Kalburgi Earthquake: ಸಿದ್ದರಾಮಯ್ಯ ಭೇಟಿ ವೇಳೆಯೇ ಕಲಬುರಗಿಯ ಗಡಿಕೇಶ್ವರದಲ್ಲಿ ಕಂಪಿಸಿದ ಭೂಮಿ

ಜನರು ಗುಳೆ ಹೋಗುವುದನ್ನ ತಡೆಗಟ್ಟಲು ಆರ್ ಅಶೋಕ್‌ಗೆ ಮನವಿ ಮಾಡಿದ್ದೇನೆ. ನಾನು ಗಡಿಕೇಶ್ವರ ಜನರ ಬೆಂಬಲಕ್ಕೆ ಇದ್ದೇನೆ. ನಾವು ನಿಮ್ಮ ಎಲ್ಲಾ ರೀತಿಯ ರಕ್ಷಣೆ ಮಾಡ್ತಿವಿ, ಧೈರ್ಯದಿಂದ ಇರಿ ಎಂದು ಭರವಸೆ ನೀಡಿದರು.

ಕಲಬುರಗಿಗೆ ಸಿದ್ದರಾಮಯ್ಯ ಭೇಟಿ

ಕಲಬುರಗಿಗೆ ಸಿದ್ದರಾಮಯ್ಯ ಭೇಟಿ

 • Share this:
  ಕಲಬುರಗಿ (ಅ. 12): ಜಿಲ್ಲೆಯಲ್ಲಿ ಪದೇ ಪದೇ ಆಗುತ್ತಿರುವ ಭೂಕಂಪನಕ್ಕೆ (Kalburgi Earth quick) ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಸಾಕ್ಷಿಯಾಗಿದ್ದಾರೆ. ಇಂದು ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರಕ್ಕೆ (gadikeshwara) ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಡಾ ಅಜಯ್​ ಸಿಂಗ್​ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದರು. ಭೂಕಂಪನಕ್ಕೆ ಹೆದರಿ ಊರು ತೊರೆಯಲು ಸಿದ್ದರಾಗಿರುವ ಗಡಿಕೇಶ್ವರ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲು ಬಂದಾಗ ಈ ಅನುಭವ ಆಗಿದೆ. ಡಾ. ಶರಣಪ್ರಕಾಶ ಪಾಟೀಲ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯಿಂದ ಕೇಳಿ ಬಂದ ಭಾರಿ ಶಬ್ದ ಕೇಳಿ ಬಂದಿತು. ಶಬ್ದ ಗ್ರಹಿಸಿ ಇದು ಭೂಕಂಪನ ಎಂದು ಗ್ರಾಮಸ್ಥರು ತಿಳಿಸಿದರು.

  ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

  ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಕಲಬುರಗಿ ಜಿಲ್ಲೆ 50 ಕ್ಕೂ ಅಧಿಕ ಗ್ರಾಮಗಳಲ್ಲಿ ಭೂಕಂಪನ ಆಗಿದೆ. ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ. ಇದು ದೊಡ್ಡ ಪ್ರಮಾಣದ ಭೂ ಕಂಪನ ಆಗಿದೆ. ಕಂಪನದಿಂದ ಅನೇಕ ಮನೆಗಳು ಬಿದ್ದಿವೆ, ಜನ ಭಯಭೀತರಾಗಿ ಊರು ತೊರೆಯುತ್ತಿದ್ದಾರೆ. ಇಗಷ್ಟೇ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಯಾನಕ ಶಬ್ಬ ಕೇಳಿದೆ. ಸರ್ಕಾರ ಜನರಿಗೆ ಪುನರ್ವಸತಿ ಕಾರ್ಯಕ್ರಮಗಳನ್ನ ಚಾಲನೆ ಮಾಡಬೇಕಿತ್ತು. ಇದುವರೆಗೆ ಗ್ರಾಮಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡಿಲ್ಲ. ಆದರೆ ನಾ ತಹಶಿಲ್ದಾರ್ ಕಳಿಸುತ್ತೇನೆ, ಎಸಿ ಕಳುಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ಉಡಾಫೆ ಉತ್ತರ ಕೊಡುತ್ತಾರೆ ಎಂದು ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

  ಇಷ್ಟು ದಿನ ಏನು ಮಾಡುತ್ತಿದ್ದರು ಜಿಲ್ಲಾಧಿಕಾರಿ?

  ಕಳೆದೊಂದು ವಾರದಿಂದ ಇಲ್ಲಿನ ಜನರು ಭೀತಿಯಲ್ಲಿ ಬದುಕುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳಿಗೆ ಗಮನವಿಲ್ಲ. ಆದರೆ, ಇಂದು ನಾನು ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂದು ಡಿಸಿ ಭೇಟಿ ನೀಡಿದ್ದಾರೆ. ಡಿಸಿ ಅಂದ್ರೆ ಏನು? ಜಿಲ್ಲೆಗೆ ದಂಡಾಧಿಕಾರಿ! ನಿಂತಲ್ಲೆ ಆದೇಶ ಮಾಡಿ ಪುನರ್ವಸತಿ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಅವರು ಸಮ್ಮನೆ ಬಂದು ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ಜೋತ್ಸ್ನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

  ಜನರು ಊರು ತೊರೆಯಲು ಮುಂದಾದರೂ ಈ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಏನಾದರು ಜವಬ್ದಾರಿ ಇದೆಯಾ? ಇವರೆಲ್ಲ ನಾಲಯಕರು ಎಂದು ಟೀಕಿಸಿರು.

  ಇದನ್ನು ಓದಿ: ದಸರಾ ಸಂಭ್ರಮ: ಆಯುಧ ಪೂಜೆಯಂದು ಸಾರಿಗೆ ಬಸ್​ಗಳಿಗೆ ಪೂಜೆಗೆ ಸಚಿವರ ಆದೇಶ

  ನಿಮ್ಮ ರಕ್ಷಣೆಗೆ ನಾವಿದ್ದೇವೆ; ವಿಪಕ್ಷ ನಾಯಕರ ಅಭಯ

  ಇಲ್ಲಿನ ಸ್ಥಿತಿ ಕುರಿತು ನಾನು ಈಗಷ್ಟೇ ಕಂದಾಯ ಸಚಿವ ಆರ್ ಅಶೋಕ್ ಜೊತೆ ಮಾತನಾಡಿದ್ದೀನಿ. ನಾಳೆಯೇ ಗಡಿಕೇಶ್ವರ ಗ್ರಾಮದಲ್ಲಿ ಪುನರ್ವಸತಿ ಕಾರ್ಯಕ್ರಮಗಳನ್ನ ಕೈಗೊಳ್ಳವುದಾಗಿ ಅಶೋಕ್ ಹೇಳಿದ್ದಾರೆ. ಜನರು ಗುಳೆ ಹೋಗುವುದನ್ನ ತಡೆಗಟ್ಟಲು ಆರ್ ಅಶೋಕ್‌ಗೆ ಮನವಿ ಮಾಡಿದ್ದೇನೆ. ನಾನು ಗಡಿಕೇಶ್ವರ ಜನರ ಬೆಂಬಲಕ್ಕೆ ಇದ್ದೇನೆ. ಸರ್ಕಾರದ ಗಮನ ಸೆಳೆಯವುದು ವಿರೋಧ ಪಕ್ಷದ ಮುಖ್ಯ ಕೆಲಸ. ನಮ್ಮ ಜನ ಕೆಲಸ ಮಾಡೊರನ್ನ ಸೋಲಿಸ್ತಾರೆ, ಕೆಲಸ ಮಾಡದೇ ಇರೋರನ್ನ ಗೆಲ್ಲಿಸುತ್ತಾರೆ. ನಾವು ನಿಮ್ಮ ಎಲ್ಲಾ ರೀತಿಯ ರಕ್ಷಣೆ ಮಾಡ್ತಿವಿ, ಧೈರ್ಯದಿಂದ ಇರಿ ಎಂದು ಭರವಸೆ ನೀಡಿದರು.

  ಇದನ್ನು ಓದಿ: ಕೊರೋನಾದಿಂದ ಮಕ್ಕಳು ಪಾರಾಗುವಂತೆ ವಿಜಯದಶಮಿಯಂದು ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ವಿಶೇಷ ಪೂಜೆ

  ಬೆಚ್ಚಿ ಬಿದ್ದಿರುವ ಜನರು

  ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಭಂಟನೂರ, ಭೂತಪೂರ, ಕೇರಳ್ಳಿ, ಹೊಸಳ್ಳಿ, ಬೆನಕನಹಳ್ಳಿ, ತೆಗಲತಿಪ್ಪಿ, ಹೊಡೆ ಬೀರನಳ್ಳಿ, ರಾಮನಗರ ತಾಂಡಾ ಸೇರಿದಂತೆ ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರವಾಗಿ ಭೂ ಕಂಪನ ಸಂಭವಿಸುತ್ತಿದೆ. ಇಷ್ಟು ದಿನಗಳ ಕಾಲ ಭೂಮಿಯಿಂದ ಬರುತ್ತಿದ್ದ ಭಾರಿ ಶಬ್ದದಿಂದ ಕಂಗೆಟ್ಟಿದ್ದ ಹಳ್ಳಿಗರಿಗೆ ಇದೀಗ ಭೂ ಕಂಪನ ಪ್ರಾಣ ಭೀತಿ ಹುಟ್ಟಿಸಿದೆ. ಭಾರಿ ಶಬ್ದ ಹಾಗೂ ಭೂ ಕಂಪನದಿಂದ ಗಡಿಕೇಶ್ವರ ಸೇರಿ ಹಲವು ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಕೆಲವು ಮನೆಗಳು ನೆಲ್ಕುರುಳಿವೆ. ಹೀಗಾಗಿ ಪ್ರತಿ‌ಕ್ಷಣ ಪ್ರಾಣ ಭೀತಿಯಲ್ಲಿರುವ ಗ್ರಾಮಸ್ಥರು, ಜೀವ ಉಳಿಸಿಕೊಳ್ಳಲು ಅಗತ್ಯ ವಸ್ತುಗಳೊಂದಿಗೆ
  ಊರು ತೊರೆದು ದೂರದ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
  Published by:Seema R
  First published: