ವರುಣಾ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬೆಳಗ್ಗೆಯೇ ಹಲವು ಮತಗಟ್ಟೆಗಳಲ್ಲಿ ಸ್ವಾರಸ್ಯಕರ ಘಟನೆಗಳೂ ನಡೆಯುತ್ತಿವೆ. ಇತ್ತ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ತವರೂರು ಸಿದ್ದರಾಮನ ಹುಂಡಿಯಲ್ಲೂ (Siddaramana hundi) ಇಂತಹದೇ ಘಟನೆ ನಡೆದಿದೆ.
ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಮತಗಟ್ಟೆಯಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ಗೆಳೆಯ ಲಿಂಗಯ್ಯ ಅವರು ಮೊದಲ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ನಂತರ ಮಾಧ್ಯಮ ಮಿತ್ರರು ಸಿದ್ದರಾಮಯ್ಯ ಅವರ ಬಾಲ್ಯದ ಗೆಳೆಯನನ್ನು ಮಾತನಾಡಿಸಿದರು. ಈ ವೇಳೆ ಲಿಂಗಯ್ಯ ಅವರು ಮಾಜಿ ಸಿಎಂ, ತನ್ನ ಬಾಲ್ಯದ ಗೆಳೆಯನ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭ
78 ವರ್ಷ ವಯಸ್ಸಿನ ಲಿಂಗಯ್ಯ ಅವರು ನ್ಯೂಸ್ 18 ಕನ್ನಡದ ಜೊತೆಗೆ ಮಾತನಾಡುತ್ತಾ, ಸಿದ್ದರಾಮಯ್ಯನವರ ಜೊತೆಗಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ಸಿದ್ದರಾಮಯ್ಯ ಅವರ ಒಳಿತಿಗೂ ಆಶಿಸಿದರು. ‘ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅದಕ್ಕೆ ಬೆಳಗ್ಗೆ ಬೇಗನೆ ಬಂದೆ ಎಂದ ಹಿರಿಜೀವ ಲಿಂಗಯ್ಯ ಅವರು, ಸಿದ್ದರಾಮಯ್ಯನ ಜೊತೆಗೆ 5 ರಿಂದ 8ನೇ ತರಗತಿವರೆಗೆ ಓದಿದ್ದೆ. ಬಹಳ ಒಳ್ಳೆಯ ಮನುಷ್ಯ ಕಣಯ್ಯ ಅವನು ಎಂದು ಸಿದ್ದರಾಮಯ್ಯ ಬಗ್ಗೆ ಲಿಂಗಯ್ಯ ಮೆಲು ಧ್ವನಿಯಲ್ಲಿ ಹೇಳಿದರು.
ಹಿರಿಯ ನಾಗರಿಕರ ಮಾದರಿ ನಡೆ
ಕೊಪ್ಪಳ: ಕೊಪ್ಪಳದಲ್ಲಿ ವಯೋವೃದ್ಧರು ಮತದಾನ ಆರಂಭವಾಗುವ ಮುನ್ನವೇ ಮುಂಜಾನೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ವಯೋವೃದ್ಧರು ಮತದಾನ ಮಾಡಲು ಉತ್ಸಾಹ ತೋರಿಸಿದ್ದು, ವೋಟ್ ಮಾಡೋದನ್ನು ತಪ್ಪಿಸಲು ಕಾರಣ ಹುಡುಕುವ ಯುವಜನರನ್ನು ನಾಚುವಂತೆ ಮಾಡಿದ್ದಾರೆ. ಗಂಗಾವತಿ ನಗರದ ಮತಗಟ್ಟೆಯಲ್ಲಿ ಹತ್ತಾರು ಮಂದಿ ವಯೋ ವೃದ್ಧರು ಸಮಯಕ್ಕೆ ಮೊದಲೇ ಮತ ಚಲಾಯಿಸಲು ಬಂದು ಪಿಂಕ್ ಬೂತ್‌ನಲ್ಲಿ ಸಾಲಿನಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: Ramanagara Elections: ಹಕ್ಕು ಚಲಾಯಿಸಲು ಸಜ್ಜಾದ ರಾಮನಗರ ಜಿಲ್ಲೆಯ ಘಟಾನುಘಟಿ ನಾಯಕರು!
ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುತ್ತದೆ ಅನ್ನೋದು ಗೊತ್ತಿದ್ದರೂ ಕೂಡ 5.45ಕ್ಕೆ ಬಂದು ಪಿಂಕ್ ಬೂತ್‌ನಲ್ಲಿ ಸಾಲಿನಲ್ಲಿ ನಿಂತ ವಯೋವೃದ್ಧರು ಇತರರಿಗೆ ಮಾದರಿಯಾದರು. ಏಳು ಗಂಟೆ ನಂತರ ಸಿಕ್ಕಾಪಟ್ಟೆ ಜನ ಬಂದು ತುಂಬಾ ಹೊತ್ತು ಬಿಸಿಲಿನಲ್ಲಿ ಕಾಯಬೇಕಾಗುತ್ತದೆ ಅನ್ನೋದನ್ನು ಅರಿತ ಹಿರಿಯ ಜೀವಗಳು ಎಲ್ಲರಿಗಿಂತ ಮೊದಲು ನಾವೇ ಹಕ್ಕು ಚಲಾಯಿಸಿ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಪ್ಲಾನ್ ಮಾಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ