• Home
  • »
  • News
  • »
  • state
  • »
  • Siddaramaiah: ನಾಮಿನೇಷನ್ ಮಾಡೋಕೆ ಹೋಗ್ತಿಲ್ಲಪ್ಪ; ಕೋಲಾರದತ್ತ ಸಿದ್ದರಾಮಯ್ಯ

Siddaramaiah: ನಾಮಿನೇಷನ್ ಮಾಡೋಕೆ ಹೋಗ್ತಿಲ್ಲಪ್ಪ; ಕೋಲಾರದತ್ತ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಬಾದಾಮಿ, ವರುಣಾ, ಚಾಮರಾಜಪೇಟೆಯಲ್ಲೂ ಸ್ಪರ್ಧೆಗೆ ಒತ್ತಡ ಇದೆ. ಆದರೆ ಕೋಲಾರದಲ್ಲಿ ಜಾಸ್ತಿ ಒತ್ತಡ ಇದೆ. ಅದಕ್ಕಾಗಿ ನಾನು ಇಂದು ಅಲ್ಲಿಗೆ ಹೋಗ್ತಿದ್ದೇನೆ. ಇಂದು ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀನಿ ಎಂದು ಹೇಳಿದ್ದಾರೆ.

  • Share this:

ವಿಧಾನಸಭಾ ಕ್ಷೇತ್ರದ (Assembly constituency) ಹುಡುಕಾಟದಲ್ಲಿರುವ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Fromer CM Siddaramaiah), ಇಂದು ಕೋಲಾರದತ್ತ (Kolar) ಪ್ರಯಾಣ ಬೆಳೆಸಿದ್ದಾರೆ. ಕೋಲಾರಕ್ಕೆ ತೆರಳುತ್ತಿರುವ ಸಿದ್ದರಾಮಯ್ಯ ಅವರಿಗಾಗಿ ವಿಶೇಷ ಬಸ್ (Special Bus)​ ಸಹ ಸಿದ್ಧಗೊಂಡಿದೆ. ಈ ಸುಸಜ್ಜಿತ ಬಸ್​ ಎಸಿ, ಟಿವಿ ಸೇರಿದಂತೆ ಹಲವು ಸೌಕರ್ಯಗಳನ್ನು ಒಳಗೊಂಡಿದೆ. ಕೋಲಾರಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡುವ ಸಿದ್ದರಾಮಯ್ಯ, ನಾನೇನು ನಾಮಿನೇಷನ್ (Nomination) ಮಾಡಲು ಹೋಗ್ತಿಲ್ಲರಪ್ಪಾ, ಕೋಲಾರದ ಜನರನ್ನು ಭೇಟಿಯಾಗಲು ತೆರಳುತ್ತಿದ್ದೇನೆ ಎಂದು ಹೇಳಿದರು.


ಎಲ್ಲರು ಒಟ್ಟಾಗಿ ಹೋಗಬೇಕು, ಅದಕ್ಕಾಗಿ ಬಸ್ಸಿನಲ್ಲಿ ಹೋಗ್ತಿದ್ದೇವೆ. ಕೋಲಾರದವರು ನನ್ನನ್ನು ಕರೆಯುತ್ತಿದ್ದಾರೆ. ಅಲ್ಲಿ  ಶ್ರೀನಿವಾಸ್ ಗೌಡ ನಿಲ್ಲಲ್ಲ, ಅದಕ್ಕೆ ನೀವು ನಿಲ್ಲಿ ಅಂತಿದ್ದಾರೆ. ಅನೇಕ ಕಡೆಗಳಲ್ಲೂ ಕರೆಯುತ್ತಿದ್ದಾರೆ. ಅದಕ್ಕಾಗಿ ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗ್ತಿದ್ದೇನೆ ಎಂದು ತಿಳಿಸಿದರು.


ಸ್ಥಳೀಯ ನಾಯಕರ ಜೊತೆ ಚರ್ಚೆ


ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅಲ್ಲಿ ಸ್ಪರ್ಧೆ ಮಾಡ್ತೀನಿ. ಬಾದಾಮಿ, ವರುಣಾ, ಚಾಮರಾಜಪೇಟೆಯಲ್ಲೂ ಸ್ಪರ್ಧೆಗೆ ಒತ್ತಡ ಇದೆ. ಆದರೆ ಕೋಲಾರದಲ್ಲಿ ಜಾಸ್ತಿ ಒತ್ತಡ ಇದೆ. ಅದಕ್ಕಾಗಿ ನಾನು ಇಂದು ಅಲ್ಲಿಗೆ ಹೋಗ್ತಿದ್ದೇನೆ. ಇಂದು ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀನಿ ಎಂದು ಹೇಳಿದ್ದಾರೆ.


ಕೋಲಾರದಲ್ಲಿ ಸಿದ್ದು ಸ್ಪರ್ಧೆಗೆ ರೆಡಿಯಾಗ್ತಿದೆ ಅಖಾಡ!


ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಕೋಲಾರವೇ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಸೇಫ್ ಆಗಿರೋ ಕ್ಷೇತ್ರ ಎನ್ನುವ  ಮಾತುಗಳು ಸಹ ಪಕ್ಷದಲ್ಲಿ ಕೇಳಿಬರ್ತಿದೆ. ​


ಇದಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಥಳೀಯ ನಾಯಕ ಅಭಿಪ್ರಾಯಗಳನ್ನ ಸಂಗ್ರಹಿಸುತ್ತಿದ್ದಾರೆ.


ಇದನ್ನೂ ಓದಿ:  Hijab, ಕೇಸರಿ ಶಾಲು ಬಳಿಕ ಸಿಂಧೂರ ಸಮರ.. ಮಹತ್ವದ ಹೇಳಿಕೆ ನೀಡಿದ ಶಿಕ್ಷಣ ಸಚಿವ BC Nagesh


ಸಿದ್ದು ಸ್ಪರ್ಧೆಗೆ ಮುಖಂಡರ ಗ್ರೀನ್​ ಸಿಗ್ನಲ್​


ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನವೆಂಬರ್‌ 13 ರಂದು ಕೋಲಾರಕ್ಕೆ ಭೇಟಿ ನೀಡಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ನ.11) ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೋಲಾರದ ಹೊರವಲಯದ ನಂದಿನಿ‌ ಪ್ಯಾಲೇಸ್ ನಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಚರ್ಚೆಯಾಗಿದ್ದು, ಮುಖಂಡರಿಂದ ಸಿದ್ದು ಸ್ಪರ್ಧೆಗೆ ಒಮ್ಮತ ಸಮ್ಮತಿ ದೊರಕಿದೆ.


ಬಾದಾಮಿಯಲ್ಲೂ ಸ್ಪರ್ಧೆಗೆ ಆಗ್ರಹ


ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎನ್ನುವ ಕೂಗು ಬಾದಾಮಿ ಕ್ಷೇತ್ರದಿಂದಲೂ ಕೇಳಿ ಬರ್ತಿದೆ. ಸಿದ್ದರಾಮಯ್ಯ ಬಾದಾಮಿ ನನಗೆ ದೂರ ಆಗುತ್ತದೆ. ಇದರಿಂದ ಅಲ್ಲಿನ ಜನರ ಜೊತೆಗೆ ಹೆಚ್ಚು ಬೆರೆಯುವುದಕ್ಕೆ ಆಗುತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ 2023ರ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಅಸಾಧ್ಯ ಎಂದು ಹೇಳಿದ್ದಾರೆ. ಸಿದ್ದು ಪುತ್ರ  ಯತೀಂದ್ರ ಸಹ ಬಾದಾಮಿಯಲ್ಲಿ ತಂದೆ ಸ್ಪರ್ಧೆ ಮಾಡಿದ್ರೆ ಓಡಾಟಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Vivek Classroom: ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಕೇಸರಿ ಬಣ್ಣಕ್ಕೆ ಸರ್ಕಾರದ ಚಿಂತನೆ


ಅಪ್ಪನಿಗಾಗಿ ವರುಣ ಬಿಟ್ಟುಕೊಡಲು ಮಗ ರೆಡಿ


ಸಿದ್ದರಾಮಯ್ಯ ಪತ್ರ ಶಾಸಕ ಯತೀಂದ್ರ ಅವರು ತಂದೆಗಾಗಿ ವರುಣ ಕ್ಷೇತ್ರ ಬಿಟ್ಟು ಕೊಡುವುದಾಗಿಯೂ ಅನೇಕ ಬಾರಿ ಹೇಳಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಅವರ ಚುನಾವಣೆಯ ಕೊನೆಯ ಸ್ಪರ್ಧೆ ಯಾವ ಕ್ಷೇತ್ರದಿಂದ ಎಂಬುವುದು ಎಂದು ತಿಳಿದು ಬಂದಿಲ್ಲ. ತಂದೆ ವರುಣಾದಿಂದ ಸ್ಪರ್ಧೆ ಮಾಡಿದ್ರೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

Published by:Mahmadrafik K
First published: