಕುವವರನ್ನು ಕೀಳಾಗಿ ಕಂಡಿದ್ದಾರೆ. ಆದರೆ ಇವರು ರಾಜಕೀಯಕ್ಕೆ ಬರುವ ಮೊದಲು ಏನು ಮಾಡುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಶಿವಾಜಿಯ ಖಡ್ಗ ಹಿರಿದು ಬರುತ್ತೇನೆಂದು ರೆಡ್ಡಿ ಹೇಳುತ್ತಾರೆ. ಆದರೆ ಇವರಿಗೆ ಶಿವಾಜಿಯವರ ಇತಿಹಾಸವೇ ಗೊತ್ತಿಲ್ಲ, ಶಿವಾಜಿಯವರ ಸೈನ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಮುಸ್ಲಿಮರೇ ಆಗಿದ್ದರು. ಅದೇ ರೀತಿ ಅಕ್ಬರ್ ಅವರ ಸೇನಾಧಿಕಾರಿ ಪ್ರತಾಪ್ ಸಿಂಗ್ ಆಗಿದ್ದರು. ನಮ್ಮ ದೇಶದ ಸೌಹಾರ್ದತೆಗೆ ನೂರಾರು ವರ್ಷಗಳ ಹಿನ್ನೆಲೆ ಇದೆ. ಮುಸ್ಲಿಮರು ಪರಿಸ್ಥಿತಿ ಬಂದರೆ ತಲೆ ಕೊಡುತ್ತಾರೆ. ಆದರ, ತಲೆ ಬಾಗುವುದಿಲ್ಲ ಎಂದರು ಕಾಂಗ್ರೆಸ್ಸಿಗರು ಸೋಮಶೇಖರ್​ ಹೇಳಿಕೆಗೆ ತಪರಾಕಿ ಬಾರಿಸಿದ್ದಾರೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ