ಡಿ.9ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ; ಮತ್ತೆ ಕಾಂಗ್ರೆಸ್​ ಸರ್ಕಾರ ಬರಲಿದೆ; ಸಿದ್ದರಾಮಯ್ಯ

ಸದ್ಯ ನಾಲ್ಕನೇ ಉಪಚುನಾವಣೆಗೆ ಹುಣಸೂರು ಕ್ಷೇತ್ರ ಸಿದ್ಧವಾಗಿದೆ. ಮೂರು ಪಕ್ಷಗಳು ಉಪಚುನಾವಣೆ ಗೆಲ್ಲುತ್ತೇವೆ ಎಂದು ಹುಮ್ಮಸ್ಸಿನಿಂದ ಬೀಗುತ್ತಿವೆ. ಅದಕ್ಕಾಗಿ ತಂತ್ರವನ್ನೂ ಹೆಣೆಯುತ್ತಿವೆ. ಡಿಸೆಂಬರ್​​ 5ಕ್ಕೆ ಚುನಾವಣೆ ನಡೆಯಲಿದ್ದು, ಇದೇ 9ನೇ ತಾರಿಕಿಗೆ ಫಲಿತಾಂಶ ಹೊರಬೀಳಲಿದೆ.

news18-kannada
Updated:December 3, 2019, 12:57 PM IST
ಡಿ.9ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ; ಮತ್ತೆ ಕಾಂಗ್ರೆಸ್​ ಸರ್ಕಾರ ಬರಲಿದೆ; ಸಿದ್ದರಾಮಯ್ಯ
ಸಿದ್ದರಾಮಯ್ಯ- ಬಿಎಸ್​ ಯಡಿಯೂರಪ್ಪ
  • Share this:
ಮೈಸೂರು(ಡಿ.03): "ಡಿಸೆಂಬರ್​ 9ನೇ ತಾರೀಕಿನ ನಂತರ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ. ಮತ್ತೆ ಕಾಂಗ್ರೆಸ್​ ನೇತೃತ್ವದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಆಪರೇಷನ್​​ ಕಮಲ ಹೊರತುಪಡಿಸಿ ಇನ್ನೇನು ಕೆಲಸ ಮಾಡಿಲ್ಲ. ಹಾಗಾಗಿ ಬಿಜೆಪಿಗೆ ಮತ ನೀಡದೆ, ಕಾಂಗ್ರೆಸ್​​ಗೆ ವೋಟ್​ ಹಾಕಿ ಆಶೀರ್ವಾದ ಮಾಡಿ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿರುವ ಮಂಜುನಾಥ್​​​ ಪರವಾಗಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತಾಡಿದ ಮಾಜಿ ಸಿಎಂ, ಮಂಜುನಾಥ್​​​ಗೆ ವೋಟ್​​ ಹಾಕಿದರೆ, ನನಗೆ ಹಾಕಿದಂತೆ. ಆದ್ದರಿಂದ ಕಾಂಗ್ರೆಸ್​ನ ಅಭ್ಯರ್ಥಿ ಮಂಜುನಾಥ್​ಗೆ ಮತ ನೀಡಿ​​ ಗೆಲ್ಲಿಸಿ ಎಂದು ಪುನರುಚ್ಚರಿಸಿದರು.

ಮಂಜುನಾಥ್​​​ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಜೆಡಿಎಸ್​​ಗೂ ಎಚ್​​. ವಿಶ್ವನಾಥ್​​ ಮೇಲೆ ಕೋಪವಿದೆ. ನೀವು ಹೇಗಿದ್ದರೂ ಗೆಲ್ಲೋದಿಲ್ಲ. ಹಾಗಾಗಿ ಜೆಡಿಎಸ್​​ನವ್ರು ಕಾಂಗ್ರೆಸ್​ಗೆ ವೋಟ್​ ಹಾಕಿಬಿಡಿ. 15 ಕ್ಷೇತ್ರದಲ್ಲೂ ಮತದಾರರಿಗೆ ಅನರ್ಹ ಶಾಸಕರ ಮೇಲೆ ಸಿಟ್ಟಿದೆ. ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಕಾಂಗ್ರೆಸ್​ ಗೆಲ್ಲೋದು ಅಷ್ಟೋ ಸತ್ಯ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಿಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​-ಜೆಡಿಎಸ್​​ನಲ್ಲಿ ಒಗ್ಗಟ್ಟಿಲ್ಲ: ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲ್ಲಲಿದೆ; ಸಿಎಂ ಯಡಿಯೂರಪ್ಪ

ನೀವು ಕಾಂಗ್ರೆಸ್​ ಮತ ನೀಡಿದರೆ, ನಾನು ಗೆದ್ದಂತೆ. ಮುಂದೆ ಡಿ.9ಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ಧಾರೆ. ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಎಚ್​​. ವಿಶ್ವನಾಥ್​​​ ಮೂಗಿಗೆ ತುಪ್ಪ ಬಳಿಯುವ ಕೆಲಸ ಮಾಡುತ್ತಿದ್ದಾನೆ. ಅವನ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ. ದೇವರಾಜ್ ಅರಸು ಬೆನ್ನಿಗೆ ಚೂರಿ ಹಾಕಿ ಗುಂಡೂರಾವ್ ಬಳಿ ಓಡಿ ಹೋದವ ಇವನು ಎಂದು ಏಕವಚನದಲ್ಲೇ ದಾಳಿ ನಡೆಸಿದರು.

ಹುಣಸೂರು ಕೆರೆ ತುಂಬಿಸಿದ್ದು ಯಾರು? ಬಡವರಿಗೆ ಅಕ್ಕಿ ಕೊಟ್ಟವರು ಯಾರು? ಇಷ್ಟೆಲ್ಲಾ ಕಾಂಗ್ರೆಸ್​ ಮಾಡಿದ ಮೇಲೆ ಎಚ್​. ವಿಶ್ವನಾಥ್​​​ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಕೇವಲ ಚುನಾವಣೆಯಲ್ಲಿ ಸುಳ್ಳು ಹೇಳಿಕೊಂಡು ಗಿಮಿಕ್​​​ ಮಾಡುತ್ತಿದ್ದಾನೆ. ಬಿಜೆಪಿಯವ್ರು ಹಣ ನೀಡುತ್ತಿದ್ದಾರೆ. ದುಡ್ಡು ತೆಗೆದುಕೊಳ್ಳಬೇಡಿ ಅನ್ನುವುದಿಲ್ಲ. ಆದರೆ, ಹಣಕ್ಕಾಗಿ ನಿಮ್ಮ ಮತ ಮಾರಿಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಬಿಜೆಪಿ ದುಡ್ಡು, ಕಾಂಗ್ರೆಸ್​​ಗೆ ವೋಟು: 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದ ಸಿದ್ದರಾಮಯ್ಯಸದ್ಯ ನಾಲ್ಕನೇ ಉಪಚುನಾವಣೆಗೆ ಹುಣಸೂರು ಕ್ಷೇತ್ರ ಸಿದ್ಧವಾಗಿದೆ. ಮೂರು ಪಕ್ಷಗಳು ಉಪಚುನಾವಣೆ ಗೆಲ್ಲುತ್ತೇವೆ ಎಂದು ಹುಮ್ಮಸ್ಸಿನಿಂದ ಬೀಗುತ್ತಿವೆ. ಅದಕ್ಕಾಗಿ ತಂತ್ರವನ್ನೂ ಹೆಣೆಯುತ್ತಿವೆ. ಡಿಸೆಂಬರ್​​ 5ಕ್ಕೆ ಚುನಾವಣೆ ನಡೆಯಲಿದ್ದು, ಇದೇ 9ನೇ ತಾರಿಕಿಗೆ ಫಲಿತಾಂಶ ಹೊರಬೀಳಲಿದೆ.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ