ಬೆಂಗಳೂರು (ಡಿ. 5): ಸಿದ್ದರಾಮಯ್ಯ ಯಾವುದೇ ಹೋರಾಟ ಮಾಡಿಯೇ ಇಲ್ಲ. ಅವರು ಕುರುಬ ಸಮಾಜವನ್ನು ಒಡೆದವರು ಎಂದು ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ನಾನು ಯಾವುದೇ ಹೋರಾಟ ಮಾಡಿಲ್ಲ. ಜನ ಸಿಎಂ ಮಾಡಿದರೂ ಅದೇ ಅಷ್ಟೇ. ಹೋರಾಟದ ಬಗ್ಗೆ ಎಚ್ ವಿಶ್ವನಾಥ್ ಬಳಿ ಪಾಠ ಹೇಳಿಸಿಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಯಾವ ಚಳವಳಿಯಲ್ಲಿ ಭಾಗಿಯಾಗಿದ್ದಾರೆ ಹೇಳಿ. ರೈತ ಚಳವಳಿ, ಕನ್ನಡ ಚಳವಳಿಯಲ್ಲಿ ಏನಾದರೂ ಹೋರಾಟ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಅಲ್ಲದೇ, ಇಡೀ ಕುರುಬ ಸಮುದಾಯವನ್ನು ಇವರೇ ಹೊಡೆದಿದ್ದಾರೆ ಎಂದು ಆಪಾದಿಸಿದರು. ಕುರುಬ ಸಮುದಾಯದ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ವಿಶ್ವನಾಥ್ ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯ ಯಾವ ಚಳವಳಿಯ ನಾಯಕತ್ವ ವಹಿಸಿಕೊಂಡು ಹೋರಾಟ ಮಾಡಿಕೊಂಡು ಬಂದಿದ್ದಾರೆ ಹೇಳಿ. ರೈತ ಚಳವಳಿ, ಕನ್ನಡ ಚಳವಳಿಯಲ್ಲಿ ಏನಾದರೂ ಹೋರಾಟ ಮಾಡಿದ್ದರಾ ಎಂದು ಪ್ರಶ್ನಿಸಿದ ಅವರು, ಇವರೇ ಇಡೀ ಕುರುಬ ಸಮುದಾಯವನ್ನೇ ಒಡೆದಿದ್ದಾರೆ . ಮೊದಲು ಕುರುಬ ಸಮುದಾಯದ ಮಠವನ್ನು ಸಿದ್ದರಾಮಯ್ಯ ಒಡೆದರು. ನಂತರ ಕರ್ನಾಟಕ ಪ್ರದೇಶ ಕುರುಬರ ಸಂಘವನ್ನ ಹೊಡೆದರು. ಈಗ ಕುರುಬರ ರಾಜಕಾರಣವನ್ನೇ ಒಡೆದಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಕುರುಬ ಸಮುದಾಯವನ್ನ ಛಿದ್ರ ಮಾಡುತ್ತಿದ್ದಾರೆ. ಹೊರತು ಆರ್ಎಸ್ಎಸ್ ಅಲ್ಲ. ಬೀರೇಂದ್ರ ಕೇಶವ ತಾರಕಾನಂದ ಪುರಿ ಶ್ರೀಗಳನ್ನ ಪೀಠಾಧಿಪತಿ ಮಾಡಿದ್ದಾಗ ವಿರೋಧಿಸಿದ್ದರು. ಶ್ರೀಗಳು ಆರ್ಎಸ್ಎಸ್ ನಿಂದ ಬಂದವರು ಎಂದು ವಿರೋಧಿಸಿದ್ದರು. ಈಗ ಕುರುಬರ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಇದೆ ಎಂದು ಆರೋಪಿಸುತ್ತಾರೆ. ಹಾಗಾದ್ರೆ ಇವರೇ ಕುರುಬ ಸಮುದಾಯದ ಹೋರಾಟದ ನಾಯಕತ್ವ ವಹಿಸಿಕೊಳ್ಳಲಿ. ನಾವೆಲ್ಲರೂ ನಿಮ್ಮ ಹಿಂದೆ ಬರುತ್ತೇವೆ. ಅದನ್ನು ಬಿಟ್ಟು ಯಾಕೆ ಸಬೂಬು ಹೇಳುತ್ತೀರಾ. ಮೀಸಲಾತಿ ವಿಚಾರದಲ್ಲಿ ಹೋರಾಟ ಅಗತ್ಯವಿದೆ. ನಿಮ್ಮ ನೇತೃತ್ವದಲ್ಲಿಯೇ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.
ನಿನ್ನೆ ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್ ಕುರುಬ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಹೋರಾಟಕ್ಕೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಮುಕ್ತ ಆಹ್ವಾನ ನೀಡಿದ್ದರು. ಈಗಾಗಲೇ ಎಚ್.ಎಂ ರೇವಣ್ಣ, ಕೆ.ಎಸ್ ಈಶ್ವರಪ್ಪ, ಸ್ವಾಮೀಜಿಗಳೂ ಹೋರಾಟಕ್ಕೆ ಬರುವಂತೆ ಕರೆದಿದ್ದಾರೆ. ಹಳೆಯದನ್ನು ಮರೆತು ಬನ್ನಿ ಎಂದಿದ್ದರು.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ