• Home
  • »
  • News
  • »
  • state
  • »
  • Siddaramaiah: ಚುನಾವಣೆ ಟಿಕೆಟ್​​ಗೆ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ; ಇತ್ತ 'ಕೈ' ಮುಖಂಡನಿಂದ ದೂರು ದಾಖಲು

Siddaramaiah: ಚುನಾವಣೆ ಟಿಕೆಟ್​​ಗೆ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ; ಇತ್ತ 'ಕೈ' ಮುಖಂಡನಿಂದ ದೂರು ದಾಖಲು

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

Assembly Election 2023: ಸಿದ್ದರಾಮಯ್ಯ ಪರವಾಗಿ ಆಪ್ತ ಸಹಾಯಕ ಪ್ರಭಾಕರ್ ಹಾಗೂ ವೆಂಕಟೇಶ್​ರವರು ಅರ್ಜಿ ಸಲ್ಲಿಸಿದ್ದಾರೆ .

  • Share this:

ವಿಧಾನಸಭಾ ಚುನಾವಣೆಯ ಟಿಕೆಟ್​​ಗಾಗಿ (Assembly Election Ticket) ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೊನೆಗೂ ಅರ್ಜಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಪರವಾಗಿ ಆಪ್ತ ಸಹಾಯಕ ಪ್ರಭಾಕರ್ ಹಾಗೂ ವೆಂಕಟೇಶ್​ರವರು ಅರ್ಜಿ ಸಲ್ಲಿಸಿದ್ದಾರೆ . ಅರ್ಜಿಯಲ್ಲಿ ಹೈಕಮಾಂಡ್ (High command) ಸೂಚನೆ ಮೇರೆಗೆ ಕ್ಷೇತ್ರ ಆಯ್ಕೆ ಎಂದು ಬರೆಯಲಾಗಿದೆ. ಕ್ಷೇತ್ರದ ಹೆಸರು ತುಂಬದೇ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಯಾವ ಕ್ಷೇತ್ರ ಎಂಬ ಗುಟ್ಟು ಕೊನೆಗೂ ಸಿದ್ದರಾಮಯ್ಯ ಬಿಟ್ಟು ಕೊಟ್ಟಿಲ್ಲ. ಇನ್ನು ಮಾಜಿ ಸಂಸದ ವಿ.ಎಸ್.ಉಗ್ರಪ್ಪ (Former MP VS Ugrappa) ಕೂಡ ಕಾಂಗ್ರೆಸ್ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ (KPCC Office) ಉಗ್ರಪ್ಪ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಕೆ ವಿಚಾರದಲ್ಲಿ ಸಿದ್ದರಾಮಯ್ಯ ನಡೆಯನ್ನು ಅನುಸರಿಸಿದ್ದಾರೆ. ಯಾವ ಕ್ಷೇತ್ರ ಎಂಬ ಕಾಲಂ ಖಾಲಿ ಬಿಟ್ಟು ಉಗ್ರಪ್ಪ ಅರ್ಜಿ ಸಲ್ಲಿಸಿದ್ರು. ಹೈಕಮಾಂಡ್ ಸೂಚಿಸುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಉಗ್ರಪ್ಪ ತಿಳಿಸಿದರು.


ಬೆಂಗಳೂರಿನ ಉದ್ಯಮಿ ಹಾಗೂ ಸಮಾಜ ಸೇವಕರಾದ ಆರ್​​.ಮಂಜುನಾಥ್ KPCC ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.. ಮುಳಬಾಗಿಲು SC ರಿಸರ್ವ್ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.


ಟಿಕೆಟ್​ಗಾಗಿ ಅರ್ಜಿ 8 ಮಂದಿ ಸಲ್ಲಿಕೆ


ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಇನ್ನೂ ನಿಗೂಢವಾಗಿದೆ. ಆದ್ರೆ ಸ್ಥಳೀಯ 8 ಮಂದಿ ಮುಖಂಡರು ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.


ಕಾಂಗ್ರೆಸ್ ಹಿರಿಯ ಮುಖಂಡ ವಿ.ಆರ್ ಸುದರ್ಶನ್, ಮಾಜಿ ಅಬಕಾರಿ ಉಪ ಆಯುಕ್ತ ಎಲ್.ಎ.ಮಂಜುನಾಥ್,  ಕೊತ್ತೂರು ಮಂಜುನಾಥ್, ಶ್ರೀನಿವಾಸ್ ಸೇರಿ ಒಟ್ಟು ಎಂಟು ಮಂದಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗಾಗಿ ಅರ್ಜಿ ಸಲ್ಲಿಸಿದ್ದಾರೆ.


ಸಿದ್ದರಾಮಯ್ಯ ವಿರುದ್ಧ ಕಂಪ್ಲೆಂಟ್​​


ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಕಿಡಿಕಾರಿದ್ದಾರೆ.


ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕೆಪಿಸಿಸಿ ಹಾಗೂ ಎಐಸಿಸಿ ಚುನಾವಣಾ ಸಮಿತಿ ದೂರು ಸಲ್ಲಿಸಿದ್ದೇನೆ. ಅಭ್ಯರ್ಥಿಗಳ ಆಯ್ಕೆ ಮಾಡಲು ಕಾಂಗ್ರೆಸ್​ನಲ್ಲಿ ಒಂದು ವಿಧಿವಿಧಾನವಿದೆ. ಸಿದ್ದರಾಮಯ್ಯ ಅವರಂತಹ ಹಿರಿಯರು ಈ ರೀತಿ ಮಾಡಿರೋದು ತಪ್ಪು. ಈ ಬಗ್ಗೆ ನಾನು ಕೆಪಿಸಿಸಿ ಹಾಗೂ ಎಐಸಿಸಿ ಚುನಾವಣಾ ಸಮಿತಿಗೆ ದೂರು ಸಲ್ಲಿಸಿದ್ದೇನೆ ಅಂತಾ ಹೇಳಿದರು.


ಇದನ್ನೂ ಓದಿ:  Kolara: ಮದ್ವೆಗೆ ಹೆಣ್ಣು ಸಿಗ್ತಿಲ್ಲ, ಬೇರೆ ಜಿಲ್ಲೆಗಳಿಗೆ ಹೆಣ್ಣು ಕೊಡೋದು ಬ್ಯಾನ್ ಮಾಡಿ! ಎಚ್‌ಡಿಕೆಗೆ ನೊಂದ ಯುವಕನ ಪತ್ರ


ಯಾರ ಪರವಾಗಿ ಸಿದ್ದರಾಮಯ್ಯ ಮತಯಾಚನೆ


ಕೊಪ್ಪಳದ ಕನಕಗಿರಿಗೆ ಶಿವರಾಜ್ ತಂಗಡಗಿ, ಕುಷ್ಟಗಿ ಅಮರೇಗೌಡ ಭಯ್ಯಾಪೂರ, ಯಲಬುರ್ಗಾಕ್ಕೆ ಬಸವರಾಜ್ ರಾಯರೆಡ್ಡಿ, ಕೊಪ್ಪಳ ರಾಘವೇಂದ್ರ ಹಿಟ್ನಾಳ,  ಗಂಗಾವತಿಯಿಂದ ಇಕ್ವಾಲ್ ಅನ್ಸಾರಿ ಗೆಲ್ಲಿಸುವಂತೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ.


ಸಿದ್ದರಾಮಯ್ಯಗೆ ಡಿಕೆಶಿ ಟಾಂಗ್


ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯನವರಿಗೆ ಇಲ್ಲ. ಈ ಮಾತಾಡಿದ್ದು ಬೇರೆ ಯಾರೂ ಅಲ್ಲ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.


ಇದನ್ನೂ ಓದಿ:  Mahadayi Water Project: ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!


ಕೊಪ್ಪಳದಲ್ಲಿ ಮಾತಾಡಿದ್ದ ಸಿದ್ದರಾಮಯ್ಯ, ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದರು. ಅದಕ್ಕೆ ಠಕ್ಕರ್ ಕೊಟ್ಟಿರೋ ಡಿಕೆ ಶಿವಕುಮಾರ್, ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯನವರಿಗೆ ಇಲ್ಲ. ನನಗೂ ಘೋಷಣೆ ಮಾಡುವ ಹಕ್ಕಿಲ್ಲ. ಎಐಸಿಸಿಗೆ ಮಾತ್ರ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಹಕ್ಕಿದೆ. ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.


ಸಿದ್ದರಾಮಯ್ಯ ಬಣ ವರ್ಸಸ್ ಡಿಕೆಶಿ ಬಣ


ಈ ಎಲ್ಲಾ ಬೆಳವಣಿಗೆಗಳ ನಡುವೆ ಹಾಲಿ ಶಾಸಕರಿರುವ ಕ್ಷೇತ್ರಗಳಿಗೂ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಬಣದ ಅಭ್ಯರ್ಥಿಗಳ ನಡುವೆ ಟಿಕೆಟ್ ಫೈಟ್ ಶುರುವಾಗಿದೆ.

Published by:Mahmadrafik K
First published: