ಜಮೀರ್ ಕಾಲು ಹಿಡಿದು ಚಾಮರಾಜಪೇಟೆಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ: ಕೆ.ಎಸ್.ಈಶ್ವರಪ್ಪ

ಮುಂದೆ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ಬದಲಿಗೆ ಜಮೀರ್ ಅಹಮದ್ ಕಾಲನ್ನು ಹಿಡಿದು ಚಾಮರಾಜಪೇಟೆಯಿಂದ ಚುನಾವಣೆಗೆ ನಿಲ್ಲಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೇ ಗತಿ ಎಂದು ವ್ಯಂಗ್ಯ ಮಾಡಿದರು.

ಸಚಿವ ಕೆ.ಎಸ್.ಈಶ್ವರಪ್ಪ

ಸಚಿವ ಕೆ.ಎಸ್.ಈಶ್ವರಪ್ಪ

  • Share this:
ಕಳೆದ ಬಾರಿಯ ವಿಧಾನಸಭಾ ಚುನಾವಣೆ(Assembly Election)ಯಲ್ಲಿ ಮಾಜಿ ಸಿದ್ದರಾಮಯ್ಯನವರು (Former CM Siddaramaiah) ಎರಡು ಕಡೆ ಸ್ಪರ್ಧೆ ಮಾಡಿ ಬಾದಾಮಿ (Badami) ವಿಧಾನಸಭಾ ಕ್ಷೇತ್ರದಿಂದ  ಗೆದ್ದಿದ್ದರು, ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರ (GT Devegowda) ಎದುರು ಸೋತಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ ಬದಲಿಸಲು ಸಿದ್ದರಾಮಯ್ಯನವರು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಕಳೆದೊಂದು ವರ್ಷದಿಂದ ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿವೆ, ಸಿದ್ದರಾಮಯ್ಯ ನವರ ನೆರಳಿನಂತೆ ಇರೋ ಶಾಸಕ ಜಮೀರ್ ಅಹಮದ್ ಖಾನ್ (Zmeer Ahmed Khan) ತಮ್ಮ ಕ್ಷೇತ್ರವನ್ನು ಗುರುವಿಗೆ ಬಿಟ್ಟುಕೊಟ್ಟು, ತಾವು ತುಮಕೂರಿನತ್ತ (Tumakuru) ಮುಖ ಮಾಡ್ತಾರೆ ಎಂಬ ಸುದ್ದಿಗಳು ಇನ್ನೂ ಸುಳಿದಾಡುತ್ತಿದೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಸ್.ಈಶ್ಚರಪ್ಪ (Minister K S Eshwarappa), ಚಾಮರಾಜಪೇಟೆ(Chamarajapete)ಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಎಂದು ಹೇಳಿದರು,.

ಜಲಶಕ್ತಿ ಅಭಿಯಾನದಲ್ಲಿ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ. ನರೇಗಾ ಯೋಜನೆಯಲ್ಲಿ 13 ಕೋಟಿ‌ಮಾನವ ದಿನದ ಗುರಿ ನೀಡಲಾಗಿತ್ತು. ನವೆಂಬರ್ ತಿಂಗಳಲ್ಲೇ ನಾವು ಗುರಿಯನ್ನು ಮೀರಿದ್ದೇವೆ. ಹೀಗಾಗಿ ಪ್ರತಿಯೊಂದು ಕುಟುಂಬಕ್ಕೆ 50 ಮಾನವ ದಿನಗಳನ್ನು ಹೆಚ್ಚು ಮಾಡಿಕೊಟ್ಟಿದ್ದಾರೆ. ಗುರಿ ಮೀರಿದ್ದಕ್ಕೆ ಕೇಂದ್ರದ ಸಚಿವರು 400 ಕೋಟಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ನಾವು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಎಂಬುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತಿದ್ದೇನೆ. ಕಾಂಗ್ರೆಸ್ಸಿಗರಿಗೆ ಬಿಜೆಪಿ ಮತ್ತು ಸರ್ಕಾರದ ಬಗ್ಗೆ ಟೀಕೆ ಮಾಡಲು ಏನೂ ಇಲ್ಲ ಹಾಗಾಗಿ ನಾನು ಹಾಗೂ ಯಡಿಯೂರಪ್ಪ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಸಣ್ಣ ಕೈಗಾರಿಕೋದ್ಯಮಿ ನಿರಾಣಿ ಇಂದು ದೊಡ್ಡ ಕೈಗಾರಿಕೋದ್ಯಮಿಯಾಗಿದ್ದಾರೆ.

ಇದನ್ನೂ ಓದಿ:  Karnataka Politics: ಟಕ್ಕರ್ ಕೊಡುತ್ತಿದ್ದ ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಿದ HDK

ನಿರಾಣಿ ಸಿಎಂ, ಹೇಳಿಕೆಗೆ ಸ್ಪಷ್ಟನೆ

ಮುರಗೇಶ್ ನಿರಾಣಿ ಅವರು ಪ್ರತಿಭಾವಂತರು. ಮುಂದೊಂದು ದಿನ ಸಿಎಂ ಆಗುವ ಅವಕಾಶವಿದೆ ಎಂದು ಹೇಳುವ ಮೂಲಕ ಅವರ ಪ್ರತಿಭೆ ಪ್ರೋತ್ಸಾಹಿಸಿದ್ದೇನೆ. ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ. ಕಾಂಗ್ರೆಸ್ಸಿಗರು ಅವರ ಪಕ್ಷದಲ್ಲಿರುವ ಗುಂಪುಗಾರಿಕೆ ಮುಚ್ಚಿಹಾಕಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.

ನಮ್ಮ ಪಕ್ಷಕ್ಕೆ ಸಂಬಂಧಿಸಿದ ವಿಚಾರ ನಾನು ಯಾವಾಗಲಾದರೂ ಮಾತನಾಡುತ್ತೇನೆ. ಅದನ್ನು ಕೇಳಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಯಾರು...? ಏನು ಬೇಕಾದರೂ ಊಹೆ ಮಾಡಬಹುದು. ಹೈಕಮಾಂಡ್ ಇರಲಿ, ಲೋಕಮಾಂಡ್ ಇರಲಿ.  ಸಿದ್ದರಾಮಯ್ಯ, ಶಿವಕುಮಾರ್ ಯಾವನು ಎಂದು ಯಾರು ಏಕವಚನದಲ್ಲಿಯೇ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೇ ಗತಿ

ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಆದರೆ ಕಾಂಗ್ರೆಸ್ಸಿಗರೆ ಗೊಂದಲ ಸೃಷ್ಟಿಸುತ್ತಿದ್ದಾರೆ.  ಕಾಂಗ್ರೆಸ್ಸಿಗರಿಗೆ ಅವರ ಪಕ್ಷವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿಯಿಲ್ಲ‌. ಹೀಗಾಗಿ ಬಿಜೆಪಿ ವಿರುದ್ಧ ಮಾತನಾಡಿ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ಬದಲಿಗೆ ಜಮೀರ್ ಅಹಮದ್ ಕಾಲನ್ನು ಹಿಡಿದು ಚಾಮರಾಜಪೇಟೆಯಿಂದ ಚುನಾವಣೆಗೆ ನಿಲ್ಲಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೇ ಗತಿ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ:  ಬಿಜೆಪಿಗೆ ಕಮಿಷನ್, ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕೀಯವೇ ಮುಖ್ಯ: ಮಾಜಿ ಸಚಿವ ಕೃಷ್ಣಬೈರೇಗೌಡ

ಪ್ರತಿ ಗ್ರಾಮ ಪಂಚಾಯಿತಿಗೂ ಸೋಲಾರ್ ಅಳವಡಿಸಬೇಕು ಎಂಬುದು ನಮ್ಮ ಉದ್ದೇಶ. ಆದರೆ‌, ಕಾಂಗ್ರೆಸ್ಸಿಗರು ಮೊಸರಿನಲ್ಲಿ ಕಲ್ಲುಹುಡುಕುವ ಕೆಲಸ ಮಾಡುತ್ತಿದ್ದಾರೆ. ಏಜೆನ್ಸಿಗಳನ್ನು ಗುರುತು ಮಾಡಲಾಗಿದೆ.  ನಮ್ಮನ್ನು ಮುತ್ತುರತ್ನ ಎಂದು ಕಲ್ಲು ಬಂಡೆ ಹೊಗಳಿದ್ದು ಸಮಾಧಾನ ಬಂದಿದೆ. ಕಲ್ಲುಬಂಡೆಯಲ್ಲಿ ಡಿ.ಕೆ.ಶಿವಕುಮಾರ್ ಎಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ನನಗೆ ಗೊತ್ತಿದೆ. ಪೊಲೀಸರಿಗೆ ನಾನು ಅವರ ಕೆಲಸವನ್ನು ನಾನು ನೆನಪಿಸಿಕೊಟ್ಟಿದ್ದೇನೆ. ಹೀಗೆಂದ ಮಾತ್ರಕ್ಕೆ‌ನಾನು ಬೈದಿದ್ದೇನೆ ಎಂದುಕೊಂಡರೆ ಏನು ಮಾಡಲು ಸಾಧ್ಯವಿಲ್ಲ.

ಗೋ ಕಳ್ಳತನ ಹೆಚ್ಚಾಗಿದ್ದರಿಂದ ಹೇಳಿದ್ದೇನೆ. ಪೊಲೀಸರು ಸುಮ್ಮನಿದ್ದಾರೆ ಎಂದರೆ ಅವರು ಶಾಮೀಲಾಗಿದ್ದಾರೆ ಎಂದು ಅರ್ಥವಲ್ಲವೆ...? ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನೂ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದರು.
Published by:Mahmadrafik K
First published: