• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ನೂತನ ಸಿಎಂ-ಡಿಸಿಎಂ ಪ್ರಮಾಣವಚನ, ಕಂಠೀರವ ಸ್ಟೇಡಿಯಂನಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ!

Karnataka Politics: ನೂತನ ಸಿಎಂ-ಡಿಸಿಎಂ ಪ್ರಮಾಣವಚನ, ಕಂಠೀರವ ಸ್ಟೇಡಿಯಂನಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ!

ಕಂಠೀರವ ಸ್ಟೇಡಿಯಂನಲ್ಲಿ ಶ್ರೀರಾಮನ ಮೂರ್ತಿ

ಕಂಠೀರವ ಸ್ಟೇಡಿಯಂನಲ್ಲಿ ಶ್ರೀರಾಮನ ಮೂರ್ತಿ

ನಗರದ ಕಂಠೀರವ ಸ್ಟೇಡಿಯಂ ಮುಖ್ಯ ದ್ವಾರದ ಮುಂಭಾಗದಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಶ್ರೀರಾಮನಂತೆ ಸಿದ್ದರಾಮಯ್ಯ ಕೂಡ ಒಳ್ಳೆಯ ಆಡಳಿತ ಕೊಡಬೇಕು. ಬಡವರ ಏಳಿಗೆಗಾಗಿ ಒಳ್ಳೆಯ ಕಾರ್ಯಕ್ರಮ ತರಬೇಕು ಎಂದು ಶ್ರೀನಿವಾಸ್ ಆಶಯ ವ್ಯಕ್ತಪಡಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ (Karnataka CM) ಮತ್ತು ಉಪಮುಖ್ಯಮಂತ್ರಿಗಳ (DCM) ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ನೂತನ ಸಿಎಂ ಆಗಿ ಸಿದ್ದರಾಮಯ್ಯ, (Siddaramaiah) ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವ ಕಂಠೀರವ ಸ್ಟೇಡಿಯಂನಲ್ಲಿ ಅಪರೂಪದ ಸನ್ನಿವೇಶವೊಂದು ನಡೆದಿದೆ.


ಇಂದು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬ ಕಂಠೀರವ ಸ್ಟೇಡಿಯಂ ಬಳಿ ಬೃಹತ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಭಿಮಾನ ಮರೆದಿದ್ದಾರೆ. ಶ್ರೀರಾಮಚಂದ್ರನ ಈ ಮೂರ್ತಿ ಸುಮಾರು 20 ಅಡಿ ಎತ್ತರ ಇದ್ದು, ನಗರದ ಮಾವಳ್ಳಿ ನಿವಾಸಿ ಶ್ರೀನಿವಾಸ್ ಅವರು ಶ್ರೀರಾಮ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.


ಇದನ್ನೂ ಓದಿ: Karnataka Politics: ಸಿದ್ದರಾಮಯ್ಯ-ಡಿಕೆಶಿ ಪ್ರಮಾಣವಚನಕ್ಕೆ 8 ರಾಜ್ಯದ ಸಿಎಂ, ಘಟಾನುಘಟಿ ನಾಯಕರಿಗೆ ಆಹ್ವಾನ!


ನಗರದ ಕಂಠೀರವ ಸ್ಟೇಡಿಯಂ ಮುಖ್ಯ ದ್ವಾರದ ಮುಂಭಾಗದಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಶ್ರೀರಾಮನಂತೆ ಸಿದ್ದರಾಮಯ್ಯ ಕೂಡ ಒಳ್ಳೆಯ ಆಡಳಿತ ಕೊಡಬೇಕು. ಬಡವರ ಏಳಿಗೆಗಾಗಿ ಒಳ್ಳೆಯ ಕಾರ್ಯಕ್ರಮ ತರಬೇಕು ಎಂದು ಶ್ರೀನಿವಾಸ್ ಆಶಯ ವ್ಯಕ್ತಪಡಿಸಿದ್ದಾರೆ.


ಶ್ರೀರಾಮ ಕೂಡ ಒಂದು ರಾಜ್ಯದ ರಾಜನಾಗಿದ್ದ. ನಾಳೆ ಸಿದ್ದರಾಮಯ್ಯ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಆಗುತ್ತಿದೆ. ಶ್ರೀರಾಮನ ಆಶೀರ್ವಾದ ಸಿದ್ದರಾಮಯ್ಯ ಮೇಲೆ ಇರಲಿ. ರಾಜ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಬೇಕು. ಒಳ್ಳೆಯ ಆಡಳಿತ ಕೊಡಲಿ ಅಂತಾ ಶ್ರೀರಾಮ ಮೂರ್ತಿ ಪ್ರತಿಷ್ಠಾಪಿಸಿದ್ದೇನೆ ಎಂದು ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: Puttur BJP: ಯತ್ನಾಳ್ ಸಮ್ಮುಖದಲ್ಲೇ ಪುತ್ತೂರಿನಲ್ಲಿ ಹಿಂದೂಪರ-ಬಿಜೆಪಿ ಕಾರ್ಯಕರ್ತರ ಮಧ್ಯೆ ತಳ್ಳಾಟ!


ಶ್ರೀರಾಮನ ಮೂರ್ತಿಗೆ ಬೆಳಗ್ಗೆ ಪೂಜೆ


ಇನ್ನು ಈ ಶ್ರೀರಾಮ ಮೂರ್ತಿಗೆ ಇಂದು ಬೆಳಗ್ಗೆ ಹೂವಿನ ಅಲಂಕಾರ ಮಾಡಿ ಪೂಜೆ ಮಾಡಲಿದ್ದು, ಇದಕ್ಕಾಗಿ ಸಿದ್ದರಾಮಯ್ಯ ಅಭಿಮಾನಿ ಶ್ರೀನಿವಾಸ್ ಭರದ ಸಿದ್ದತೆ ನಡೆಸಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಈ ಶ್ರೀರಾಮನ ಮೂರ್ತಿಯನ್ನು ಮಹಾರಾಷ್ಟ್ರದ ಕೊಲ್ಲಾಪುರದಿಂದ ತರಿಸಲಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.



ಇನ್ನು ಇಂದು ನಡೆಯಲಿರುವ ನೂತನ ಸಿಎಂ ಡಿಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದು, ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಸಿಎಂ ಹೊರತುಪಡಿಸಿ ಬಹುತೇಕ ಎಲ್ಲಾ ಬಿಜೆಪಿಯೇತರ ವಿಪಕ್ಷಗಳು ನಾಳೆ ಒಂದಾಗಿ ಶಕ್ತಿ ಪ್ರದರ್ಶನ ಮಾಡಲಿವೆ.

top videos
    First published: