ರಾಯಚೂರು (ಮೇ 20): ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾರ್ಯಕರ್ತನಿಂದ ಚಪ್ಪಲಿ ಹಾಕಿಸಿಕೊಂಡಿದ್ದಾರೆ. ರಾಯಚೂರಿನ (Raichuru) ಗಬ್ಬೂರಿನ ಬೂದಿ ಬಸವೇಶ್ವರ ಮಠದಲ್ಲಿ ಘಟನೆ ನಡೆದಿದೆ.75 ಜೋಡಿಯ ಸಾಮೂಹಿಕ ವಿವಾಹ (Mass Wedding) ಕಾರ್ಯಕ್ರಮಕ್ಕೆ ಬಂದಿದ್ದ ಸಿದ್ದರಾಮಯ್ಯಮಠಕ್ಕೆ ಭೇಟಿ ನೀಡಿದ ವೇಳೆ ಚಪ್ಪಲಿ ಹೊರಗೆ ಬಿಟ್ಟು ಹೋಗಿದ್ರು ಬಳಿಕ ವಾಪಸ್ ಹೊರಡುವ ಮುನ್ನ ಕಾರ್ಯಕರ್ತ (Activist) ಸಿದ್ದರಾಮಯ್ಯ ಕಾಲಿಗೆ ಚಪ್ಪಲಿ ಹಾಕಿದ್ದಾನೆ ಈ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಸಾಮೂಹಿಕ ವಿವಾಹದಲ್ಲಿ ಸಿದ್ದರಾಮಯ್ಯ ಭಾಗಿ
ಗಬ್ಬೂರು ಗ್ರಾಮದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ರು. 75 ಜೋಡಿಗಳ ಸಾಮೂಹಿಕ ವಿವಾಹ ಸಂಭ್ರಮದಿಂದ ನಡೆಯಿತು. ಇದೇ ವೇಳೆ ಮಾತಾಡಿದ ಸಿದ್ದರಾಮಯ್ಯ ನವವರ- ವಧುಗಳಿಗೆ ಶುಭ ಕೋರಿದ್ರು. ಗುರುವಿನ ಕುಟುಂಬದವರು ಮೊದಲಿನಿಂದಲೂ ನನಗೆ ಆಪ್ತರು, ವೇದಿಕೆ ಮೇಲೆ ಇದ್ದ ರಂಭಾಪುರಿಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಮದುವೆ ಕಾರ್ಯಕ್ರಮ ಜಾತ್ರೆ ಮಾದರಿಯಲ್ಲಿ ನಡೆದಿದೆ.
ಮದುವೆ ಮಾಡಿ ನೋಡು, ಮನೆ ಕಟ್ಟಿನೋಡು
ಇತ್ತೀಚಿನ ದಿನಗಳಲ್ಲಿ ಮದುವೆ ದುಬಾರಿ ಆಗಿವೆ, ಹಳ್ಳಿಯಲ್ಲಿ ಒಂದು ಮಾತು ಇತ್ತು. ಮದುವೆ ಮಾಡಿ ನೋಡು, ಮನೆ ಕಟ್ಟಿನೋಡು ಎಂದು, ಮದುವೆ ಮಾಡಿದ್ರೆ ಸಾಲಗಾರ ಆಗುತ್ತಾರೆ ಎಂಬ ಮಾತು ಇದೆ. ಮದುವೆ ಮಾಡುವುದು ಈಗ ಕಾಲದಲ್ಲಿ ಸುಲಭದ ಕೆಲಸವಲ್ಲ. ಮದುವೆಯಲ್ಲಿ ಶ್ರೀಮಂತರು ಸಂಪತ್ತು ಪ್ರದರ್ಶನ ಮಾಡುತ್ತಾರೆ. ಬಡವರು ಶ್ರೀಮಂತರಂತೆ ಮದುವೆ ಮಾಡಬಾರದು. ಸರಳವಾಗಿ ಮದುವೆ ಮಾಡಿದ್ರೂ ಗಂಡ- ಹೆಂಡತಿ ಆಗುತ್ತಾರೆ. ಸಾಲ- ಸೂಲ ಮಾಡಿ ಮದುವೆ ಮಾಡಬಾರದು. ಮದುವೆ ಮಾಡಿ ಬಡವರು ಆಗಬಾರದು ಎಂದು ಜನರಿಗೆ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ರು.
ಇದನ್ನೂ ಓದಿ: Supreme Court: ಕರ್ನಾಟಕದ 3 ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ರಪ್ತಿಗೆ ಸುಪ್ರೀಂ ಕೋರ್ಟ್ನಿಂದ ಗ್ರೀನ್ ಸಿಗ್ನಲ್
ಕ್ಯಾಸ್ ಲೆಸ್ ಮತ್ತು ಕಾಸ್ಟ್ ಲೆಸ್ ಸಮಾಜ ಆಗಬೇಕು
ಸಾಮಾಜಿಕ ವ್ಯವಸ್ಥೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನ ಬಂದ ಮೇಲೆ ಜಾತಿ ಮತ್ತು ವರ್ಗಗಳು ಇಲ್ಲ. ಜಾತಿ ವ್ಯವಸ್ಥೆ ಮನುಷ್ಯ ಹುಟ್ಟು ಹಾಕಿದ್ದು, ದೇವರು ಅಲ್ಲ ಎಂದ್ರು. ಕ್ಯಾಸ್ ಲೆಸ್ ಮತ್ತು ಕಾಸ್ಟ್ ಲೆಸ್ ಸಮಾಜ ಆಗಬೇಕು. ನಮ್ಮ ಧರ್ಮವನ್ನು ನಾವು ನಿಷ್ಠೆಯಿಂದ ಪಾಲನೆ ಮಾಡಬೇಕು. ಸಂವಿಧಾನದಲ್ಲಿ ಸಹಿಷ್ಣುತೆ ಮತ್ತು ಸಹಭಾಳ್ವೆ ಸಂವಿಧಾನದಲ್ಲಿ ತಿಳಿಸಲಾಗಿದೆ.
ಬಡ- ಶ್ರೀಮಂತ ಎಂಬ ಕಂದಕ ಹೋಗಿ ಎಲ್ಲರೂ ಸಮಾನವಾಗಿ ಬದುಕಬೇಕು, ಸರ್ವ ಜನಾಂಗದ ಶಾಂತಿಯ ತೋಟ ಕವಿತೆಯನ್ನ ಹೇಳಿ, ಕವಿ ಕುವೆಂಪು ಅವರ ಸಾಲುಗಳನ್ನು ಸಿದ್ದರಾಮಯ್ಯ ನೆನಪಿಸಿದ್ರು. ಇದೇ ವೇಳೆ ವೇದಿಕೆ ಬಳಿ ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಅಭಿಮಾನಿಗಳು ಘೋಷಣೆ ಕೂಗಿದ್ರು.
ಮುಂದಿನ ಸಿಎಂ ಸಿದ್ದರಾಮಯ್ಯ
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ರು. ಕಾರ್ ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದ ಸಿದ್ದರಾಮಯ್ಯ ಅವ್ರು ಕೆಳಗಿಳಿಯುತ್ತಿದ್ದಂತೆ ಸಂಗೊಳ್ಳಿ ರಾಯಣ್ಣ ಫೋಟೊ ನೀಡಿದ ಅಭಿಮಾನಿಗಳು ಜೈಕಾರ ಹಾಕಿದ್ರು.
ಇದನ್ನೂ ಓದಿ: CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್ಡಿಕೆ ಪ್ರತ್ಯೇಕ ಭೇಟಿ
ಇಂದು ರಾಯಚೂರು ಜಿಲ್ಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ರು. ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿ ಪರಿಶೀಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ರು. ಕಳಪೆ ಕಾಮಗಾರಿ ಆರೋಪ ಹಿನ್ನೆಲೆ ಇಂದು ಕಾಲುವೆ ಪರಿಶೀಲನೆ ನಡೆಸಲಾಯ್ತು.ಕಳಪೆ ಕಾಮಗಾರಿ ಆರೋಪ ಹಿನ್ನೆಲೆ ಈ ಹಿಂದೆ ಸದನ ಸಮಿತಿ ಪರಿಶೀಲನೆಗೆ ಬಂದಿತ್ತು. ಅಭಯ್ ಪಾಟೀಲ್ ನೇತೃತ್ವದಲ್ಲಿ ಬಂದಿದ್ದ ಸದನ ಸಮಿತಿ ಜೊತೆ ಗುತ್ತಿಗೆದಾರರ ಬೆಂಬಲಿಗರು ವಾಗ್ವಾದ ನಡೆಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ