ಸಿಬಿಐ ತನಿಖೆ ಆಗಬೇಕು ಎನ್ನುತ್ತಿದ್ದವರ ಮೇಲೆಯೇ ಈಗ ಸಿಬಿಐ ತನಿಖೆ ಬೇಕಿದೆ; ಸಿದ್ದರಾಮಯ್ಯ ವ್ಯಂಗ್ಯ

ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಸಿಬಿಐ ತನಿಖೆ ಬೇಡ ಎನ್ನುತ್ತಿದ್ದರು. ಅವರ ಸರ್ಕಾರವಿದ್ದಾಗ ಯಾವುದೇ ಪ್ರಕರಣಕ್ಕೂ ಸಿಬಿಐ ತನಿಖೆ ಆಗಲಿ ಎನ್ನುತ್ತಿದ್ದರು. ಈಗ ಇವರನ್ನು ತನಿಖೆ ಮಾಡಲು ಸಿಬಿಐ ಬೇಕಾಗಿದೆ

Seema.R | news18
Updated:February 11, 2019, 3:20 PM IST
ಸಿಬಿಐ ತನಿಖೆ ಆಗಬೇಕು ಎನ್ನುತ್ತಿದ್ದವರ ಮೇಲೆಯೇ ಈಗ ಸಿಬಿಐ ತನಿಖೆ ಬೇಕಿದೆ; ಸಿದ್ದರಾಮಯ್ಯ ವ್ಯಂಗ್ಯ
ಸಿದ್ದರಾಮಯ್ಯ
Seema.R | news18
Updated: February 11, 2019, 3:20 PM IST
ಬೆಂಗಳೂರು (ಫೆ.11): ಆಡಿಯೋ ಪ್ರಕರಣದ ಕುರಿತು ಸ್ಪೀಕರ್​  ಅವರೇ ತನಿಖೆಗೆ ಮುಂದಾಗುವಂತೆ ಸೂಚಿಸಿ ವಿಶೇಷ ತಂಡ ರಚಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಬಿಜೆಪಿ ನಾಯಕರು ಯಾವ ಕಾರಣಕ್ಕೆ ವಿರೋಧ ವ್ಯಕ್ತಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಡಿಯೋ ಪ್ರಕರಣದ ಕುರಿತು ಸುದೀರ್ಘ ಕಲಾಪದ ಬಳಿಕ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಸಿಬಿಐ ತನಿಖೆ ಬೇಡ ಎನ್ನುತ್ತಿದ್ದರು. ಅವರ ಸರ್ಕಾರವಿದ್ದಾಗ ಯಾವುದೇ ಪ್ರಕರಣಕ್ಕೂ ಸಿಬಿಐ ತನಿಖೆ ಆಗಲಿ ಎನ್ನುತ್ತಿದ್ದರು. ಈಗ ಇವರನ್ನು ತನಿಖೆ ಮಾಡಲು ಸಿಬಿಐ ಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಇನ್ಸ್​ಪೆಕ್ಟರ್​ ಗಣಪತಿ ಪ್ರಕರಣ ಹಾಗೂ ಪರೇಶ್​ ಮೇಸ್ತ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಬಿಜೆಪಿ ಪಟ್ಟು ಹಿಡಿದಿತ್ತು. ಈಗ ಬಿಜೆಪಿ ನಾಯಕರನ್ನು ತನಿಖೆ ಮಾಡಲು ಸಿಬಿಐ ತನಿಖೆ ಆಗಬೇಕಿದೆ. ಸಿಬಿಐ ತನಿಖೆ ಆದರೆ ಮಾಡಲಿ ಎನ್ನುವ ಅವರು, ಎಸ್​ಐಟಿ ತನಿಖೆಗೆ ಯಾಕೆ ವಿರೋಧಿಸುತ್ತಿದ್ದಾರೆ ಎಂದರು.

ಎಸ್​ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ. ಸಿಬಿಐ ಎಸ್​ಐಟಿ ತನಿಖೆ ಬೇಡ ಎನ್ನುತ್ತಾರೆ. ನ್ಯಾಯಾಂಗ ತನಿಖೆಯಾಗಲಿ, ಸದನ ತನಿಖೆಯಾಗಲಿ ಎನ್ನುತ್ತಾರೆ. ಈ ಪ್ರಕರಣದಲ್ಲಿ ಯಾಕೆ ಅವರಿಗೆ ಭಯ. ತಪ್ಪು ಮಾಡಿಲ್ಲವೆಂದರೆ ತನಿಖೆ ಎದುರಿಸಲಿ ಎಂದು ಸವಾಲು ಹಾಕಿದರು.

ಇದನ್ನು ಓದಿ: BIG BREAKING: ಆಡಿಯೋ ಪ್ರಕರಣದ ತನಿಖೆಗೆ ಆದೇಶ, ವಿಶೇಷ ತನಿಖಾ ತಂಡ ರಚನೆ

ಆಡಿಯೋ ಪ್ರಕರಣ ಕುರಿತು ವಿಶೇಷ ತನಿಖಾ ತಂಡ ರಚನೆ ಮಾಡಲಾಗುವುದು. ಸ್ಪೀಕರ್​ ಘನತೆಗೆ ಚ್ಯುತಿ ಬರುವಂತೆ ಮಾತನಾಡಿರುವುದು ಯಾರು ಎಂಬುದನ್ನು ತಿಳಿದುಕೊಳ್ಳಲು ತನಿಖೆ ಅಗತ್ಯವಿದೆ. ಸ್ಪೀಕರ್​ ಘನತೆಗೆ ಈ ರೀತಿ ಧಕ್ಕೆ ಬರುವಂತೆ ಮಾತನಾಡಿರುವವರ ವಿರುದ್ಧ  ಕ್ರಮಕ್ಕೆ ಮುಂದಾಗಬೇಕು. ಈ ಮೂಲಕ ಸ್ಪೀಕರ್​ ಬಗ್ಗೆ ಹಗುರವಾಗಿ ಮಾತನಾಡುವವರ ಎಚ್ಚರಿಕೆ ಪಾಠ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...