ಜಿಟಿಡಿಯಷ್ಟೇ ಅಲ್ಲ, ಸಿದ್ದರಾಮಯ್ಯ, ದೇವೇಗೌಡರೂ ಬಿಜೆಪಿ ಬಂದರೆ ಅಚ್ಚರಿ ಇಲ್ಲ; ಮುಳುಗುವ ಹಡಗಿನಲ್ಲಿ ಯಾರು ಇರಲು ಇಷ್ಟಪಡುತ್ತಾರೆ: ಸಚಿವ ಈಶ್ವರಪ್ಪ

ಕನ್ನಡ ನಮ್ಮ ತಾಯಿ ಸ್ವರೂಪ, ನಮ್ಮ ಮಾತೃ ಭಾಷೆ. ಕನ್ನಡಕ್ಕೆ ಒಂದು‌ ಚೂರು ಹಗುಳೂ ಕೂಡ ವ್ಯತ್ಯಾಸ ಆಗಬಾರದು. ನಮ್ಮ ಮೊದಲ ಆದ್ಯತೆ ಕನ್ನಡ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

G Hareeshkumar | news18-kannada
Updated:September 17, 2019, 3:47 PM IST
ಜಿಟಿಡಿಯಷ್ಟೇ ಅಲ್ಲ, ಸಿದ್ದರಾಮಯ್ಯ, ದೇವೇಗೌಡರೂ ಬಿಜೆಪಿ ಬಂದರೆ ಅಚ್ಚರಿ ಇಲ್ಲ; ಮುಳುಗುವ ಹಡಗಿನಲ್ಲಿ ಯಾರು ಇರಲು ಇಷ್ಟಪಡುತ್ತಾರೆ: ಸಚಿವ ಈಶ್ವರಪ್ಪ
ಸಚಿವ ಈಶ್ವರಪ್ಪ, ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
G Hareeshkumar | news18-kannada
Updated: September 17, 2019, 3:47 PM IST
ಶಿವಮೊಗ್ಗ(ಸೆ. 17): ಜೆಡಿಎಸ್ ಶಾಸಕ  ಜಿ.ಟಿ‌. ದೇವೇಗೌಡ ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳು ಬಿಜೆಪಿಗೆ ಬಂದರೂ ಅಚ್ಚರಿ ಇಲ್ಲ.ಮುಳುಗುವ ಹಡಗಿನಲ್ಲಿ ಯಾರು ಇರಲು ಇಷ್ಟ ಪಡುತ್ತಾರೆ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಿರ್ನಾಮವಾಗಿವೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ಗೆಲ್ಲುತ್ತೇವೆ. ವಿಪಕ್ಷ ಸ್ಥಾನ ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಒದ್ದಾಡುತ್ತಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರಾದ  ನಳಿನ್​​ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಪಚುನಾವಣೆ ನಡೆಯುತ್ತಿದ್ದು. ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದರು.

ಸಿದ್ದರಾಮಯ್ಯ ದಡ್ಡ, ವಡ್ಡ ಎಂದು ಮರುಕ್ಷಣವೇ ಸಾವರಿಸಿಕೊಂಡ ಸಚಿವ ಕೆ.ಎಸ್. ಈಶ್ವರಪ್ಪ

ಇನ್ನು, ಹಿಂದಿ ಭಾಷೆ ವಿಚಾರದಲ್ಲಿ ಅಮಿತ್ ಶಾ ಅವರನ್ನು ದಡ್ಡ ಎಂದು ಟೀಕಿಸಿದ್ದ ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರಿಗೆ ತಲೆ ಇದ್ದಿದ್ರೆ ಇಲ್ಲ ಸಲ್ಲದ ಹೇಳಿಕೆ ಕೊಡ್ತಿರಲಿಲ್ಲ. ಒಂದು ದೇಶ, ಒಂದು ಭಾಷೆ ನಿಟ್ಟಿನಲ್ಲಿ, ದೇಶದಲ್ಲಿ ರಾಷ್ಟೀಯ ಭಾಷೆಯಾಗಿರುವ ಹಿಂದಿಯನ್ನು ಪರಿಗಣಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಇದಕ್ಕೆ ಸಿದ್ಧರಾಮಯ್ಯ ಅವರು ಅಮಿತ್ ಶಾ ದಡ್ಡ ಎಂದು ಹೇಳುವುದು ಎಷ್ಟು ಸರಿ? ಸಿದ್ದರಾಮಯ್ಯನೇ ವಡ್ಡ, ದಡ್ಡ ಎಂದು ಟೀಕೆ ಮಾಡಿದರು.

ಸಿದ್ದರಾಮಯ್ಯಗೆ ತಿರುಗೇಟು ನೀಡುವ ಭರದಲ್ಲಿ ಈಶ್ವರಪ್ಪ ಅವರು ನಿಷೇಧಿತ ವಡ್ಡ ಪದ ಪ್ರಯೋಗ ಮಾಡಿದ್ದರು. ಆದರೆ, ತತ್​ಕ್ಷಣವೇ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡ ಅವರು, ಸಿದ್ದರಾಮಯ್ಯರವನ್ನ ವಡ್ಡ ಎಂದು ಕರೆದಿರುವ ಬಗ್ಗೆ ವಿವಾದ ಸೃಷ್ಠಿಸಬೇಡಿ. ವಡ್ಡರ ಬಗ್ಗೆ ನನಗೆ ಕಾಳಜಿ ಇದೆ. ವಡ್ಡ ಎಂದಿರುವುದು ಸಿದ್ದರಾಮಯ್ಯನವರ ವರ್ತನೆಗೆಯಷ್ಟೇ. ವಡ್ಡರು ಶ್ರಮ ಜೀವಿಗಳು ಅವರ ಬಗ್ಗೆ ಅಪಾರ ಗೌರವವಿದೆ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ : ನಮ್ಮ ದನ ಕಸಾಯಿಖಾನೆಗೆ ಕಳುಸುವಂಗ ಮಾಡಬೇಡ್ರಿ; ಗಣಿನಾಡಿನಲ್ಲಿ ಗೋಶಾಲೆ ಮುಚ್ಚುವ ಆತಂಕ, ರೈತರ ಅಳಲು
Loading...

ಹಾಗೆಯೇ, ಅಮಿತ್ ಶಾ ಅವರನ್ನು ದಡ್ಡ ಎಂದಿರುವ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಈ ವೇಳೆ ಈಶ್ವರಪ್ಪ ಆಗ್ರಹಿಸಿದರು.

ಅಮಿತ್ ಶಾ ಅವರು ಹಿಂದಿ ಹೇರಿಕೆ ಮಾಡುತ್ತಿಲ್ಲ. ಹಿಂದಿ ನಮ್ಮ ದೇಶವನ್ನು ಒಂದುಗೂಡಿಸುವ ಭಾಷೆ. ನಾವು ಇಂಗ್ಲೀಷ್ ಒಪ್ಪುತ್ತೇವೆ. ಆದರೆ ಹಿಂದಿಯನ್ನ ಯಾಕೆ ಒಪ್ಪುತ್ತಿಲ್ಲ? ಎಂದು ಪ್ರಶ್ನಿಸಿದ ಈಶ್ವರಪ್ಪ ತಮ್ಮ ಮೊದಲ ಆದ್ಯತೆ ಕನ್ನಡವೇ ಎಂದು ಸ್ಪಷ್ಟಪಡಿಸಲು ಮರೆಯಲಿಲ್ಲ.

ಕನ್ನಡ ನಮ್ಮ ತಾಯಿ ಸ್ವರೂಪ, ನಮ್ಮ ಮಾತೃ ಭಾಷೆ. ಕನ್ನಡಕ್ಕೆ ಒಂದು‌ ಚೂರು ಹಗುಳೂ ಕೂಡ ವ್ಯತ್ಯಾಸ ಆಗಬಾರದು. ನಮ್ಮ ಮೊದಲ ಆದ್ಯತೆ ಕನ್ನಡ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...