ನಂಬಿದವರೇ ಬೆನ್ನಿಗೆ ಚೂರಿಹಾಕಿದರೆಂದು ಸಿದ್ದರಾಮಯ್ಯ ಆಕ್ರೋಶ; ಡಿಕೆಶಿ ವಿರುದ್ಧವೂ ಬೇಸರ

Siddaramaih: ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಾನು ಸಿಎಂ ಆಗಿದ್ದಾಗ ನನ್ನ ಬಳಿ ಎಲ್ಲಾ ಕೆಲಸಗಳನ್ನ ಮಾಡಿಸಿಕೊಂಡ ಶಾಸಕರೇ ಇದೀಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ಧಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

news18
Updated:July 22, 2019, 9:47 AM IST
ನಂಬಿದವರೇ ಬೆನ್ನಿಗೆ ಚೂರಿಹಾಕಿದರೆಂದು ಸಿದ್ದರಾಮಯ್ಯ ಆಕ್ರೋಶ; ಡಿಕೆಶಿ ವಿರುದ್ಧವೂ ಬೇಸರ
ಮಾಜಿ ಸಿಎಂ ಸಿದ್ದರಾಮಯ್ಯ
news18
Updated: July 22, 2019, 9:47 AM IST
ಬೆಂಗಳೂರು(ಜುಲೈ 21): ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರೆಲ್ಲರೂ ಬಹುತೇಕ ಸಿದ್ದರಾಮಯ್ಯ ಅವರ ಆಪ್ತರೇ ಆಗಿದ್ದಾರೆ. ಇದು ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮೇಲೆ ಅನುಮಾನ ಹುಟ್ಟಲು ಕಾರಣವಾಗಿದೆ. ಇದು ಗೊತ್ತಿದ್ದೇ ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಾನು ನಂಬಿದವರೇ ತನ್ನ ಬೆನ್ನಿಗೆ ಚೂರಿ ಹಾಕಿದರೆಂದು ಮಾಜಿ ಮುಖ್ಯಮಂತ್ರಿ ಬೇಸರ ಮಾಡಿಕೊಂಡಿದ್ದಾರೆ. ಇವತ್ತು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ನೋವು ತೋಡಿಕೊಂಡಿದ್ದಾರೆ.

ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲದಂತೆ ಆಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಎಲ್ಲಾ ಕೆಲಸಗಳನ್ನ ಮಾಡಿಸಿಕೊಂಡ ಶಾಸಕರೇ ಇದೀಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ಧಾರೆ. ಈ ಮೂಲಕ ಹೇಸಿಗೆ ತಿನ್ನುವಂಥ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರ ಉಳಿಸಲು ಕಾಂಗ್ರೆಸ್​​ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಜೆಡಿಎಸ್ ಸಿದ್ಧ - ಡಿ ಕೆ ಶಿವಕುಮಾರ್

ಭೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಮುನಿರತ್ನ ಅವರು ಬೆನ್ನಿಗೆ ಚೂರಿ ಹಾಕಿದರೆಂದು ಸಿದ್ದರಾಮಯ್ಯ ನೇರವಾಗಿ ಬೊಟ್ಟು ಮಾಡಿದರು.

ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಕಳುಹಿಸಿದ್ಧೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹೋದವರಷ್ಟೇ ಅಲ್ಲ, ಇಲ್ಲಿ ಇರುವವರೂ ನನಗೆ ಆಪ್ತರೇ. ನಾನು ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೀನಾ? ಅಂಥ ನೀಚ ಕೆಲಸವನ್ನು ನಾನು ಮಾಡಲಾರೆ. ಇವರು ಮಾಡಿದ ಕೆಲಸದಿಂದ ನೋವಾಗಿದೆ ಎಂದು ಸಿಎಲ್​ಪಿ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಸಿಎಂ ಎಚ್​​ಡಿಕೆ ಪರ ವೋಟ್​​ ಮಾಡುವಂತೆ ಬಿಎಸ್​ಪಿ ಶಾಸಕ ಎನ್​​. ಮಹೇಶ್​​ಗೆ ಮಾಯಾವತಿ ಆದೇಶ

ಡಿಕೆಶಿ ವಿರುದ್ಧವೂ ಗರಂ:

ಶ್ರೀಮಂತ ಪಾಟೀಲ್ ಅವರನ್ನು ಸಿದ್ದರಾಮಯ್ಯ ಅವರೇ ಕಳುಹಿಸಿಕೊಟ್ಟರೆಂದು ಡಿಕೆ ಶಿವಕುಮಾರ್ ಮಾಡಿದ ಗಂಭೀರ ಆರೋಪಕ್ಕೆ ಮಾಜಿ ಸಿಎಂ ಕೆಂಡಾಮಂಡಲವಾಗಿದರು. ನನ್ನ ಬಗ್ಗೆ ಅಪಪ್ರಚಾರ ಮಾಡಿದರೆ ಸಿಗುವ ಲಾಭವಾದರೂ ಏನು? ಶ್ರೀಮಂತ ಪಾಟೀಲ್ ಬಗ್ಗೆ ಮೊದಲಿಂದಲೂ ಅನುಮಾನ ಇತ್ತು. ಅವರ ಮೇಲೆ ಕಣ್ಣಿಡುವಂತೆ ನಾನೇ ಹೇಳಿದ್ದೆ. ಹೋಗಬೇಕು ಎಂದು ತೀರ್ಮಾನಿಸಿದವರನ್ನು ತಡೆಯಲು ಸಾಧ್ಯವೇ? ಎಂಟಿಬಿ ನಾಗರಾಜ್, ಮುನಿರತ್ನ, ಕೆ. ಸುಧಾಕರ್ ಜೊತೆ ಗಂಟೆಗಟ್ಟಲೆ ಮಾತನಾಡಿದಾಗ ಅವರು ನಾವೆಲ್ಲೂ ಹೋಗೋದಿಲ್ಲ ಎಂದು ಹೇಳಿ ಕೈಕೊಟ್ಟರು. ಮೋಸ ಮಾಡಿದರು ಎಂದು ಸಿದ್ದರಾಮಯ್ಯ ದೂರಿದರು. ಸಭೆಯಲ್ಲಿ ಸಿದ್ದರಾಮಯ್ಯ ಅವರ ಈ ಉತ್ತರಕ್ಕೆ ಡಿಕೆ ಶಿವಕುಮಾರ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

ಇದನ್ನೂ ಓದಿ: Karnataka Political Crisis: ಶ್ರೀಮಂತ ಪಾಟೀಲ್​​ ವಿಚಾರದಲ್ಲಿ ಡಿಕೆಶಿ, ಸಿದ್ದರಾಮಯ್ಯ ಜಟಾಪಟಿ

ಸೋಮವಾರ ವಿಧಾನಸಭೆ ಅಧಿವೇಶನದ 7ನೇ ದಿನವಾಗಿದ್ದು, ವಿಶ್ವಾಸ ಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಅವರು ಹೇಳಿದ್ದಾರೆ. ರಾಜೀನಾಮೆ ನೀಡಿರುವ 15 ಶಾಸಕರು ತಾವು ಅಧಿವೇಶನಕ್ಕೆ ಬರುವುದಿಲ್ಲ. ವಿಶ್ವಾಸಮತ ನಿಲುವಳಿಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ಧಾರೆ. ಸೋಮವಾರ ಎಷ್ಟು ಹೊತ್ತಾದರೂ ವಿಶ್ವಾಸಮತ ನಡೆಸುವಂತೆ ಬಿಜೆಪಿ ಪಟ್ಟು ಹಿಡಿಯುತ್ತಿದೆ. ಒಂದು ವೇಳೆ ಇದೇ ಸ್ಥಿತಿಯಲ್ಲಿ ವಿಶ್ವಾಸಮತ ನಡೆದಲ್ಲಿ ಮೈತ್ರಿ ಸರ್ಕಾರ ಸೋಲುವುದು ನಿಶ್ಚಿತವಾಗಿದೆ.

(ವರದಿ: ಚಿದಾನಂದ ಪಟೇಲ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...