ಬೆಂಗಳೂರು: ಬಿಜೆಪಿ (BJP) ಮಾಡಿದ್ದು ಜಾತಿವಾದದ ರಾಜಕಾರಣ ಅಲ್ಲ. ಬಿಜೆಪಿ ಮಾಡಿದ್ದು, ಹಿಂದುತ್ವದ, ವಿಕಾಸದ ರಾಜಕಾರಣ. ನಮ್ಮದು ಅಭಿವೃದ್ಧಿ ರಾಜಕಾರಣ. ಆದರೆ ಮನೆಹಾಳು ರಾಜಕಾರಣ ಮಾಡಿದ್ದು ಕಾಂಗ್ರೆಸ್( Congress), ಜಾತಿ ರಾಜಕಾರಣ ಮಾಡಿದ್ದು ಕಾಂಗ್ರೆಸ್. ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಹೆಸರಿಟ್ಟಿದ್ದು ನಾನಲ್ಲ, ಜನ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T. Ravi) ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕುಕ್ಕರ್ ಮೇಲೆ ಡಿ.ಕೆ. ಶಿವಕುಮಾರ್ (D.K.Shivakumar) ಅವರಿಗೆ ಪ್ರೀತಿ ಬಂದಿದೆ. ಕುಕ್ಕರ್ ಬಿರಿಯಾನಿ ಮಾಡಲು ತೆಗೆದುಕೊಂಡು ಹೋಗುತ್ತಿರಲಿಲ್ಲ. ಬ್ಲಾಸ್ಟ್ ಮಾಡಲು ಶಾರೀಕ್ ಕುಕ್ಕರ್ ತೆಗೆದುಕೊಂಡು ಹೋಗುತ್ತಿದ್ದ ಎಂದು ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ದ ಸಿಟಿ ರವಿ ಟೀಕೆ
2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಇಂದು ರಾಜ್ಯದಲ್ಲಿ ಬಿಜೆಪಿ 24 ಪ್ರಕೋಷ್ಠಗಳ ಸಮಾವೇಶವನ್ನು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಂಡಿತ್ತು. ಈ ವೇಳೆ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಸಿ.ಟಿ. ರವಿ ಅವರು, ನಮ್ಮ ತಾಕತ್ ಇರೋದೇ ಹಿಂದುತ್ವದಲ್ಲಿ, ಅಭಿವೃದ್ಧಿ ರಾಜಕಾರಣದಲ್ಲಿ ಮನೆ ಒಡೆಯುವ ಜಾತಿ ರಾಜಕಾರಣ ನಮ್ಮದಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ.
ಸಿದ್ರಾಮುಲ್ಲಾ ಖಾನ್ ಹೆಸರು ನಾನು ಇಟ್ಟಿದ್ದಲ್ಲ, ಜನ ಇಟ್ಟದ್ದು
ನಂತರ ಸಿದ್ದರಾಮಯ್ಯ ಅಂತ ಅವರ ತಂದೆ ಹೆಸರಿಟ್ಟರು. ಆದರೆ ಜನ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಹೆಸರಿಟ್ಟಿದ್ದಾರೆ. ಸಿದ್ರಮುಲ್ಲಾ ಖಾನ್ ಎಂಬ ಹೆಸರು ನಾನು ಇಟ್ಟಿದ್ದಲ್ಲ. ರಾಜ್ಯದ ಜನ ಇಟ್ಟ ಹೆಸರಾಗಿದೆ. ಸಿದ್ದರಾಮಯ್ಯ ಅಂತ ಹೆಸರಿಟ್ಟ ಅವರ ತಂದೆಯ ಆತ್ಮ ವಿಲ ವಿಲ ಅಂತ ಒದ್ದಾಡುತ್ತಿರಬಹುದು ಎಂದು ಟೀಕಿಸಿದ್ದಾರೆ.
ಟಿಪ್ಪು ಜಯಂತಿ ಆಚರಿಸಿದ ಮತಾಂಧ ರಾಜಕಾರಣಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರೇ ನಾನು ಶುದ್ಧ ಅಂತ ಹೇಳಿಕೊಳ್ಳಲೂ ಶುದ್ಧತೆ ಇರಬೇಕು. ಶುದ್ಧತೆ ಇಲ್ಲದವರು ಬೆರಕೆಯ ರಾಜಕಾರಣಿ ಆಗುತ್ತಾರೋ ಹೊರತು, ಶುದ್ಧ ಆಗುವುದಕ್ಕೆ ಸಾಧ್ಯವಿಲ್ಲ. ಒಂದು ಜನಾಂಗಕ್ಕೆ ಮಾತ್ರ ಯೋಜನೆ ತರುವುದು ಮತಾಂಧ ಅಂತಾರೆ. ಶಾದಿ ಭಾಗ್ಯ, ಶಾಲಾ ಪ್ರವಾಸ ಯೋಜನೆ ಯಾರಿಗಾಗಿ ತಂದ್ರಿ ಸಿದ್ದರಾಮಯ್ಯ? ಸಬ್ ಕಾ ಸಾತ್ ರಾಜಕಾರಣ ಮಾಡಿದ್ದು ಬಿಜೆಪಿ, ಮತಾಂಧತೆಯ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಎಂದು ಟಾಂಗ್ ನೀಡಿದ್ದಾರೆ.
ಕುಕ್ಕರ್ ಮೇಲೆ ಡಿಕೆಶಿ ಅಣ್ಣನಿಗೆ ಪ್ರೀತಿ ಬಂದಿದೆ
ಡಿಜೆ ಹಳ್ಳಿ, ಕೆಜಿ ಹಳ್ಳಿ ಆರೋಪಗಳಿಗೆ ಡಿ.ಕೆ. ಶಿವಕುಮಾರ್ ‘ದೆ ಆರ್ ಮೈ ಬ್ರದರ್ಸ್’ ಅಂದರು, ಕುಕ್ಕರ್ ಮೇಲೆ ಡಿಕೆಶಿ ಅಣ್ಣನಿಗೆ ಪ್ರೀತಿ ಬಂದಿದೆ. ಕುಕ್ಕರ್ ಬಿರಿಯಾನಿ ಮಾಡುವುದಕ್ಕೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಬ್ಲಾಸ್ಟ್ ಮಾಡಲು ಕುಕ್ಕರ್ ತೆಗೆದುಕೊಂಡು ಹೋಗುತ್ತಿದ್ದ. ಮನೆಹಾಳು ರಾಜಕಾರಣ ಮಾಡಿದ್ದು ಕಾಂಗ್ರೆಸ್, ಜಾತಿ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: C T Ravi: ನನ್ನನ್ನು ಹಿಂದೂ ಹುಲಿ ಅಂತ ಕರೆಯಬೇಕೇ ವಿನಃ ಮುಲ್ಲಾ ಅಂತಲ್ಲ; ಸಿ ಟಿ ರವಿ
ಡಿಕೆಶಿ ವಿರುದ್ಧ ಬಿಜೆಪಿ ಸರಣಿ ಟ್ವೀಟ್
ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಶಿವಕುಮಾರ್ ಅವರಿಗೆ ಭಯೋತ್ಪಾದಕರೇ ಬ್ರದರ್ಸ್. ಒಬ್ಬರು ಟಿಪ್ಪು ಪರ ಮತ್ತೊಬ್ಬರು ಉಗ್ರರ ಪರ. ಕಳೆದ 70 ವರ್ಷಗಳಿಂದ ಈ ರೀತಿಯ ಓಲೈಕೆ ರಾಜಕಾರಣ ಮಾಡಿದ್ದರಿಂದಲೇ ಇಂದು ದೇಶದಲ್ಲಿ ಕಾಂಗ್ರೆಸ್ನನ್ನು ಹುಡುಕಬೇಕಾಗಿದೆ.
ಇದನ್ನೂ ಓದಿ: BJP Tweet: ಡಿ ಕೆ ಶಿವಕುಮಾರ್ಗೆ ಭಯೋತ್ಪಾದಕರೇ ಬ್ರದರ್ಸ್, ಡಿಕೆಶಿ ವಿರುದ್ಧ ಬಿಜೆಪಿ ಸಾಲು ಸಾಲು ಟ್ವೀಟ್
ಸಿದ್ದರಾಮಯ್ಯರಿಗೆ ಹೇಗೆ ಟಿಪ್ಪು ಎಂಬ ಒಬ್ಬ ಐಕಾನ್ ಇದ್ದನೋ, ಹಾಗೆಯೇ ಡಿಕೆ ಶಿವಕುಮಾರ್ ಸಹ ತಮಗೆ ಬೇಕಾದ ಒಬ್ಬ ಐಕಾನ್ನನ್ನು ಹುಡುಕಿಕೊಂಡಿದ್ದಾರೆ. ಅವನೇ ಕುಕ್ಕರ್ ಬ್ಲಾಸ್ಟ್ ಆರೋಪಿ ಅಥವಾ ಡಿಕೆಶಿ ಬ್ರದರ್ ಶಾರಿಖ್ ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ