ಬೆಂಗಳೂರು: ಟಿಪ್ಪುವಿನಂತೆ ಸಿದ್ದರಾಮಯ್ಯ (Siddaramaiah) ಅವರನ್ನು ಹೊಡದು ಹಾಕಬೇಕು ಎಂದಿದ್ದ ಸಚಿವ ಡಾ. ಅಶ್ವತ್ಥ್ ನಾರಾಯಣ್ (Minister Ashwath Narayan) ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಲಾಪದಲ್ಲಿ ಮಾತಾಡಿದ ಸಿದ್ದರಾಮಯ್ಯ, ಅಶ್ವತ್ಥ ನಾರಾಯಣ್ ಮನುಷ್ಯರೋ (Human) ರಾಕ್ಷಸರೋ ನೀವೆ ತಿಳಿದುಕೊಳ್ಳಿ. ನಾನು ಎಲ್ಲರನ್ನೂ ಪ್ರೀತಿಸ್ತಿನಿ ಎಂದು ಟಾಂಗ್ ಕೊಟ್ಟಿದ್ದಾರೆ. ಬಳಿಕ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಅಶ್ವತ್ಥ್ ನಾರಾಯಣ್, ನನ್ನ ಹೇಳಿಕೆ ತಿರುಚಲಾಗಿದೆ. ಒಂದು ವೇಳೆ ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೀನಿ ಎಂದಿದ್ದಾರೆ. ಬಳಿಕ ಮಾತಾಡಿದ ಸಿದ್ದರಾಮಯ್ಯ, ಮುಗಿಸಿಬಿಡಿ ಅಂದ್ರೆ ಏನ್ ಅರ್ಥ? ಟಿಪ್ಪು ಸುಲ್ತಾನ್ (Tipu Sultan) ಮುಗಿಸಿದ ರೀತಿ, ಸಿದ್ದರಾಮಯ್ಯನ ಮುಗಿಸಿ ಅಂದ್ರೆ ಏನ್ ಅರ್ಥ ಎಂದು ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ವಾಗ್ದಾಳಿ
ಇತ್ತ ಟ್ವಿಟರ್ನಲ್ಲೂ ಕೊಲೆ ಗಡುಕ ಮನಸ್ಥಿತಿಯ ಬಿಜೆಪಿ ಹ್ಯಾಶ್ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಹತ್ಯೆ ಮಾಡಲು ಕರೆ ನೀಡುವ ಸಚಿವರಿಗೆ ಸಂಪುಟದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ರಾಜ್ಯಪಾಲರು ತಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸುತ್ತೇನೆ.
ಜನತೆಯ ಮಾನ-ಪ್ರಾಣ ರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ. ಇಂತಹ ಸಚಿವರು ತಾವೇ ಖುದ್ದಾಗಿ ಹತ್ಯೆಗೆ ಪ್ರಚೋದಿಸಿದರೆ? ಅಶ್ವತ್ಥ್ ನಾರಾಯಣ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆ ಇರುತ್ತದೆ? ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಾವಿನ ಭಯ ನನಗಿಲ್ಲ. ಇಂತಹ ಕೊಲೆಗಡುಕ ಮನಸ್ಥಿತಿಯವರು ಅಧಿಕಾರದಲ್ಲಿದ್ದರೆ ರಾಜ್ಯದ ಯಾವುದೇ ವ್ಯಕ್ತಿ ಸುರಕ್ಷಿತನಲ್ಲ. ಸೋಲಿನ ಭಯದಿಂದ ತತ್ತರಿಸಿಹೋಗಿರುವ ಈ ಕೊಲೆಗಡುಕ ಮನಸ್ಸುಗಳು ಗೆಲುವಿಗಾಗಿ ಯಾರ ಹತ್ಯೆಯನ್ನೂ ಮಾಡಬಹುದು.
ಈ ಬಗ್ಗೆ ಜನ ಎಚ್ಚರಗೊಳ್ಳಬೇಕು. 6/6#ಕೊಲೆಗಡುಕಮನಸ್ಥಿತಿಯ_ಬಿಜೆಪಿ
— Siddaramaiah (@siddaramaiah) February 16, 2023
ಕೊಲೆಗಡುಕ ಮನಸ್ಥಿತಿಯ ಅಶ್ವತ್ಥ್ ನಾರಾಯಣ್ ಅಂತಹವರು ಸಾರ್ವಜನಿಕ ಜೀವನದಲ್ಲಿ ಇರಲಿಕ್ಕೆ ನಾಲಾಯಕ್. ಇಂತಹವರು ಉನ್ನತ ಶಿಕ್ಷಣ ಸಚಿವರಾದರೇ? ಬಿಜೆಪಿ ಸಮಾಜಕ್ಕೆ ಯಾವ ಸಂದೇಶ ಕೊಡಲಿಕ್ಕೆ ಹೊರಟಿದೆ?
ಬಿಜೆಪಿಯ ಹೊಡಿ, ಬಡಿ ಸಂಸ್ಕೃತಿಯೇ ಅವರ ಬೌದ್ಧಿಕ ದಿವಾಳಿತನದ ಪ್ರತೀಕ. ಸೈದ್ಧಾಂತಿಕವಾಗಿ ನನ್ನನ್ನು ಎದುರಿಸುವ, ಇಲ್ಲವೇ ಸಾಧನೆಯ ಆಧಾರದಲ್ಲಿ ಮತ ಕೇಳುವ ಧಮ್-ತಾಕತ್ ಅವರಿಗೆ ಇಲ್ಲ. ಬಿಜೆಪಿ ಅವರದು ಶೂನ್ಯ ಸಾಧನೆ ಮತ್ತು ಪೊಳ್ಳು ಸಿದ್ಧಾಂತ.
ಸೈದ್ಧಾಂತಿಕವಾಗಿ ಎದುರಿಸಲಾಗದ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರನ್ನು ಗೋಡ್ಸೆ ಕೊಂದ. ಅದೇ ಗೋಡ್ಸೆ ಸಂತಾನವೇ ವಿದ್ವಾಂಸರಾಗಿದ್ದ ಎಂ.ಎಂ.ಕಲಬರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು.
ಇದನ್ನೂ ಓದಿ: Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!
ಇತ್ತ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಅಶ್ವತ್ಥ್ ನಾರಾಯಣ ಅಲ್ಲ, ಆತ ಮಾನಸಿಕ ಅಸ್ವತ್ಥ್ ನಾರಾಯಣ. ಬಿಜೆಪಿಗೆ ಜನರ ಅಭಿವೃದ್ಧಿ ಬೇಕಿಲ್ಲ, ಕೇವಲ ಕೋಮು ದ್ವೇಷ ಬೇಕು ಅಂತ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಬಿಜೆಪಿ ಸಂಸ್ಕೃತಿ ಏನೆಂಬುದು ಹೃದಯದಿಂದ ಹೊರಬಂದಿದೆ ಅಂತ ಲೇವಡಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ