• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಯಾರ್ ರೀ ಇವರು! ಕುಡಿಸಿ ಕರೆದುಕೊಂಡು ಬಂದು ಕೂಗಾಡಿಸೋದಾ? ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಗರಂ

Siddaramaiah: ಯಾರ್ ರೀ ಇವರು! ಕುಡಿಸಿ ಕರೆದುಕೊಂಡು ಬಂದು ಕೂಗಾಡಿಸೋದಾ? ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಗರಂ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ ಅವರ ಭಾಷಣದ ಸಂದರ್ಭದಲ್ಲಿ ಟಿಕೆಟ್​ ಆಕಾಂಕ್ಷಿಗಳ ಪರ ಬೆಂಬಲಿಗರು ಹೈಡ್ರಾಮಾ ಸೃಷ್ಟಿ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಅವರು, ಭಾಷಣ ಮಾಡದೆ ಹೊರಟು ಹೋಗಬೇಕಾ? ಯಾವುದಕ್ಕೆ ಆದರೂ ಸ್ವಲ್ಪ‌ ಇತಿಮಿತಿ ಇರಬೇಕು, ಮಾತನಾಡು ಅಂದ್ರೆ ಮಾತನಾಡುತ್ತೇನೆ, ಇಲ್ಲ ಎಂದರೆ ಹೋಗುತ್ತೇನೆ ಎಂದು ಸಿಡಿಮಿಡಿಗೊಂಡರು.

ಮುಂದೆ ಓದಿ ...
  • Share this:

ಧಾರವಾಡ: ವಿಧಾನಸಭಾ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress)​ ಪಕ್ಷ ವಿವಿಧ ಕ್ಷೇತ್ರದಲ್ಲಿ ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿದೆ. ಇಂದು ಜಿಲ್ಲೆಯ ನವಲಗುಂದ  (Navalgund) ಪಟ್ಟಣಕ್ಕೆ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆ ಆಗಮಿಸಿದ್ದು, ಸಿದ್ದರಾಮಯ್ಯ ನೇತೃತ್ವದ ಯಾತ್ರೆಯ ಸಮಾವೇಶ ಪಟ್ಟಣದ ಮಾಡೆಲ್ ಹೈಸ್ಕೂಲ್​​ ಮೈದಾನದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಶಾಸಕ ಜಮೀರ್ ಅಹ್ಮದ್, ಸಲೀಂ ಅಹ್ಮದ್, ಕೆ.ಎನ್ ಗಡಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಭಾಷಣ ಮಾಡಲು ವೇದಿಕೆ ಮೇಲೆ ಬಂದ ಸಂದರ್ಭದಲ್ಲಿ ಕುಡುಕನೋರ್ವ ಗದ್ದಲ ಸೃಷ್ಟಿಸಿದ್ದು, ಇದರಿಂದ ಸಿದ್ದರಾಮಯ್ಯ ಅವರು ಕೆಲ ಸಮಯ ಗರಂ ಆಗಿದ್ದರು. ಅಲ್ಲದೆ, ನೀವು ತಾಳ್ಮೆಯಿಂದ ನಾವು ಮಾತನಾಡುವುದನ್ನು ಕೇಳಿದರೆ ಮಾತ್ರ ನಾನು ಮಾತನಾಡುತ್ತೇನೆ ಇಲ್ಲ ಎಂದರೆ ಭಾಷಣ ನಿಲ್ಲಿಸಿ ಹೊರಟು ಹೋಗುತ್ತೇನೆ ಎಂದು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದರು.


ಭಾಷಣ ಮಾಡುವ ಸಂದರ್ಭದಲ್ಲಿ ಗದ್ದಲ ಮಾಡುತ್ತಿದ್ದ ಕಾರ್ಯಕರ್ತರ ವಿರುದ್ಧ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ ಅವರು, ಯಾವನಯ್ಯ ಅವನು? ಯಾರು ಗಲಾಟೆ ಮಾಡುತ್ತಾರೋ ಅವರನ್ನು ಆಚೆ ಕಳುಹಿಸಿ. ಅವನೋ ಕುಡಿದು ಬಂದಿದ್ದಾನೆ. ಕುಡಿಸಿಕೊಂಡು ಕರೆದುಕೊಂಡು ಬಂದು ಕೂಗಾಡಿಸೋದಾ? ಎಂದು ಸಿಡಿಮಿಡಿಗೊಂಡರು.


ಇದನ್ನೂ ಓದಿ: Dog-Sitting Job: ಸಖತ್ ಟ್ರೆಂಡ್​ ಸೃಷ್ಟಿಸುತ್ತಿದೆ ಡಾಗ್ ಸಿಟ್ಟಿಂಗ್ ಉದ್ಯೋಗ; ಅರೆಕಾಲಿಕ ವೃತ್ತಿಯಿಂದ ಕೈ ತುಂಬಾ ಹಣ!


ಟಿಕೆಟ್ ಹಂಚಿಕೆ‌ ಮಾಡಲು ಬಂದಿಲ್ಲ


ಸಿದ್ದರಾಮಯ್ಯ ಅವರ ಭಾಷಣದ ಸಂದರ್ಭದಲ್ಲಿ ಟಿಕೆಟ್​ ಆಕಾಂಕ್ಷಿಗಳ ಪರ ಬೆಂಬಲಿಗರು ಹೈಡ್ರಾಮಾ ಸೃಷ್ಟಿ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಅವರು, ಭಾಷಣ ಮಾಡದೆ ಹೊರಟು ಹೋಗಬೇಕಾ? ಯಾವುದಕ್ಕೆ ಆದರೂ ಸ್ವಲ್ಪ‌ ಇತಿಮಿತಿ ಇರಬೇಕು, ಮಾತನಾಡು ಅಂದ್ರೆ ಮಾತನಾಡುತ್ತೇನೆ, ಇಲ್ಲ ಎಂದರೆ ಹೋಗುತ್ತೇನೆ.




ನಾನು ಟಿಕೆಟ್ ಹಂಚಿಕೆ‌ ಮಾಡಲು ಬಂದಿಲ್ಲ. ಪ್ರಜಾಧ್ವನಿ ಯಾತ್ರೆ ಮೂಲಕ ಬಂದಿದ್ದೇನೆ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಗರಂ ಆಗುತ್ತಿದ್ದಂತೆ ವೇದಿಕೆ ಮೇಲಿದ್ದ ನಾಯಕರು ಮುಂದಕ್ಕೆ ಬಂದು ಕಾರ್ಯಕರ್ತರಿಗೆ ಗದ್ದಲ ಮಾಡದಂತೆ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.


ಹೋರಾಟಕ್ಕೆ ಸಿಕ್ಕ ಜಯ ಶೂನ್ಯ


ಇದಕ್ಕೂ ಮುನ್ನ ನರಗುಂದದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತಿಲ್ಲ. 2014ರ ವೇಳೆ ಬೆಳಗಾವಿ ಅಧಿವೇಶನದಲ್ಲಿ 350 ರೂಪಾಯಿ ಟನ್ ಗೆ ಪರಿಹಾರ ಕೊಟ್ಟಿದೇನೆ. ಬೆಳಗಾವಿಗೆ ಮೋದಿ ಬಂದಾಗ ಮಹದಾಯಿ ಬಗ್ಗೆ ಏನ್ನು ಮಾತಾಡಿಲ್ಲ.


ನರಗುಂದ, ಧಾರವಾಡ ನವಲಗುಂದ, ಬಾಗಲಕೋಟೆ ಜಿಲ್ಲೆಯಲ್ಲಿ ಹೋರಾಟ ಮಾಡಿದ್ದರು. ಹೋರಾಟಕ್ಕೆ ಸಿಕ್ಕ ಜಯ ಶೂನ್ಯ. ನಾನು ಕೇಂದ್ರಕ್ಕೆ ರೈತರು, ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಹೋಗಿದೆ. ಮಹದಾಯಿ ವಿಚಾರಕ್ಕೆ ಆ ವೇಳೆ ಮೋದಿಯವರು ಒಪ್ಪಲಿಲ್ಲ. ಕೋರ್ಟ್ ತೀರ್ಪು ನೀಡಿದರೂ ಕೂಡ ಕೆಲಸ ಆರಂಭ ಮಾಡಿಲ್ಲ ಎಂದು ಆರೋಪಿಸಿದರು.


ಇದನ್ನೂ ಓದಿ: Bhaskar Rao: ಆಪ್ ತೊರೆದು ಬಿಜೆಪಿಗೆ ಸೇರಲಿದ್ದಾರೆ ಭಾಸ್ಕರ್ ರಾವ್! ಕೇಜ್ರಿವಾಲ್ ರಾಜ್ಯಕ್ಕೆ ಬರುವ ಮುಂಚೆಯೇ AAPಗೆ ಬಿಗ್​​ ಶಾಕ್!


ಪಕೋಡಾ ಮಾರಾಟ ಮಾಡೋಕ್ಕೆ ಹೋಗಿ ಅಂತಾರೆ


ಮಹದಾಯಿ, ಬೆಲೆ ಏರಿಕೆ, ಯುವಕರಿಗೆ ಉದ್ಯೋಗ, ಭ್ರಷ್ಟಾಚಾರ ಕಡಿವಾಣ ಹಾಕದೆ ಇರುವ ಮೋದಿ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡಿತ್ತೇನೆ ಎಂದಿದ್ದರು. ಸಣ್ಣ ಕೈಗಾರಿಕೆಗಳು ಬಂದ್ ಆಗಿದೆ. ಯುವಕರು ಕೆಲಸ ಕಳೆದು ಕೊಂಡಿದ್ದಾರೆ.


ಯುವಕರಿಗೆ ಪಕೋಡಾ ಮಾರಾಟ ಮಾಡೋಕ್ಕೆ ಹೋಗಿ, ನಾನು ಚಹಾ ಮಾರಾಟ ಮಾಡಿದ್ದೆ. ನೀವು ಅದೇ ರೀತಿ ಹೋಗಿ ಅಂತಿದ್ದಾರೆ. ಯಡಿಯೂರಪ್ಪ ಅವರು 600 ಭರವಸೆ ಕೊಟ್ಟಿದ್ದರು. ಕೇವಲ 50 ಭರವಸೆ ಈಡಿರೇಸಿದ್ದಾರೆ, ಇನ್ನು 550 ಭರವಸೆಗಳು ಬಾಕಿ ಇದೆ. ಕಾಂಗ್ರೆಸ್ ನಂಬಿ ಮತ ಹಾಕಿ. ನಾನು ಕೊಟ್ಟಿರುವ ಭರವಸೆ ಈಡೇರಿಸದೆ ಹೋದರೆ, ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇದರೋದಿಲ್ಲ ಎಂದು ಸವಾಲು ಹಾಕಿದರು.

Published by:Sumanth SN
First published: