• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಡೆಗೂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ 'ಕಾವೇರಿ ನಿವಾಸ' ಖಾಲಿ ಮಾಡಿಸಿ, ಅಲ್ಲಿಗೆ ಹೋಗಲು ಸಜ್ಜಾದ ಸಿಎಂ ಬಿಎಸ್​ವೈ

ಕಡೆಗೂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ 'ಕಾವೇರಿ ನಿವಾಸ' ಖಾಲಿ ಮಾಡಿಸಿ, ಅಲ್ಲಿಗೆ ಹೋಗಲು ಸಜ್ಜಾದ ಸಿಎಂ ಬಿಎಸ್​ವೈ

ಸಿದ್ದರಾಮಯ್ಯ- ಬಿಎಸ್​ ಯಡಿಯೂರಪ್ಪ

ಸಿದ್ದರಾಮಯ್ಯ- ಬಿಎಸ್​ ಯಡಿಯೂರಪ್ಪ

ಕಾಂಗ್ರೆಸ್​ ಸರ್ಕಾರ ರಚನೆಯಾದಗಿನಿಂದಲೂ ಈಗಿನವರೆಗೂ ಕಳೆದ 6ವರ್ಷಗಳಿಂದ ಸಿದ್ದರಾಮಯ್ಯ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅಧಿಕಾರ ಹೋದ ಬಳಿಕವೂ ಈ ಮನೆಯನ್ನು ಅವರು ಖಾಲಿ ಮಾಡಿರಲಿಲ್ಲ. ಆದರೆ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿವಾಸದಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದು ಸಿದ್ದರಾಮಯ್ಯ ಮನೆ ಖಾಲಿ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಸೆ.27): ಅವಧಿ ಮುಗಿದ ಬಳಿಕವೂ ತಮ್ಮ ನೆಚ್ಚಿನ ಕಾವೇರಿ ನಿವಾಸದಲ್ಲಿಯೇ ವಾಸ್ತವ್ಯವನ್ನು ಮುಂದುವರೆಸಿದ್ದ ಸಿದ್ದರಾಮಯ್ಯ ಅವರನ್ನು ಕಡೆಗೂ ಖಾಲಿ ಮಾಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ಕಾವೇರಿ ನಿವಾಸಕ್ಕೆ ಬಿಎಸ್  ಯಡಿಯೂರಪ್ಪ ಹೋಗಲು ಮುಂದಾಗಿದ್ದು,  ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಎಸ್​ ಯಡಿಯೂರಪ್ಪ ತಮ್ಮ ಅದೃಷ್ಟದ ಮನೆಯಾಗಿದ್ದ ರೇಸ್​ ಕೋರ್ಸ್​ ರಸ್ತೆಯ ರೇಸ್​ವ್ಯೂ ಕಾಟೇಜ್​ ನಂ.2 ಮನೆಯಲ್ಲಿ ವಾಸ್ತವ್ಯ ಹೂಡುವುದಾಗಿ ಈ ಹಿಂದೆ ತಿಳಿಸಿದ್ದರು.

cauvery nivasa
ಸರ್ಕಾರದ ಆದೇಶ


ಈ ಹಿನ್ನೆಲೆ ಸಿಎಂಗಳಿಗೆ ನಿಗದಿಯಾಗುವ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರೇ ವಾಸವಾಗಿದ್ದರು. ಕಾಂಗ್ರೆಸ್​ ಸರ್ಕಾರ ರಚನೆಯಾದಗಿನಿಂದಲೂ ಈಗಿನವರೆಗೂ ಕಳೆದ 6ವರ್ಷಗಳಿಂದ ಸಿದ್ದರಾಮಯ್ಯ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅಧಿಕಾರ ಹೋದ ಬಳಿಕವೂ ಈ ಮನೆಯನ್ನು ಅವರು ಖಾಲಿ ಮಾಡಿರಲಿಲ್ಲ. ಆದರೆ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿವಾಸದಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದು ಸಿದ್ದರಾಮಯ್ಯ ಮನೆ ಖಾಲಿ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಮ್ಮರೇಸ್​ವ್ಯೂ ಕಾಟೇಜ್​ ನಂ.2 ​ ನಿವಾಸದಿಂದ ಗೃಹ ಕಚೇರಿಗೆ ಪ್ರತಿನಿತ್ಯ ಸಂಚಾರ ಮಾಡುವುದು ಕಷ್ಟವಾಗುತ್ತಿದೆ. ಅಲ್ಲದೇ ಇದರಿಂದ ಸಿಎಂಗೆ ಅಹವಾಲು ನೀಡಲು ಬರುವ ಜನರಿಗೂ ಸಮಸ್ಯೆಯಾಗುವ ಹಿನ್ನೆಲೆ ಅವರು ಕುಮಾರ ಕೃಪದಲ್ಲಿರುವ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಲು ಮುಂದಾಗಿದ್ದಾರೆ.

ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ತಮಗೆ ನಿಗದಿಯಾಗಿದ್ದ ರೇಸ್​ವ್ಯೂ ಕಾಟೇಜ್​ ನಂ.2 ​ ಮನೆಗೆ ಪ್ರವೇಶಿಸುವುದಕ್ಕೆ ಮುನ್ನವೇ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಲಿದ್ದಾರೆ.

ಇದನ್ನು ಓದಿ: ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿ ಆದೇಶ

ಪ್ರಸ್ತುತ ಸಿಎಂ ಡಾಲರ್ಸ್​ ಕಾಲೋನಿಯ ತಮ್ಮ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಪಿತೃಪಕ್ಷದ ಬಳಿಕ ಅವರು ಸರ್ಕಾರದಿಂದ ಹಂಚಿಯಾಗಿದ್ದ ರೇಸ್​ವ್ಯೂ ಕಾಟೇಜ್​ ನಂ.2 ​ ಮನೆಗೆ ಶಿಫ್ಟ್​ ಆಗಲು ನಿರ್ಧರಿಸಿದ್ದರು. ಈಗ ರೇಸ್​ ಕೋರ್ಸ್​ ಬದಲಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಿ ಹೊಸ ಆದೇಶ ಹೊರಡಿಸಲಾಗಿದೆ.

 

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು