ಒಂದು ಕಣ್ಣು ತೆಗೆಯಲು ಹೋಗಿ ತಮ್ಮ ಎರಡೂ ಕಣ್ಣು ಕಳೆದುಕೊಂಡರು; ಹೀಗಂತ ಎಂಟಿಬಿ ಹೇಳಿದ್ದು ಯಾರಿಗೆ ಗೊತ್ತಾ?

ನಾನು ಸಚಿವ ಸ್ಥಾನಕ್ಕೆ ಆಸೆ ಇಟ್ಟು ರಾಜೀನಾಮೆ ಕೊಟ್ಟು ಬಂದವನಲ್ಲ. ನಮ್ಮ ಕ್ಷೇತ್ರದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ರಾಜೀನಾಮೆ ಕೊಟ್ಟೆ. ಈಗಲೂ ಅದೇ ಬೇಡಿಕೆ ಇಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಸಹಾಯ ಮಾಡುವ ಮಾತು ಕೊಟ್ಟಿದ್ದಾರೆ ಎಂದರು.

G Hareeshkumar | news18-kannada
Updated:December 10, 2019, 7:39 PM IST
ಒಂದು ಕಣ್ಣು ತೆಗೆಯಲು ಹೋಗಿ ತಮ್ಮ ಎರಡೂ ಕಣ್ಣು ಕಳೆದುಕೊಂಡರು; ಹೀಗಂತ ಎಂಟಿಬಿ ಹೇಳಿದ್ದು ಯಾರಿಗೆ ಗೊತ್ತಾ?
ಎಂಟಿಬಿ ನಾಗರಾಜ್​​​
  • Share this:
ಬೆಂಗಳೂರು(ಡಿ.10): ಸಿದ್ದರಾಮಯ್ಯ ಅವರು ನಮ್ಮನ್ನು ಸೋಲಿಸಬೇಕು ಎಂದು ಪಣತೊಟ್ಟಿದ್ರು. ನಾವು ಸೋತಿದ್ದೇವೆ. ನಮ್ಮ ಸೋಲಿಗೆ ಸಿದ್ದರಾಮಯ್ಯ ಕಾರಣ ಅಲ್ಲ. ಆದರೆ ನಮ್ಮ ಒಂದು ಕಣ್ಣು ತೆಗೆಯಲು ಅವರು ಪ್ರಯತ್ನಿಸಿದ್ರು. ಆದರೆ, ಅವರು ಎರಡೂ ಕಣ್ಣು ಕಳೆದು ಕೊಂಡಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ವ್ಯಂಗ್ಯವಾಡಿದರು.

ಹೊಸಕೋಟೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ ಪಿ ನಾಯಕನ ಸ್ಥಾನ ಎರಡೂ ಕಳೆದುಕೊಂಡು ಮನೆಯಲ್ಲಿ ಕೂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಅನುಭವಿಸುತ್ತಾರೆ. ಸಮುದಾಯದ ಜನರಿಗೆ ಇವೆಲ್ಲಾ ಗೊತ್ತಾಗಿದೆ ಎಂದು ಹೇಳಿದರು.

ನಾನು ಸಚಿವ ಸ್ಥಾನಕ್ಕೆ ಆಸೆ ಇಟ್ಟು ರಾಜೀನಾಮೆ ಕೊಟ್ಟು ಬಂದವನಲ್ಲ. ನಮ್ಮ ಕ್ಷೇತ್ರದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ರಾಜೀನಾಮೆ ಕೊಟ್ಟೆ. ಈಗಲೂ ಅದೇ ಬೇಡಿಕೆ ಇಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಸಹಾಯ ಮಾಡುವ ಮಾತು ಕೊಟ್ಟಿದ್ದಾರೆ ಎಂದರು.

ಇವತ್ತು ನನ್ನನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ನನಗೆ ನಮ್ಮ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.  ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತೇನೆ ಅಂತಾ. ಬಚ್ಚೇಗೌಡರ ಬಗ್ಗೆ ಚರ್ಚೆ ಮಾಡಿಲ್ಲ. ನಾನು ಸೋಲಲು ಶರತ್ ಬಚ್ಚೇಗೌಡ ಮತ್ತು ಸಂಸದ ಬಿ ಎನ್​​ ಬಚ್ಚೇಗೌಡ ಅವರೇ ಕಾರಣ ಎಂದು ತಿಳಿಸಿದ್ದೇನೆ.

ಇದನ್ನೂ ಓದಿ : ಹರಕೆ ತೀರಿಸಿದ ಆನಂದ್ ಸಿಂಗ್; ಊರ ದೇವರುಗಳಿಗೆ ಎಷ್ಟು ಕೆ.ಜಿ ಬೆಳ್ಳಿ ಗಟ್ಟಿ ಕೊಟ್ರು ಗೊತ್ತಾ?

ಪಕ್ಷದಲ್ಲಿ ಗೆದ್ದು ಪಕ್ಷದ ಪರ ಪ್ರಚಾರ ಮಾಡಿಲ್ಲ. ಕ್ಷೇತ್ರಕ್ಕೆ ಸಿಎಂ ಬಂದ್ರೂ ಬಚ್ಚೇಗೌಡರು ಪ್ರಚಾರಕ್ಕೆ ಬಂದಿಲ್ಲ. ಪಕ್ಷದ್ರೋಹ ಕೆಲಸ ಮಾಡಿದ್ದಾರೆ. ಪಕ್ಷ ಮತ್ತು ಸರ್ಕಾರದಲ್ಲಿ ನನ್ನ ಗೌರವಯುತವಾಗಿ ನಡೆಸಿಕೊಳ್ಳುವ ಭರವಸೆ ನೀಡಿದ್ದಾರೆ‌ ಎಂದು ಅವರು ತಿಳಿಸಿದರು.

ಬಚ್ಚೇಗೌಡರು ನನ್ನ ಸೋಲಿಗೆ ಶಡ್ಯಂತ್ರ ಮಾಡಿದ ದಾಖಲೆಗಳು ಆಡಿಯೋ ಕೆಲವರ ಬಳಿ ಇದೆ ಅದನ್ನು ಸಂಗ್ರಹಿಸಿ ಪಕ್ಷದ ವರಿಷ್ಟರಿಗೆ ಕಳುಹಿಸುತ್ತೇನೆ. ಈ ಕ್ಷೇತ್ರದಲ್ಲಿನ ಮೂಲ ಬಿಜೆಪಿಗರೂ ಕೆಲವರು ಬಚ್ಚೇಗೌಡರಿಗೆ ಸಾಥ್ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರಾಮಯ್ಯನವರಿಂದ ಅಹಿಂದ ವರ್ಗಕ್ಕೆ ಅನ್ಯಾಯ

ಸಿದ್ದರಾಮಯ್ಯನವರಿಂದ ಅಹಿಂದ ವರ್ಗಕ್ಕೆ ಅನ್ಯಾಯವಾಗಿದ್ದು,  ಹೆಚ್.ವಿಶ್ವನಾಥ್ ಎಂಟಿಬಿ‌ ನಾಗರಾಜ್ ಸೋಲಿಗೆ ಸಿದ್ದರಾಮಯ್ಯನವರೇ ಕಾರಣರಾಗಿದ್ದು, ಪ್ರಮುಖವಾಗಿ ಕುರುಬ ಸಮಾಜದವರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಅದೇ ಸಿಎಂ ಯಡಿಯೂರಪ್ಪ ಅಹಿಂದ ವರ್ಗಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಈಗ ಉಪಚುನಾವಣೆಯಲ್ಲಿ ಗೆದ್ದಿರುವ ಬಹುತೇಕರು ಅಹಿಂದ ವರ್ಗದವರು ಎಂದು ಅಹಿಂದ ನಾಯಕ ಮುಕುಡಪ್ಪ ಹೇಳಿದ್ದಾರೆ.
First published:December 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ