PSI ನೇಮಕಾತಿ ಅಕ್ರಮದಲ್ಲಿ ಮೊದಲ ಬಾರಿಗೆ ಸಚಿವ ಅಶೋಕ್ ಹೆಸರು ಹೇಳಿದ ಸಿದ್ದರಾಮಯ್ಯ!

ಮೊದಲ ಬಾರಿಗೆ ಅಶೋಕ್ ಹೆಸರನ್ನು ಸಿದ್ದರಾಮಯ್ಯ ಉಲ್ಲೇಖಿಸಿ ಆರೋಪಿಸಿದರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದುಡ್ಡು ವಸೂಲಿ ಮಾಡಿದ್ದಾರೆ ಎಂದ ಕಿಡಿಕಾರಿದರು.

ಸಿದ್ದರಾಮಯ್ಯ, ಆರ್​.ಅಶೋಕ್​

ಸಿದ್ದರಾಮಯ್ಯ, ಆರ್​.ಅಶೋಕ್​

  • Share this:
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (PSI Scam) ಕಂದಾಯ ಸಚಿವ ಆರ್. ಅಶೋಕ್ (Minister R Ashok) ಭಾಗಿಯಾಗಿದ್ದಾರೆ ಎಂದು ಆರೋಪ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆರೋಪಿಸಿದರು. ಮೊದಲ ಬಾರಿಗೆ ಅಶೋಕ್ ಹೆಸರನ್ನು ಸಿದ್ದರಾಮಯ್ಯ ಉಲ್ಲೇಖಿಸಿ ಆರೋಪಿಸಿದರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದುಡ್ಡು ವಸೂಲಿ ಮಾಡಿದ್ದಾರೆ ಎಂದ ಕಿಡಿಕಾರಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತದ ಆರ್ಥಿಕತೆಯಲ್ಲಿ 103ನೇ ಸ್ಥಾನದಲ್ಲಿತ್ತು. ಈಗ 144ನೇ ಸ್ಥಾನಕ್ಕೆ ಹೋಗಿದೆ. ಇದೇ ಪ್ರಧಾನಿ ಮೋದಿ ಸರ್ಕಾರದ ಸಾಧನೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಯುವ ಕಾಂಗ್ರೆಸ್ ವತಿಯಿಂದ ಆಯೋಜಿರುವ ಅರಮನೆ ಮೈದಾನದಲ್ಲಿ ನಡೆದ ಯುವ ಜನೋತ್ಸವ ರಾಜ್ಯ ಕಾರ್ಯಕಾರಣಿಯಲ್ಲಿ ಭಾಷಣದ ವೇಳೆ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕಿಸಿದರು.

ಯುವಕರಿಗೆ ಉದ್ಯೋಗಗಳನ್ನು ಕೊಡುತ್ತಿಲ್ಲ

ನಮ್ಮ ದೇಶದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯವ ಜನತೆ 60% ಇದ್ದಾರೆ. ಜಗತ್ತಿನ ಯಾವ ದೇಶದಲ್ಲೂ ಇಷ್ಟು ಯುವಶಕ್ತಿ ಇಲ್ಲ, ಯುವಶಕ್ತಿಯನ್ನು ನಾವು ಬಳಸಿಕೊಳ್ಳಬೇಕು. ಆಗ ಮಾತ್ರ ದೇಶವನ್ನು ಕಟ್ಟೋಕೆ‌ ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಯುವ ಶಕ್ತಿ ‌ಬಳಸಿಕೊಳ್ತಿಲ್ಲ, ಅದರಲ್ಲೂ ಮೋದಿ ಪ್ರಧಾನಿಯಾದ ಬಳಿಕ ಸರಿಯಾಗಿ ಬಳಸಿಕೊಳ್ತಿಲ್ಲ. ಯುವಕರಿಂದ ಕೆಲಸವನ್ನು ತೆಗೆಸುತ್ತಿಲ್ಲ, ಯುವಕರಿಗೆ ಉದ್ಯೋಗಗಳನ್ನು ಕೊಡುತ್ತಿಲ್ಲ ಎಂದು ಆಪಾದಿಸಿದರು.

ಇದನ್ನೂ ಓದಿ: Kolar News: ಸಿದ್ದರಾಮೋತ್ಸವ ನಂತರ, ಡಿಕೆಶಿ ಉತ್ಸವ ನಡೆಯಲಿದೆ; ಸಚಿವ ಆರ್‌‌. ಅಶೋಕ್ ವ್ಯಂಗ್ಯ

ಅಗ್ನಿಪಥ್ ಯೋಜನೆ ಏಕಾಗಿ ತಂದಿದ್ದಾರೆ?

ಉದ್ಯೋಗಾವಕಾಶದಲ್ಲೂ ಕುಸಿತವಾಗಿದೆ, ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ತಂದಿದೆ. 17 ವರ್ಷಕ್ಕೆ ಕೆಲಸಕ್ಕೆ ಸೇರಬೇಕು, 4 ವರ್ಷದ ನಂತರ ವಾಪಸ್ ಬರಬೇಕು.  ಆ ನಂತರ ಅವರ ಜೀವನ ಹೇಗೆ ನಡೆಸಬೇಕು, ಮತ್ತೆ ಅವರನ್ನ ನಿರುದ್ಯೋಗಿಗಳನ್ನ ಮಾಡೋದಾ ಎಂದು ಪ್ರಶ್ನಿಸಿರು. ಮೋದಿ ರೈತರ ಬಗ್ಗೆ ಎಲ್ಲಾದ್ರೂ ಮಾತನಾಡ್ತಾರಾ, ಯುವಕ ಭವಿಷ್ಯದ ಬಗ್ಗೆ ಮಾತನಾಡ್ತಾರಾ? ಚೀನಾದಲ್ಲಿ ತಲಾ ಆದಾಯ 12,500 ಸಾವಿರ ಡಾಲರ್ ಇದೆ, ನಮ್ಮ ದೇಶದಲ್ಲಿ 1,850 ಡಾಲರ್ ಇದೆ. ತಲಾ ಆದಾಯ ಹೆಚ್ಚಳ ಮಾಡುವ ಕೆಲಸ ಮಾಡ್ತಿಲ್ಲ. ದೇಶದ ಆರ್ಥಿಕತೆ ಅಧೋಗತಿಗೆ ಹೋಗುತ್ತಿದೆ ಎಂದರು.

ಮೋದಿ ಅವಧಿಯಲ್ಲೇ ಅತಿ ಹೆಚ್ಚು ಸಾಲ

ದೇಶದಲ್ಲಿ ಮೋದಿ ಪ್ರಧಾನಿಯಾದ ಬಳಿಕ ಎಷ್ಟು ಸಾಲ ಮಾಡಿದ್ದಾರೆ ಗೊತ್ತಾ? ಮನಮೋಹನ್ ಸಿಂಗ್ ಅವಧಿಯಲ್ಲಿ 53 ಲಕ್ಷದ‌11 ಸಾವಿರ ಕೋಟಿ ಸಾಲ ಮಾಡಿದ್ದರು. ಮೋದಿ ಪ್ರಧಾನಿಯಾದ‌ ಮೇಲೆ ದೇಶದ ಸಾಲ ಜಾಸ್ತಿಯಾಗಿದೆ. ಮುಂದಿನ ವರ್ಷ ಮಾರ್ಚ್ ಗೆ 155 ಲಕ್ಷ ಕೋಟಿ ರೂ. ಗಳಿಗೆ ದೇಶದ ಸಾಲ ಏರಿಕೆ ಆಗಲಿದೆ. ಒಟ್ಟು 102 ಲಕ್ಷ‌ ಕೋಟಿ ರೂ. ಸಾಲವನ್ನ‌ ಮೋದಿ ಅವಧಿಯಲ್ಲಿ ಮಾಡಿದ್ದಾರೆ.

ಬಿಜೆಪಿಯವರು ಮೀಸಲಾತಿ ವಿರೋಧಿಗಳು

ಶ್ರೇಣಿಕೃತ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟುಕೊಂಡವರು ಬಿಜೆಪಿಯವರು. ಮೀಸಲಾತಿ ವಿರೋಧಿಸಿದವರು ಯಾರು? ಇದೇ ಅಡ್ವಾಣಿ ರಥಯಾತ್ರೆ ಹೊರಟರು. ಕರ್ನಾಟಕದಲ್ಲಿ ಅನಂತ್ ಕುಮಾರ್, ಯಡಿಯೂರಪ್ಪ , ಈಶ್ವರಪ್ಪ ಮೀಸಲಾತಿ ವಿರೋಧಿಸಿ ಪ್ರತಿಭಟನೆ ಮಾಡಿದರು. ಅವರು ಯಾರೂ ಮೀಸಲಾತಿ ಪರ ಇರುವವರಲ್ಲ. ತಳ‌ಸಮುದಾಯದ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದವರಿಗಾಗಿ ಮೀಸಲಾತಿ ನೀಡಬೇಕು ಅಂತಿದೆ. ಒಂದೇ ದಿನದಲ್ಲಿ ತಿದ್ದುಪಡಿ ತಂದು ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿ ನೀಡಿದರು ಮೋದಿಯವರು ಎಂದು ವಾಗ್ದಾಳಿ ನಡೆಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಸಲೀಂ ಅಹ್ಮದ್, ಶ್ರೀನಿವಾಸ್ ಬಿವಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್‌ ನಲಪಾಡ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
Published by:Kavya V
First published: