ಹೆಚ್​.ಎಸ್. ದೊರೆಸ್ವಾಮಿ ಅವರ ಅವಹೇಳನದ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ ಇದೆ; ಸಿದ್ದರಾಮಯ್ಯ

ಯತ್ನಾಳ್ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಇಡೀ ಬಿಜೆಪಿ ಸಚಿವರು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟವಾಗಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ, ಏನು ಹೇಳಿದರೂ ತಲೆಗೆ ಹೋಗುವುದೇ ಇಲ್ಲ. ಇಡೀ ಸಂವಿಧಾನಕ್ಕೆ ಬಿಜೆಪಿಯವರಿಂದ ಅಪಚಾರವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

MAshok Kumar | news18-kannada
Updated:March 4, 2020, 1:30 PM IST
ಹೆಚ್​.ಎಸ್. ದೊರೆಸ್ವಾಮಿ ಅವರ ಅವಹೇಳನದ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ ಇದೆ; ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ.
  • Share this:
ಬೆಂಗಳೂರು (ಮಾರ್ಚ್​ 04); ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ, ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಬಗ್ಗೆ ಎಳ್ಳಷ್ಟೂ ಗೌರವ ಇಲ್ಲ, ಇವರಿಂದಲೇ ಸಂವಿಧಾನಕ್ಕೆ ಅಪಚಾರವಾಗಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಅವಮಾನಿಸುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಹೆಚ್​.ಎಸ್​. ದೊರೆಸ್ವಾಮಿ ಅವರನ್ನು ಅವಮಾನಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ,

"ಬಿಜೆಪಿ ನಾಯಕರಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಎಳ್ಳಷ್ಟೂ ಗೌರವ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಪಕ್ಷ ಎನ್ನುತ್ತಾರೆ. ಆದರೆ ದೊರೆಸ್ವಾಮಿಯಂತಹ ಪ್ರಮಾಣಿಕ ಹೋರಾಟಗಾರರನ್ನು ಅವಮಾನಿಸುತ್ತಾರೆ. ಇವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲ ಮತ್ತು ಇವರು ಅವಮಾನಿಸಿರುವುದು ಬರಿ ದೊರೆಸ್ವಾಮಿ ಒಬ್ಬರನ್ನೇ ಅಲ್ಲ, ಬದಲಾಗಿ ಇಡೀ ಸ್ವಾತಂತ್ರ್ಯ ಹೋರಾಟದ ಚಳುವಳಿಯನ್ನು ಅವಮಾನಿಸಿದ್ದಾರೆ.

ಯತ್ನಾಳ್ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಇಡೀ ಬಿಜೆಪಿ ಸಚಿವರು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟವಾಗಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ, ಏನು ಹೇಳಿದರೂ ತಲೆಗೆ ಹೋಗುವುದೇ ಇಲ್ಲ. ಇಡೀ ಸಂವಿಧಾನಕ್ಕೆ ಬಿಜೆಪಿಯವರಿಂದ ಅಪಚಾರವಾಗಿದೆ" ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಅವರು, "ಸದನದಲ್ಲಿ ನಾವು ಶಾಸಕ ಯತ್ನಾಳ್ ವಿರುದ್ಧ ಚರ್ಚೆ ಅವಕಾಶ ಕೇಳಿ ನೊಟೀಸ್​ ಕೊಟ್ಟರೆ ಸ್ಪೀಕರ್​ ಅದನ್ನು ನಿರಾಕರಿಸುತ್ತಾರೆ. ಇದು ಸಂವಿಧಾನ ಬಾಹೀರ. ಹೀಗಾಗಿ ರಾಜ್ಯಪಾಲರಿಗೆ ಮನವಿ ನೀಡಲಾಗಿದೆ. ಸಂವಿಧಾನದ 175ನೇ ವಿಧಿಯ ಅನ್ವಯ ಸ್ಪೀಕರ್​ಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಹೀಗಾಗಿ ಚರ್ಚೆ ಅವಕಾಶ ಮಾಡಿಕೊಡುವ ಮತ್ತು ಸದನದಿಂದ ಯತ್ನಾಳ್ ಅವರನ್ನು ಉಚ್ಛಾಟಿಸುವ ಕುರಿತು ಸ್ಪೀಕರ್​ಗೆ ಸೂಚಿಸುವಂತೆ ಮನವಿ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.​

ಇದನ್ನೂ ಓದಿ : ಶಾಸಕ ಯತ್ನಾಳ್ ವಿರುದ್ಧ ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ
First published: March 4, 2020, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading