news18-kannada Updated:October 25, 2020, 11:45 PM IST
ಬೀದರ್ನಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ಸಿದ್ದರಾಮಯ್ಯ
ಬೆಂಗಳೂರು (ಅ.25): ಭಾರೀ ಮಳೆ, ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆ ಸರ್ಕಾರದಿಂದ ಪರಿಹಾರ ನಿರೀಕ್ಷೆಯಲ್ಲಿದ್ದಾರೆ. ಮನೆ, ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿರುವ ಅವರಿಗೆ ಅಗತ್ಯ ಪರಿಹಾರ ಕ್ರಮ ಸಿಗಬೇಕಿದೆ. ಆದರೆ, ಸರ್ಕಾರದಿಂದ ಈವರೆಗೆ ಪ್ರವಾಹದ ಹಾನಿ ಸಮೀಕ್ಷೆಯೇ ಆಗಿಲ್ಲ. ಮುಖ್ಯಮಂತ್ರಿಗಳು ಸಮೀಕ್ಷೆ ಬದಲು ಕೇವಲ ವಿಮಾನದಲ್ಲಿಪರಿಸ್ಥಿರಿ ಅವಲೋಕಿಸಿ ಹೋದರು. ಇನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕಂದಾಯ ಸಚಿವರಾದ ಆರ್ ಅಶೋಕ್ ಕಾಟಾಚಾರದ ಭೇಟಿ ನೀಡಿದರು. ಜನರ ಬಳಿಯೇ ಹೋಗದ ಅವರು ಸಂತ್ರಸ್ತರ ಸ್ಥಿತಿ ಹೇಗೆ ಅರಿಯಲು ಸಾಧ್ಯ. ಕಳೆದ ವರ್ಷದ ಪ್ರವಾಹದ ಪರಿಹಾರವೇ ಇನ್ನು ಬಿಡುಗಡೆಯಾಗಿಲ್ಲ. ಈಗ ಈ ಬಾರಿ ಪರಿಹಾರವನ್ನು ಸಂತ್ರಸ್ತರು ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಾ ಎಂದು ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಾದ ಬೀದರ್ನ ಬಸವಕಲ್ಯಾಣ, ಹುಮ್ನಾಬಾದ್ ನಲ್ಲಿ ಇಂದು ಪ್ರವಾಹ ಸಮೀಕ್ಷೆ ನಡೆಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಈಗ ಪ್ರವಾಹದಿಂದಾಗಿ ಹಿಂಗಾರು ಬಿತ್ತನೆ ಮಾಡಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಮೂರು ತಿಂಗಳಿನಿಂದ ರೈತರು ಮಳೆ, ಪ್ರವಾಹದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಕ್ಷಣ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ರೈತರ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರವಾದ ಪತ್ರ ಬರೆದು ಅವರ, ಕಷ್ಟ ಮನದಟ್ಟು ಮಾಡುವ ಪ್ರಯತ್ನ ನಡೆಸುವೇ ಎಂದು ಇದೇ ವೇಳೆ ತಿಳಿಸಿದ್ದಾರೆ.
ಪ್ರವಾಹದಿಂದ ಅಂದಾಜು ಆರುಕಾಲು ಲಕ್ಷ ಎಕರೆಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಕೇವಲ ಬೆಳೆಹಾನಿಯಿಂದಲೇ ರೂ. 1,500 ಕೋಟಿ ನಷ್ಟವಾಗಿದೆ.1700 ಮನೆಗಳು ಬಿದ್ದಿವೆಯಂತೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಲ್ಲಿಯ ವರೆಗೆ ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ.ಕೇಂದ್ರಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ರೈತರ ನಷ್ಟ ಭರಿಸಲಾಗದು. ನಮ್ಮ ಸರ್ಕಾರ ಒಂದು ಹೆಕ್ಟೇರ್ ಗೆ .25 ಸಾವವಿರ ರೂಪಾಯಿ ಪರಿಹಾರ ಕೊಟ್ಟಿತ್ತು. ಅದೇ ರೀತಿ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Published by:
Seema R
First published:
October 25, 2020, 7:51 PM IST