ಹಾವಿನ ದ್ವೇಷದಂತೆ ಸಿದ್ದರಾಮಯ್ಯ ಈ ಚುನಾವಣೆ ಮೂಲಕ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ; ಶ್ರೀರಾಮುಲು

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಪರಿವಾರ ಮತ್ತು ತಳವಾರವನ್ನು ಎಸ್ಟಿಗೆ ಸೇರಿಸಲು ನಾನು 1989ರಿಂದ ಹೋರಾಟ ಮಾಡಿದ್ದೆ. ಹಾವನೂರು ಮತ್ತು ನಾನು ಒಟ್ಟಿಗೆ ಪ್ರಯತ್ನ‌ ಮಾಡಿದ್ವಿ. ಈಗ ಶ್ರೀರಾಮುಲು ಹೋರಾಟದಿಂದ ಫಲ ಸಿಕ್ಕಿದೆ ಎಂದರು.

HR Ramesh | news18
Updated:April 7, 2019, 1:02 PM IST
ಹಾವಿನ ದ್ವೇಷದಂತೆ ಸಿದ್ದರಾಮಯ್ಯ ಈ ಚುನಾವಣೆ ಮೂಲಕ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ; ಶ್ರೀರಾಮುಲು
ಶ್ರೀರಾಮುಲು, ಸಿದ್ದರಾಮಯ್ಯ
  • News18
  • Last Updated: April 7, 2019, 1:02 PM IST
  • Share this:
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಈ ಚುನಾವಣೆ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ದೇವೆಗೌಡರನ್ನೇ ಸೋಲಿಸುವ ಪ್ಲಾನ್ ಮಾಡಿದ್ದಾರೆ. ಹಾವಿನ ದ್ವೇಷದಂತೆ ಸಿದ್ದರಾಮಯ್ಯ ಈ ಚುನಾವಣೆ ಮೂಲಕ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಆರೋಪ ಮಾಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು  ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅವರನ್ನು ಲೋಕಸಭೆ ಚುನಾವಣೆಯಲ್ಲಿ ಮೂಲೆಗುಂಪು‌ ಮಾಡಲಾಗಿದೆ. ಬ್ಯಾನರ್​ಗಳಲ್ಲಿ ಅವರ ಹೆಸರು ಪೋಟೋ ಇಲ್ಲ. ಚಾಮುಂಡೇಶ್ವರಿ ಸೋಲಿನ ನಂತರ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನೆ ಸೋಲಿಸಿ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.

ಸಚಿವ ಜಿ.ಟಿ.ದೇವೆಗೌಡರು ಈಗಾಗಲೇ ತಿಳಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಸೋತರೆ ಜವಾಬ್ದಾರಿ ನಾನಲ್ಲ ಅಂತ. ಇದರಿಂದಲೇ ತಿಳಿಯುತ್ತೆ ಮೈತ್ರಿಯಲ್ಲಿ ಸಮನ್ವಯತೆ ಇಲ್ಲ ಎಂಬುದು. ಈ ಚುನಾವಣೆ ಮುಗಿಯಬೇಕಷ್ಟೆ. ಆಮೇಲೆ ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯ ನುಡಿದರು.

ಇದನ್ನು ಓದಿ: ಮೈಸೂರಿನಲ್ಲಿ ಕೈ-ಜೆಡಿಎಸ್ ನಾಯಕರ ಜಂಟಿ ಸುದ್ದಿಗೋಷ್ಠಿ; ಒಟ್ಟಾಗಿ ಕೆಲಸ ಮಾಡಲು ಉಭಯ ಮುಖಂಡರ ಕರೆ

ಸಂವಿಧಾನ ಬದಲಾವಣೆ ಮಾಡೋದು, ಮಗ್ಗಿ ಪುಸ್ತಕ, ಪಠ್ಯ ಪುಸ್ತಕ ಅಲ್ಲ. ಸಂವಿಧಾನದ ಬಗ್ಗೆ ‌ಮಾತನಾಡುವಾಗ ಯಾರೇ ಆಗಲಿ ಎಚ್ಚರಿಕೆಯಿಂದ ಮಾತನಾಡಬೇಕು. ಲಾಯರ್ ಆಗಿರುವ ಸಿದ್ದರಾಮಯ್ಯ ಸಂವಿಧಾನ ತಿದ್ದುಪಡಿ ಕುರಿತಾದ ತೀರ್ಪುಗಳನ್ನು ಸರಿಯಾಗಿ ಓದಿಕೊಳ್ಳಲಿ. ಸಂವಿಧಾನದ ಮೂಲ ಆಶಯವನ್ನು ಬದಲಾವಣೆ ಮಾಡಲು ಲೋಕಸಭೆಗೂ ಅಧಿಕಾರ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಷ್ಟು ಸುಲಭವಾಗಿ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಸಂವಿಧಾನ ಸರ್ವಶ್ರೇಷ್ಠವಾದದ್ದು ಎಂದು ಸ್ವತಃ ನರೇಂದ್ರ ಮೋದಿ ಗೆದ್ದ ಮೇಲೆ ಹೇಳಿದ್ದಾರೆ ಎಂದರು.

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಪರಿವಾರ ಮತ್ತು ತಳವಾರವನ್ನು ಎಸ್ಟಿಗೆ ಸೇರಿಸಲು ನಾನು 1989ರಿಂದ ಹೋರಾಟ ಮಾಡಿದ್ದೆ. ಹಾವನೂರು ಮತ್ತು ನಾನು ಒಟ್ಟಿಗೆ ಪ್ರಯತ್ನ‌ ಮಾಡಿದ್ವಿ. ಈಗ ಶ್ರೀರಾಮುಲು ಹೋರಾಟದಿಂದ ಫಲ ಸಿಕ್ಕಿದೆ ಎಂದರು.

 
First published:April 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ