ಕಾಂಗ್ರೆಸ್​ ಅತೃಪ್ತರಿಗೆ ಆಪತ್ತು; ನಾಲ್ವರು ರೆಬೆಲ್ ಶಾಸಕರ ಅನರ್ಹತೆಗೆ ಕೋರಿ ಸಿದ್ದರಾಮಯ್ಯ ದೂರು

ಸಿದ್ದರಾಮಯ್ಯ ಹುಬ್ಬಳಿಯಲ್ಲಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬಂದ ನಂತರ ನೇರವಾಗಿ ವಿಧಾನಸೌಧಕ್ಕೆ ತೆರಳಿ ರಮೇಶ್​ ಕುಮಾರ್​ಗೆ ದೂರು ಸಲ್ಲಿಕೆ ಮಾಡಲಿದ್ದಾರೆ.

Rajesh Duggumane | news18
Updated:February 11, 2019, 10:41 AM IST
ಕಾಂಗ್ರೆಸ್​ ಅತೃಪ್ತರಿಗೆ ಆಪತ್ತು; ನಾಲ್ವರು ರೆಬೆಲ್ ಶಾಸಕರ ಅನರ್ಹತೆಗೆ ಕೋರಿ ಸಿದ್ದರಾಮಯ್ಯ ದೂರು
ಸಿದ್ದರಾಮಯ್ಯ
Rajesh Duggumane | news18
Updated: February 11, 2019, 10:41 AM IST
ಬೆಂಗಳೂರು (ಫೆ.11): ಮೈತ್ರಿ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್​​ನ ನಾಲ್ವರು ಶಾಸಕರಿಗೆ ಗಂಡಾಂತರ ಎದುರಾಗಿದೆ. ನಾಲ್ವರು ಅತೃಪ್ತ ಶಾಸಕರ ಅನರ್ಹತೆಗೆ ಕೋರಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸ್ಪೀಕರ್​ಗೆ ದೂರು ನೀಡಲಿದ್ದಾರೆ.

ಬಜೆಟ್​ ದಿನ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಇದಕ್ಕೆ ಗೈರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ಸಿಎಲ್​ಪಿ ಮೀಟಿಂಗ್​ಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಬಿ. ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಶಾಸಕರ ಅನರ್ಹತೆಗೆ ದೂರು ನೀಡಲು ಮುಂದಾಗಿದ್ದಾರೆ.

ಈ ನಾಲ್ಕು ಶಾಸಕರ ವಿರುದ್ಧ ದೂರುಗಳ ಸುರಿಮಳೆ ಸುರಿಯಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ. ಶಾಸಕಾಂಗ ಪಕ್ಷದ ಸಭೆಗೆ ನೋಟೀಸ್ ನೀಡಿದರೂ ಗೈರು. ಗೈರಾದ‌ ಮೇಲೆ ಅಸ್ಪಷ್ಟ ವಿವರಣೆ. ಖುದ್ದು ಭೇಟಿ ಮಾಡುವಂತೆ ಸೂಚಿಸಿದರು ಬಾರದೇ ಇರುವುದು. ಸದನಕ್ಕೆ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಕೊಟ್ಟರೂ ಗೈರಾಗಿರುವುದು ಸೇರಿ ಹಲವು ಕಾರಣಗಳನ್ನು ಸಿದ್ದರಾಮಯ್ಯ ಅವರು ಸ್ಪೀಕರ್​ ರಮೇಶ್​ ಕುಮಾರ್​ಗೆ ನೀಡಲಿದ್ದಾರೆ. ಅಲ್ಲದೆ, ನೋಟೀಸ್ ಪ್ರತಿ,ವಿಪ್ ಪ್ರತಿಗಳ ದಾಖಲೆಗಳನ್ನು ಸಲ್ಲಿಸಿ ಅನರ್ಹತೆಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಸಿಎಲ್​ಪಿ ಸಭೆಗೆ ಅತೃಪ್ತ ಶಾಸಕರ ಗೈರು; ದೆಹಲಿಗೆ ಬರುವಂತೆ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್

ಸಿದ್ದರಾಮಯ್ಯ ಹುಬ್ಬಳಿಯಲ್ಲಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬಂದ ನಂತರ ನೇರವಾಗಿ ವಿಧಾನಸೌಧಕ್ಕೆ ತೆರಳಿ ರಮೇಶ್​ ಕುಮಾರ್​ಗೆ ದೂರು ಸಲ್ಲಿಕೆ ಮಾಡಲಿದ್ದಾರೆ.

ನಾಲ್ಕೂ ಅತೃಪ್ತ ಶಾಸಕರು ಸಿಎಲ್​ಪಿ ಸಭೆಗೆ ಹಾಜರಾಗದೇ ಇರುವುದಕ್ಕೆ ಕಾರಣ ನೀಡಿದ್ದಾರೆ. ಜನವರಿ 18ರಲ್ಲಿ ನಡೆದ ಸಿಎಲ್​ಪಿ ಸಭೆಗೆ ಗೈರಾಗಿದ್ದ ಉಮೇಶ್​ ಜಾದವ್​, ಈ ಬಾರಿ ಕೂಡ ವೈಯಕ್ತಿಕ ಕಾರಣ ನೀಡಿ ಸಭೆಗೆ ಭಾಗಿಯಾಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ತಾವು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕಾಂಗ್ರೆಸ್​ನಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಉಮೇಶ್​ ಕುಮಟಹಳ್ಳಿ, ನಾಗೇಂದ್ರ , ರಮೇಶ್​ ಜಾರಕಿಹೊಳಿ ಕೂಡ ನಾವು ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ ಎಂದು  ಸಿದ್ದರಾಮಯ್ಯ ಅವರಿಗೆ ಪತ್ರ ರವಾನಿಸಿದ್ದಾರೆ.

ಇದನ್ನೂ ಓದಿ: ಸಿಎಲ್​ಪಿ ಸಭೆಗೆ ಗೈರಾದವರಲ್ಲಿ ನಾಲ್ಕು ಶಾಸಕರನ್ನು ಅನರ್ಹಗೊಳಿಸುವಂತೆ ನಾಳೆಯೇ ಸ್ಪೀಕರ್​ಗೆ ದೂರು; ಸಿದ್ದರಾಮಯ್ಯ
Loading...

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ