ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್; ನಾಳೆ ದೆಹಲಿಗೆ ಪ್ರಯಾಣ

ಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಆದರೆ, ಅವರ ರಾಜೀನಾಮೇ ಅಂಗೀಕಾರವಾಗಿರಲಿಲ್ಲ. ಈಗ ಈ ಬಗ್ಗೆ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ.

news18-kannada
Updated:January 12, 2020, 11:19 AM IST
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್; ನಾಳೆ ದೆಹಲಿಗೆ ಪ್ರಯಾಣ
ಸಿದ್ದರಾಮಯ್ಯ
  • Share this:
ಬೆಂಗಳೂರು (ಜ.12): ಕರ್ನಾಟಕ ಉಪಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್​ ತೀವ್ರ ಮುಖಭಂಗ ಎದುರಿಸಿತ್ತು. ಇದಾದ ಬೆನ್ನಲ್ಲೇ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಈಗ ಸಿದ್ದರಾಮಯ್ಯಗೆ ಹೈಕಮಾಂಡ್​ ಬುಲಾವ್​ ನೀಡಿದೆ.

ಮೈತ್ರಿ ಸರ್ಕಾರ ಪತನದ ನಂತರ ವಿಪಕ್ಷ ನಾಯಕರು ಯಾರು ಎನ್ನುವ ಪ್ರಶ್ನೆ ಕಾಡಿತ್ತು. ಈ ವೇಳೆ ಹೈಕಮಾಂಡ್​ ವಿಪಕ್ಷ ನಾಯಕನ ಸ್ಥಾನವನ್ನು ಸಿದ್ದರಾಮಯ್ಯಗೆ ನೀಡಿತ್ತು. ಹೈಕಮಾಂಡ್​ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವ ಹೊಣೆ ಸಿದ್ದರಾಮಯ್ಯ ಮೇಲಿತ್ತು. ಇದೇ ಕಾರಣಕ್ಕೆ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಶಾಸಕರನ್ನು ಉಪಚುನಾವಣೆಯಲ್ಲಿ ಸೋಲಿಸಲು ಅವರು ಪಣ ತೊಟ್ಟಿದ್ದರು. ಪ್ರತಿ ಕ್ಷೇತ್ರಕ್ಕೂ ತೆರಳಿ ಪ್ರಚಾರ ನಡೆಸಿದ್ದರು. ಆದರೆ, 15 ಸ್ಥಾನಗಳ ಪೈಕಿ ಕಾಂಗ್ರೆಸ್​ ಗೆದ್ದಿದ್ದು ಕೇವಲ ಎರಡು ಸ್ಥಾನಗಳನ್ನು.

ಈ ಬೆನ್ನಲ್ಲೇ ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಆದರೆ, ಅವರ ರಾಜೀನಾಮೇ ಅಂಗೀಕಾರವಾಗಿರಲಿಲ್ಲ. ಈಗ ಈ ಬಗ್ಗೆ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ನಾಳೆ ರಾತ್ರಿ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ‘ನಾನೇನಾದ್ರು ಸಿಎಂ ಆಗಿದ್ರೆ ಮೋದಿ ಮನೆ ಮುಂದೆ ನೆರೆ ಪರಿಹಾರಕ್ಕಾಗಿ ಧರಣಿ ಕೂರುತ್ತಿದ್ದೆ‘: ಸಿದ್ದರಾಮಯ್ಯ

ಮಂಗಳವಾರ ಹೈಕಮಾಂಡ್ ನಾಯಕ ಸಿದ್ದರಾಮಯ್ಯ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲದೆ, ಪ್ರಸಕ್ತ ರಾಜ್ಯ ರಾಜಕೀಯದ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ