• Home
  • »
  • News
  • »
  • state
  • »
  • Krishna Jan andolan: ಸಿಎಂ ಬೊಮ್ಮಾಯಿ ತಂಡ, ಅಲಿಬಾಬಾ 40 ಕಳ್ಳರಿದ್ದಂತೆ; ಕೃಷ್ಣಾ ಜನಾಂದೋಲನ ಸಮಾವೇಶದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

Krishna Jan andolan: ಸಿಎಂ ಬೊಮ್ಮಾಯಿ ತಂಡ, ಅಲಿಬಾಬಾ 40 ಕಳ್ಳರಿದ್ದಂತೆ; ಕೃಷ್ಣಾ ಜನಾಂದೋಲನ ಸಮಾವೇಶದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ರಾಜ್ಯದಲ್ಲಿ ಅಲಿಬಾಬಾ 40 ಕಳ್ಳರಿದ್ದಾರೆ. ಅದು ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡ. ಅವರನ್ನು ಕಿತ್ತು ಹಾಕಲು ನಿಮ್ಮ ಸಹಾಯ ಬೇಕು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • Share this:

ವಿಜಯಪುರ: ಕಾಂಗ್ರೆಸ್ ಪಕ್ಷವು (Congress Party) ಕೃಷ್ಣ ಜನಾಂದೋಲನ ಸಮಾವೇಶವನ್ನು (Krishna Jan andolan) ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಸಿದ್ದು, ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕರು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರು, ರಾಜ್ಯದಲ್ಲಿ ಅಲಿಬಾಬಾ 40 ಕಳ್ಳರಿದ್ದಾರೆ. ಅದು ಬಸವರಾಜ ಬೊಮ್ಮಾಯಿ (CM Basavaraj Bommai) ಹಾಗೂ ಅವರ ತಂಡ. ಅಲಿಬಾಬಾ ಹಾಗೂ 40 ಕಳ್ಳರ ತಂಡವನ್ನು ಕಿತ್ತು ಹಾಕಲು ನಿಮ್ಮ ಸಹಾಯ ಬೇಕು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.


ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ದೇಶದಲ್ಲಿ ರಾಜಸ್ಥಾಣ ಬಿಟ್ಟರೆ ಅತಿಹೆಚ್ಚು ಒಣ ಬೇಸಾಯದ ಭೂಮಿ‌‌ ಇರುವುದು ಕರ್ನಾಟಕದಲ್ಲಿ ಮಾತ್ರ. ದೇಶದಲ್ಲಿ ನೀರಾವರಿ ಬಳಸಿಕೊಂಡಿರುವ ಪ್ರಮಾಣ 48.8%, ಆದರೆ ನಮ್ಮ ರಾಜ್ಯದಲ್ಲಿ ನೀರಾವರಿ ಬಳಸಿಕೊಂಡಿರುವುದು ಕೇವಲ 27% ಮಾತ್ರ. ಕೃಷ್ಣಾ ಮೇಲ್ದಂಡೆ ಯೋಜನೆಗೆ ನಮ್ಮ ಸರ್ಕಾದ ಇದ್ದಾಗ 20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ನುಡಿದಂತೆ ನಡೆದ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ.


ಇದನ್ನೂ ಓದಿ: Raichur: ಗ್ರಾಮ ಪಂಚಾಯತ್ ಚೇರ್ಮನ್ ಈಗ ಭಿಕ್ಷುಕ! ಈತ ಸಿಎಂ ಬೊಮ್ಮಾಯಿಗೂ ಗೆಳೆಯ!


ಮಿ. ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತೀರಿ ಏನ್ರಿ?


ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರೂಪಾಯಿ ಕೊಡುವುದಾಗಿ ಬಿಜೆಪಿ ಹೇಳಿತ್ತು. ಆದರೆ ಈ ವರ್ಷಾಂತ್ಯದ ವರೆಗೆ ಬಿಜೆಪಿ ಸರ್ಕಾರ ಕೊಟ್ಟಿರುವುದು ಕೇವಲ 45 ಸಾವಿರ ಕೋಟಿ ರೂಪಾಯಿ ಮಾತ್ರ. ನಮ್ಮ ಸರ್ಕಾರ ಬಂದಾಗ 2 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಎಲ್ಲಾ ನೀರಾವರಿ ಯೋಜನೆಗಳನ್ನು ಮಾಡ್ತೇವೆ.


ಕೃಷ್ಣಾ ಮೇಲ್ದಂಡೆ ಯೋಜನೆಗೆ 75 ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟು ಯೋಜನೆಯನ್ನು ಪೂರ್ಣ ಮಾಡುತ್ತೇವೆ ಎಂದು ಪ್ರಮಾಣ ಮಾಡುತ್ತೇನೆ. ನಾನು ಕೊಟ್ಟ ಮಾತನ್ನು ಮರೆಯುವುದಿಲ್ಲ. ಮಿಸ್ಟರ್ ಬಸವರಾಜ ಬೊಮ್ಮಾಯಿ ನೀವು ಪ್ರಣಾಳಿಕೆ ಯಲ್ಲಿ ಕೊಟ್ಟಿದ್ದು 600 ಭರವಸೆಗಳನ್ನು, ಅದರಲ್ಲಿ ಕೇವಲ 10% ಬರವಸೆಗಳನ್ನು ಈಡೇರಿಸಿಲ್ಲ.ಬಸವರಾಜ ಬೊಮ್ಮಾಯಿ ಡಬಲ್ ಇಂಜಿನ್ ಸರ್ಕಾರವಂತೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಫಿಡವಿಟ್ ಹಾಕಿ ಗೆಜೆಟ್ ನೋಟಿಫಿಕೇಶನ್ ಮಾಡಿಸುತ್ತಿಲ್ಲ ಯಾಕೆ? ಬೇರೆ ಕಡೆಯ ನೀರಾವರಿ ಯೋಜನೆಗಳಿಗೆ ಗೆಜೆಟ್ ನೋಟಿಫಿಕೇಶನ್ ಹಾಕಿದ್ದೀರಿ. ಡಬಲ್ ಇಂಜಿನ್ ಸರ್ಕಾರ ಇದ್ದರೂ ನೋಟಿಫಿಕೇಶನ್ ಯಾಕೆ ಮಾಡಿಸಿಲ್ಲ.


2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ರಾಜ್ಯದಲ್ಲಿ ಅಲಿಬಾಬಾ 40 ಕಳ್ಳರಿದ್ದರೆ, ಅದು ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡ. ಅಲಿಬಾಬಾ ಹಾಗೂ 40 ಕಳ್ಳರ ತಂಡವನ್ನು ಕಿತ್ತು ಹಾಕಲು ನಿಮ್ಮ ಸಹಾಯ ಬೇಕು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಪದೇ ಪದೇ ಮಿ. ಬೊಮ್ಮಾಯಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: Belagavi Border Dispute: ನಮ್ಮ ಸಿಎಂ ಬೊಮ್ಮಾಯಿ ಬಹಳ ವೀಕ್ ಇದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ ಕಟು ಟೀಕೆ


ಆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ವಿಜಯಪುರ ‌ಜಿಲ್ಲೆಯಲ್ಲಿ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕೃಷ್ಣಾ ನದಿ ವಿಚಾರದಲ್ಲಿ ಈ ಭಾಗದ ಜನರಿಗೆ ಆಶೋತ್ತರಗಳನ್ನ ಈಡೇರಿಸುತ್ತೇವೆ. ನಮ್ಮ ಸರ್ಕಾರ ಬಂದ ಬಳಿಕ ಕೃಷ್ಣಾ ನದಿ ಪಾತ್ರದ ರೈತರಿಗೆ ಆಸರೆಯಾಗಲಿದೆ. ಅನ್ನದಾತರ ಪರವಾಗಿ ನಾವೂ ನಿಲ್ಲುತ್ತೇವೆ.


ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ 136 ಸಿಟ್ ಗೆಲ್ಲಲ್ಲಿದೆ. ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ಮಾತ್ರ. ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನ ಪರಿಹರಿಸುತ್ತೇವೆ. ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮದ ರಾಜಕಾರಣ ಮಾಡೋದಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

Published by:Sumanth SN
First published: