Siddaramaiah: ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಬಿಜೆಪಿ ಸರ್ಕಾರದ ವಿರುದ್ಧ ಕಿಡಿ

ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡು ಬಿಟ್ಟಿದ್ದಾರೆ.  ನಮ್ ಕಾಲದಲ್ಲಿ ನಾವು ತೆರವು ಮಾಡಿದ್ವಿ, ಈಗ ಯಾವ ಕೆಲಸವೂ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಂಗಳೂರು (ಮೇ 19): ಸಿಎಂ ಬಸವರಾಜ ಬೊಮ್ಮಾಯಿ (CM Basvaraj Bommai) ಸಿಟಿ ರೌಂಡ್ಸ್​ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ರು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಫಾತೀಮ ನಗರಕ್ಕೆ ಭೇಟಿ ನೀಡಿ ಮಳೆ ಹಾನಿಗೊಳಗಾದವರ ಸಮಸ್ಯೆ ಕೇಳಿದ್ರು. ಸಿದ್ದರಾಮಯ್ಯಗೆ ಶಾಸಕರಾದ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ (Ramalinga Reddy) ಸಾಥ್ ನೀಡಿದ್ರು. ಶಿವಾಜಿನಗರ ಮಳೆ (Rain) ಹಾನಿ ಪ್ರದೇಶಗಳಿಗೂ ಭೇಟಿ ನೀಡಿದ ಸಿದ್ದರಾಮಯ್ಯ, ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗಿದರ ಬಗ್ಗೆ ಪರಿಶೀಲನೆ ನಡೆಸಿದ್ರು.

ಸಿದ್ದರಾಮಯ್ಯಗೆ ದೂರಿನ ಸುರಿಮಳೆ

ಇನ್ನು ಇದೇ ವೇಳೆ ಮಾತಾಡಿದ ಅವ್ರು, ಲೋ ಲೈನ್ ಏರಿಯಾಗೆ ನೀರು ಹೆಚ್ಚಿಗೆ ಬಂದಿದೆ, ಕೆಲವು ಕಡೆ ಅರ್ಧಂಬರ್ಧ ಕೆಲಸ ಆಗಿದೆ. ಈ ಸರ್ಕಾರ ಬಂದ ಮೇಲೆ ರಾಜಕಾಲುವೆ ಬಗ್ಗೆ ಸರಿಯಾಗಿ ಕೆಲಸ ಮಾಡಲಿಲ್ಲ, ಮೂರು ವರ್ಷದಿಂದ ಈ ಸರ್ಕಾರ ಏನು ಕೆಲಸ ಮಾಡಲಿಲ್ಲ, ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಈ ಕೆಲಸ ತಪ್ಪಿಸಬಹುದಾಗಿದೆ. ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗುತ್ತದೆ. ಪರಿಹಾರ ಎಲ್ಲರಿಗೂ ಕೊಡಬೇಕು, ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಎಲ್ಲರಿಗೂ ಪರಿಹಾರ ಕೊಡಬೇಕು.

ರಾಜಕಾಲುವೆ ಕೆಲಸ ಮಾಡಿದವರು ಯಾರು?

ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡು ಬಿಟ್ಟಿದ್ದಾರೆ.  ನಮ್ ಕಾಲದಲ್ಲಿ ನಾವು ತೆರವು ಮಾಡಿದ್ವಿ, ಈಗ ಯಾವ ಕೆಲಸವೂ ಆಗಿಲ್ಲ. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಬೇಕು. ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಕೆಲಸ ಆಗಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಅವರ ಕಾಲದಲ್ಲಿ ಅವರು ಏನ್ ಮಾಡಿದರು ಎಂಬುದನ್ನ ಮಾತನಾಡಲಿ,  ರಾಜಕಾಲುವೆ ಕೆಲಸ ಮಾಡಿದವರು ಯಾರು? ನಮ್ಮ ಸರ್ಕಾರ ಇದ್ದಾಗ ಇದೆಲ್ಲವನ್ನ ಮಾಡಿದ್ವಿ. ಯಾರ್ ಯಾರ್ ಎಷ್ಟೆಷ್ಟು ಹಣ ಬಿಡುಗಡೆ ಮಾಡಿದ್ರು ಎಂಬುದನ್ನ ಹೇಳಲಿ.

ಕುಮಾರಸ್ವಾಮಿ ಹೇಳಿಕೆಗೂ ಕಿಡಿ

ನಮ್ಮ ಕಾಲದಲ್ಲಿ ರಾಮಲಿಂಗಾರೆಡ್ಡಿ, ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ರು, ಹಲವು ವರ್ಷಗಳಿಂದ ರಾಮಲಿಂಗಾರೆಡ್ಡಿ ನಗರದಲ್ಲಿ ಕೆಲಸ ಮಾಡಿದ್ದಾರೆ. ದಿನೇಶ್ ಗುಂಡೂರಾವ್ ಅವರ ತಂದೆ ಕಾಲದಿಂದಲೂ ನಗರದ ರಾಜಕೀಯ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಹ ಸಿಎಂ ಆಗಿದ್ದವರು, ನಾನು ಸಿಎಂ ಆಗಿದ್ದೆ. ಯಾರ ಕಾಲದಲ್ಲಿ ಎಷ್ಟು ಹಣ ಬಿಡುಗಡೆಯಾಯಿತು ಅನ್ನೋದನ್ನ ಕುಮಾರಸ್ವಾಮಿ ಮಾಹಿತಿ ಕೊಡಲಿ, ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆಯಿದೆ.

ಒಳ್ಳೆಯ ಪದ ಬಳಕೆ ಬಿಟ್ಟು ಕೆಲಸ ಮಾಡ್ಲಿ

ನಗರದ ಬಿಬಿಎಂಪಿ, BWSSB, ಬಿಡಿಎ ನಡುವೆ ಸಮನ್ವಯ ಕೊರತೆಯಿದೆ. ಸರ್ಕಾರ ಹಣ ಬಿಡುಗಡೆ ಮಾಡದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಮಾಡಬೇಕಾದ ಕೆಲಸ ಮಳೆಗಾಲದಲ್ಲಿ ಮಾಡ್ತಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿರುವುದು ಒಂದು ಭಾಗ, ರಾಜಕಾಲುವೆ ಕ್ಲೀನ್​ ಮಾಡದೇ ಇರೋದು ನೀರು ನುಗ್ಗಲು ಕಾರಣವಾಗಿದೆ. ಸರ್ವ ವ್ಯಾಪಿ, ಅಭಿವೃದ್ಧಿ ನಿರಂತರ ಅನ್ನೋ ಒಳ್ಳೆಯ ಪದ ಬಳಕೆ ಬಿಟ್ಟು ಕೆಲಸ ಮಾಡ್ಲಿ.

ನಗರದ ಸಮಸ್ಯೆಗಳು ದುಪ್ಪಟ್ಟು ಆಗಿವೆ

ಬೆಂಗಳೂರು ಅಭಿವೃದ್ಧಿ ಖಾತೆ ಸಿಎಂ ಬಳಿಯಿದೆ, ಅವರೇ ಈ ಕೆಲಸ ಮಾಡಬೇಕು. ನಾನು ಇದ್ದಾಗ ಪ್ರತ್ಯೇಕವಾಗಿ ಬೇರೆಯವರಿಗೆ ನೀಡಿದ್ದೆ. ಈಗ ಬಿಜೆಪಿ ಸರ್ಕಾರ ಸಿಎಂ ಬಳಿ ಉಳಿಸಿಕೊಂಡು ನಗರದ ಸಮಸ್ಯೆಗಳು ದುಪ್ಪಟ್ಟು ಆಗಿವೆ. ಬಿಬಿಎಂಪಿ ಚುನಾವಣೆ ಮುಂದೂಡಿಕೆ ಮಾಡಿರುವುದು ಇದಕ್ಕೆ ಕಾರಣ. ಸೋಲಿನ ಭೀತಿಯಿಂದ ಒಂದು ವರ್ಷ ಎಂಟು ತಿಂಗಳಿಂದ ಚುನಾವಣೆ ನಡೆಸಿಲ್ಲ, ವಾರ್ಡ್ ನಲ್ಲಿ ಜನಪ್ರತಿನಿಧಿಗಳು ಇಲ್ಲ, ಅಧಿಕಾರಿಗಳ ಕೈಗೆ ಬಿಬಿಎಂಪಿ ನೀಡಿದ್ದಾರೆ.

ನಗರದ ಅಭಿವೃದ್ಧಿಯನ್ನ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಾನು ಇದ್ದಾಗ ಬೆಂಗಳೂರಿಗೆ ಹಣ ಬಿಡುಗಡೆ ಮಾಡಿದ್ದೆ. ಇವರು ಬಂದ ಮೇಲೆ ಏನು ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ರು.
Published by:Pavana HS
First published: