Siddaramaiah: ಅಸತ್ಯ, ಹಿಂಸೆಯಲ್ಲಿ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿರುವುದು ದುರಾದೃಷ್ಟ; ಸೋನಿಯಾ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

ಭೇಟಿ ಬಳಿಕ ಸಿದ್ದರಾಮಯ್ಯ ಅವರು ತಾವು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ. ನಾನು ರಾಜ್ಯ ರಾಜಕಾರಣದಲ್ಲಿ ಕಂಫರ್ಟ್ ಆಗಿದ್ದೇನೆ ಎಂದು ಹೇಳಿದ್ದಾರೆ. ಇದೇ ವಿಷಯವನ್ನು ಸಿದ್ದರಾಮಯ್ಯ ಅವರು ಈಗಷ್ಟೇ ಮುಕ್ತಾಯವಾದ ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾವನೆ ಮಾಡಿದ್ದರು. ಆಗಲೂ ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದೇ ಹೇಳಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

 • Share this:
  ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (CLP Leader Siddaramaiah) ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಅವರನ್ನು ಭೇಟಿ ಮಾಡಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೋನಿಯಾ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ಕರೆದಿದ್ದರು. ಬಂದು ಭೇಟಿ ಮಾಡಿದ್ದಿನಿ. ಉಪ ಚುನಾವಣೆ (By Election) ಮತ್ತು ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದಾರೆ. ಇಂದು ರಾಷ್ಟ್ರ ರಾಜಕೀಯದ (National Politics) ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಕರ್ನಾಟಕ ರಾಜಕೀಯದ (Karnataka State Politics) ಬಗ್ಗೆ ಚರ್ಚೆ ಮಾಡಿದ್ದೇನೆ. ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಬಗ್ಗೆಯೂ ಚರ್ಚೆ ಮಾಡಿಲ್ಲ. ಪಟ್ಟಿಯನ್ನು ಈ ಹಿಂದೆ ರಣದೀಪ್ ಸುರ್ಜೆವಾಲಗೆ ಕೊಟ್ಟಿದ್ದೇನೆ ಎಂದು ಹೇಳಿದರು.

  ರಾಷ್ಟ್ರ ರಾಜಕಾರಣಕ್ಕೆ ಸೋನಿಯಾ ಗಾಂಧಿ ಅವರು ನನ್ನ ಕರೆದಿಲ್ಲ. ರಾಹುಲ್‌ಗಾಂಧಿ ಅವರು ಪ್ರಧಾನ ಕಾರ್ಯದರ್ಶಿ ಆಗುವಂತೆ ಹೇಳಿದ್ದರು. ಹಿಂದೆ ಕಾರ್ಯಕಾರಿ ಸಮಿತಿಗೂ ರಾಜೀನಾಮೆ ನೀಡಿದ್ದೆ. ನಾನು ರಾಜ್ಯ ರಾಜಕಾರಣದಲ್ಲಿ ಕಂಪರ್ಟ್ ಆಗಿದ್ದೇನೆ ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

  ರೈತರ ಮೇಲೆ ಸಚಿವರ ಬೆಂಗಾವಲು ಪಡೆ ವಾಹನ ಹರಿಸಿದ ಘಟನೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರೈತರ ಕಾರು ನುಗ್ಗಿಸಿ ನಾಲ್ಕು ಜನ ರೈತರನ್ನು ಕೊಂದಿದ್ದಾರೆ. ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. ಇದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೆನಪಿಸುವಂತೆ ಇದೆ. ಇದು ಗೃಹ ರಾಜ್ಯ ಖಾತೆ ಸಚಿವನ ಮಗ ಮಾಡಿರುವ ಹತ್ಯಾಕಾಂಡ. ಇದಕ್ಕೆ ನೇರ ಹೊಣೆ ಕೇಂದ್ರ ಸಚಿವ ಅಜಯ್ ಮಿಶ್ರಾ. ಕೂಡಲೇ ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಬೇಕು. ಅಜಯ್ ಮಿಶ್ರಾನ ಸಂಪುಟದಿಂದ ಕೈ ಬಿಡಬೇಕು. ಮೋದಿ ಸರ್ಕಾರದಲ್ಲಿ ರೈತರನ್ನು ಲಘುವಾಗಿ ಪರಿಗಣಿಸಿದ್ದಾರೆ. ರೈತರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ಇದೊಂದು ಸರ್ವಾಧಿಕಾರಿ ಸರ್ಕಾರ. ಬಿಜೆಪಿ, ತಾಲಿಬಾನ್ ತಾಲಿಬಾನ್ ಅಂದ್ರೆ ಕೋಪ ಬರುತ್ತೆ. ಇವರು ಅಸತ್ಯ ಹಿಂಸೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಇವರಿಗೆ ಅಧಿಕಾರ ಸಿಕ್ಕಿರುವುದು ದುರಾದೃಷ್ಟ ಎಂದು ಅಸಮಾಧಾನ ಹೊರಹಾಕಿದರು.

  ಇದನ್ನು ಓದಿ: Mysuru Dasara Guidelines: ದಸರಾ ಉದ್ಘಾಟನೆಗೆ 100 ಜನರಿಗೆ ಮಾತ್ರ ಅವಕಾಶ, ಆಚರಣೆಗೆ ನಿಯಮಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

  ಸೋನಿಯಾ ಭೇಟಿ ಹಿಂದೆ ಹಲವು ಲೆಕ್ಕಾಚಾರ?

  ಚುನಾವಣೆಗೆ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಕಾಂಗ್ರೆಸ್​ ಹೈಕಮಾಂಡ್​ ಈಗಾಗಲೇ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಲೇ ಬಂದಿದೆ. ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್​ ಬಲವರ್ಧನೆ ಸಲುವಾಗಿ ಶೀಘ್ರದಲ್ಲೇ ಎಐಸಿಸಿ ಪುನಾರಚನೆಗೆ ಚಿಂತನೆ ನಡೆಸಿರುವ ಸೋನಿಯಾ ಗಾಂಧಿ, ಇದೇ ಮೊದಲ‌ಬಾರಿಗೆ ಇಬ್ಬರು ಇಲ್ಲವೇ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಸಮರ್ಥ ನಾಯಕನೆಂಬ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಬಲವರ್ಧನೆ ಕುರಿತಂತೆ ಸಿದ್ದರಾಮಯ್ಯ ಸಲಹೆ ಪಡೆಯಲು ಸೋನಿಯಾ ಗಾಂಧಿ ಮುಂದಾಗಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ರಾಷ್ಟ್ರ ರಾಜಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಕರೆದುಕೊಳ್ಳಲು ಸೋನಿಯಾ ಗಾಂಧಿ ಚಿಂತನೆ ನಡೆಸಿದ್ದಾರೆಯೇ? ಎಂಬ ಅನುಮಾನಗಳೂ ಮನೆ ಮಾಡಿವೆ.

  ಆದರೆ, ಭೇಟಿ ಬಳಿಕ ಸಿದ್ದರಾಮಯ್ಯ ಅವರು ತಾವು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ. ನಾನು ರಾಜ್ಯ ರಾಜಕಾರಣದಲ್ಲಿ ಕಂಫರ್ಟ್ ಆಗಿದ್ದೇನೆ ಎಂದು ಹೇಳಿದ್ದಾರೆ. ಇದೇ ವಿಷಯವನ್ನು ಸಿದ್ದರಾಮಯ್ಯ ಅವರು ಈಗಷ್ಟೇ ಮುಕ್ತಾಯವಾದ ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾವನೆ ಮಾಡಿದ್ದರು. ಆಗಲೂ ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದೇ ಹೇಳಿದ್ದರು.
  Published by:HR Ramesh
  First published: