• Home
  • »
  • News
  • »
  • state
  • »
  • PFI ಭಾಗ್ಯ ಕೂಡ ಸಿದ್ದರಾಮಯ್ಯ ಅವರದ್ದೇ; ಪೋಸ್ಟರ್ ಮೂಲಕ ಟಾಂಗ್ ಕೊಟ್ರು R ಅಶೋಕ್​

PFI ಭಾಗ್ಯ ಕೂಡ ಸಿದ್ದರಾಮಯ್ಯ ಅವರದ್ದೇ; ಪೋಸ್ಟರ್ ಮೂಲಕ ಟಾಂಗ್ ಕೊಟ್ರು R ಅಶೋಕ್​

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

PFI, ಕೆಎಫ್​ಡಿ ವಿರುದ್ಧ 1,600 ಕೇಸ್​ಗಳನ್ನು ಹಾಕಲಾಗಿತ್ತು. ಪೊಲೀಸರ ಮೇಲೆ, ಜನರ ಮೇಲೆ ಹಲ್ಲೆ ಎಂದು ಕೇಸ್ ದಾಖಲು ಮಾಡಲಾಗಿದೆ. ಸಿದ್ದರಾಮಯ್ಯ  ಎಲ್ಲಾ 1,600 ಪ್ರಕರಣ ಹಿಂಪಡೆದಿದ್ದಾರೆ ಎಂದು ಆರ್​ ಅಶೋಕ್​ ತಿಳಿಸಿದ್ದಾರೆ.

  • Share this:

ಪೇಸಿಎಂ ಪೋಸ್ಟರ್​ ಅಂಟಿಸಿಕೊಂಡು ಬಿಜೆಪಿ ಸರ್ಕಾರದ (BJP Govrenment) ವಿರುದ್ಧ ಕಿಡಿಕಾರಿದ ಕಾಂಗ್ರೆಸ್​ಗೆ ಸಚಿವ ಆರ್. ಅಶೋಕ್ (Minister R Ashok)​ ಕೂಡ ಸಿದ್ದರಾಮಯ್ಯ  (Siddaramaiah) ಬಗ್ಗೆ ಪೋಸ್ಟರ್​ ರಿಲೀಸ್​ ಮಾಡುವ ಮೂಲಕವೇ ತಿರುಗೇಟು ನೀಡಿದ್ದಾರೆ. ​ ಎಲ್ಲಾ ಭಾಗ್ಯಗಳು ನಮ್ಮದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಇಂದು PFI ಭಾಗ್ಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ (Press Meet) ಮಾತನಾಡಿದ ಅವರು, ಪಿಎಫ್ಐ ಬ್ಯಾನ್ ನಿಂದ ಕಾಂಗ್ರೆಸ್ ಸೂತಕದ ಮನೆಯಾಗಿದೆ. ಅವರ ಕುಟುಂಬದ ಬಂಧುಗಳು ( PFI Ban) ಬ್ಯಾನ್ ಆಗಿದ್ದಾರೆ. ಯಾವ ಮುಖ ಇಟ್ಟುಕೊಂಡು ಪಿಎಫ್ಐ ಬ್ಯಾನ್  ಬಗ್ಗೆ ಕಾಂಗ್ರೆಸ್ ನವ್ರು ಮಾತಾಡ್ತಾರೆ. ಸಿದ್ದರಾಮಯ್ಯ ನವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆರ್​. ಅಶೋಕ್ ಹೇಳಿದ್ದಾರೆ.


ಸಿದ್ದರಾಮಯ್ಯ 1,600 ಪ್ರಕರಣ ಹಿಂಪಡೆದಿದ್ದಾರೆ


ಪಿಎಫ್ಐ ನಿಷೇಧದ ಬಗ್ಗೆ ಮಾತಾಡಿದ್ದ ಸಿದ್ದರಾಮಯ್ಯ ಅವರು,  ನಾನು ಮೊದಲೇ ಭವಿಷ್ಯ ನುಡಿದಿದ್ದೆ ಅದಕ್ಕೆ ಪಿಎಫ್ಐ ಸಂಘಟನೆ ಬ್ಯಾನ್ ಆಗಿದೆ ಎಂದಿದ್ದಾರೆ. PFI, ಕೆಎಫ್​ಡಿ ವಿರುದ್ಧ 1,600 ಕೇಸ್​ಗಳನ್ನು ಹಾಕಲಾಗಿತ್ತು. ಪೊಲೀಸರ ಮೇಲೆ, ಜನರ ಮೇಲೆ ಹಲ್ಲೆ ಎಂದು ಕೇಸ್ ದಾಖಲು ಮಾಡಲಾಗಿದೆ. ಸಿದ್ದರಾಮಯ್ಯ  ಎಲ್ಲಾ 1,600 ಪ್ರಕರಣ ಹಿಂಪಡೆದಿದ್ದಾರೆ.  ಅಂದಿನ ಡಿಜಿಪಿ ಕೇಸ್​ ಹಿಂಪಡೆಯದಂತೆ ವರದಿ ನೀಡಿದ್ದರು. ಆದರೂ ಸಿದ್ದರಾಮಯ್ಯ ಪ್ರಕರಣ ಹಿಂಪಡೆದಿದ್ದಾರೆ ಎಂದು ಹೇಳಿದರು.
ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರು


ಭಾರತ್ ಜೋಡೋ ಸಾಗುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ.  ಪಾಂಡವರ ಸುತ್ತಮುತ್ತಲಿನ ರಸ್ತೆಗಳಲ್ಲಿ ಕನ್ನಡ ಬಾವುಟ ಬಳಕೆ, ಸಿದ್ದರಾಮಯ್ಯ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ ಎಂದು ಆರ್​. ಅಶೋಕ್​ ಹೇಳಿದ್ದಾರೆ.


ಸಿದ್ದರಾಮಯ್ಯಗೆ ನಾಚಿಕೆ ಆಗ್ಬೇಕು


ಕೊಡಗು, ಮೈಸೂರು, ಮಂಗಳೂರಿನಲ್ಲಿ ಪಿಎಫ್‌ಐನವರಿಗೆ ತರಬೇತಿ ನೀಡಲಾಗಿದೆ. ಬೈಕ್‌ನಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದೂ ತರಬೇತಿ ನೀಡಲಾಗಿದೆ. ಕೇಸ್ ಆಗದ ರೀತಿಯಲ್ಲಿ ಹೇಗೆ ಹತ್ಯೆ ಮಾಡಬೇಕೆಂದು ಕೇರಳದ ನಿವೃತ್ತ ಪೊಲೀಸರು ತರಬೇತಿ ನೀಡಿರುವ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ನಿಷೇದಿಸಲು ನಾವೇ ಹೇಳಿದ್ದುಎಂದು ಹೇಳಿಕೊಳುತ್ತಾರೆ. ಅವರಿಗೆ ನಾಚಿಕೆಯಾಗಬೇಕು. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಅಶೋಕ ಒತ್ತಾಯಿಸಿದರು.


ರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಪ್ರಯತ್ನ


ಪಿಎಫ್‌ಐನವರು ಇರುವ 175 ಕೇಸ್ ದಾಖಲಾಗಿದೆ. ಅವರಿಂದ ಪ್ರಾಯೋಜಿತರಾದ ಕೆಎಫ್‌ಡಿ ಭಾಗಿಯಾಗಿರುವ ಕೇಸ್ ಕೂಡಾ ಇದೆ ಎಂದರು. ರಾಜಸ್ಥಾನ, ಛತ್ತಿಸ್‌ಗಡ್ ರಾಜ್ಯದಲ್ಲಿ ಮಾತ್ರ ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದಂತೆ ಕಾಂಗ್ರೆಸ್‌ಗೆ ಎಲ್ಲೂ ನೆಲೆ ಇಲ್ಲ. ಇನ್ನೇನು ರಾಜಸ್ಥಾನದಲ್ಲೂ ಕಾಂಗ್ರೆಸ್ ಮುಳುಗುವ ಹಂತಕ್ಕೆ ಬಂದಿದೆ. ಹೀಗಾಗಿ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಹಿಂದೊಮ್ಮೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿತ್ತು’ ಎಂದು ಆರೋಪಿಸಿದರು.


ಇದನ್ನೂ ಓದಿ: Bharat Jodo Yatra: ಒಂದೇ ದಿನ ಮಂದಿರ, ಮಸೀದಿ, ಚರ್ಚ್​ಗೆ ರಾಹುಲ್ ಗಾಂಧಿ ಭೇಟಿ; ರಾಜ್ಯದಲ್ಲಿ ರಾಗಾ ಸಖತ್ ಆ್ಯಕ್ಟೀವ್


ಇದು ಪ್ರಾಯಶ್ಚಿತ್ತದ ಯಾತ್ರೆ


ಭಾರತ್ ಜೋಡೋ ಯಾತ್ರೆಗೆ ಆರ್.ಅಶೋಕ್ ಲೇವಡಿ ಮಾಡಿದ್ದು, ಇದು ಪ್ರಾಯಶ್ಚಿತ್ತದ ಯಾತ್ರೆ ಎಂದು ಹೇಳಿದರು. ಭಾರತ ದೇಶವನ್ನು ಒಡೆದು ಪಾಕಿಸ್ತಾನ ಮಾಡಿದ್ದು ನೆಹರು. ನೆಹರು ಪ್ರಧಾನಿಯಾಗಬೇಕೆಂದು ದೇಶವನ್ನು ಒಡೆದರು ಎಂದು ಬೆಂಗಳೂರಿನಲ್ಲಿ ಆರ್.ಅಶೋಕ್ ಹೇಳಿಕೆ ನೀಡಿದರು. ಮೋದಿ ವಿರುದ್ಧ ಹೋರಾಡುವ ಧಮ್ ಇವರಿಗಿಲ್ಲ. ದೇಶದಲ್ಲಿ ರಾಹುಲ್ ಗಾಂಧಿ ವಾಯುವಿಹಾರ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಹೆಸರಲ್ಲಿ ಕೋಟಿಗಟ್ಟಲೇ ಹಣ ಮಾಡಿ, ಕಟಕಟೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

Published by:ಪಾವನ ಎಚ್ ಎಸ್
First published: