ಹಾವೇರಿ: ಸೋಮವಾರ ರಾಣೇಬೆನ್ನೂರಿನ (Ranebennuru, Haveri) ಪ್ರಜಾಧ್ವನಿ ಸಮಾವೇಶದಲ್ಲಿ (Prajadhwani) ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಬಿಜೆಪಿ ಸರ್ಕಾರದ (BJP Government) ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪಿಸಿ ವಾಗ್ದಾಳಿ ನಡೆಸಿದರು. ವಿಧಾನಸೌಧಕ್ಕೆ ಕಿವಿ ಕೊಟ್ಟರೆ ಲಂಚ ಲಂಚ ಅಂತಾ ಪಿಸುಗುಟ್ಟುತ್ತದೆ. ಯಾವ ಕಚೇರಿಗೂ ಹೋದ್ರು ಲಂಚ ಲಂಚ ಅಂತಾ ಕೇಳ್ತಾರೆ.ಲಂಚ ಇಲ್ಲದೇ ಯಾವ ಕೆಲಸ ನಡೆಯಲ್ಲ. ಅಮಿತ್ ಶಾ (Union Minister Amit Shah) ಅವರೇ ಬಹುಶಃ ಲಂಚದ ಹಣ ಫಿಕ್ಸ್ ಮಾಡಿರಬೇಕು. ಶಾಸಕ, ಸಚಿವರಿಗೆ ಹಣ ಸಂಗ್ರಹಣೆಗೆ ಹೇಳಿರಬೇಕು ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಯಾವ ಪಕ್ಷಕ್ಕೆ ಅಧಿಕಾರ ನೀಡಿದರೆ ರಾಜ್ಯಕ್ಕೆ ಒಳ್ಳೆಯದಾಗಿ ಅಭಿವೃದ್ಧಿ ಆಗುತ್ತದೆ ಎಂದು ವಿಚಾರ ಮಾಡಬೇಕು. ಕಾಂಗ್ರೆಸ್ ಅಧಿಕಾರವನ್ನ ನೋಡಿದ್ದೀರಿ ಐದು ವರ್ಷಗಳ ಕಾಲ. ನಿಮ್ಮ ಆಶಿರ್ವಾದದಿಂದ ನಾನು ಸಿಎಂ ಆಗಿದ್ದೆ. ನಮಗೆ ಅಂದು ಹೆಚ್ಚು ಮತಗಳು ಬಂದಿದ್ದವು ಮತ್ತು ಶೇಕಡಾವಾರು ಮತಗಳಿಕೆ ಸಹ ಹೆಚ್ಚಿತ್ತು ಎಂದು ಹೇಳಿದರು.
ಹೋಟೆಲ್ನಲ್ಲಿ ಕುಳಿತು ಆಡಳಿತ
ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲಾಗಿತ್ತು. ಸಮ್ಮಿಶ್ರ ಸರ್ಕಾರ ರಚನೆಯಾಗಿ 1 ವರ್ಷ 2 ತಿಂಗಳು ಸಿಎಂ ಆದರೂ ವಿಧಾನಸೌಧದಲ್ಲಿ ಕುಳಿತು ಅಧಿಕಾರ ಮಾಡಿದ್ರೆ ಇರುತ್ತಿತ್ತು. ಆದರೆ ಹೋಟೆಲ್ ನಲ್ಲಿ ಅಧಿಕಾರ ಮಾಡಿದರು. ವೈಯಕ್ತಿಕವಾಗಿ ಅಧಿಕಾರವನ್ನ ಮಜಾ ಮಾಡಲಿಕ್ಕೆ ಹೋಟೆಲ್ನಲ್ಲಿ ಪ್ರಾರಂಭ ಮಾಡಿದರು. ಹೀಗಾಗಿ ಶಾಸಕರು ಬೇಸತ್ತಿದ್ದರು. ಇದನ್ನೇ ಬಿಜೆಪಿಯವರು ಕಾಯುತ್ತಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ವಾಗ್ದಾಳಿ ನಡೆಸಿದರು.
ಆರ್.ಶಂಕರ್ ವಿರುದ್ಧ ವಾಗ್ದಾಳಿ
ಆರ್ ಶಂಕರ್ (R Shankar) ಅರಣ್ಯ ಖಾತೆ ಕೊಡಲಾಗಿತ್ತು. ತಿಂಡಿಗೆ ಕರೆದ ವೇಳೆ ಪಕ್ಷ ಬಿಟ್ಟು ಹೋಗಬೇಡಿ ಅಂತ ಹೇಳಿದ್ದೆ. ಆದ್ರೆ ತಿಂಡಿ ಮಾಡ್ಕೊಂಡು ಹೋದವರು ಬಿಜೆಪಿ ಸೇರಿದರು ಎಂದು ಆರ್ ಶಂಕರ್ ವಿರುದ್ಧ ಹರಿಹಾಯ್ದರು.
ಅನೈತಿಕ ಹಾಗೂ ವಚನ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರ ಕರ್ನಾಟಕದಲ್ಲಿದೆ. ಇವರು ಬಂದ ಮೇಲೆ ಬರೀ ಲೂಟಿ ಆಗ್ತಿದೆ. ಕರ್ನಾಟಕದ ಇತಿಹಾಸದಲ್ಲಿ 40% ಲಂಚ ತೆಗೆದುಕೊಳ್ಳುವ ಸರ್ಕಾರ ಬಂದಿರಲಿಲ್ಲ. ನಮ್ಮ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ ಎಂದರು.
ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಇಂದು ನಮ್ಮ ಪ್ರಜಾಧ್ವನಿ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೂ ಮಳೆ ಸುರಿಸಿ, ಪ್ರೀತಿಯಿಂದ ಬರಮಾಡಿಕೊಂಡು ನಮ್ಮೊಂದಿಗೆ ಹೆಜ್ಜೆ ಹಾಕಿದರು. pic.twitter.com/IthCkm40Bp
— Siddaramaiah (@siddaramaiah) March 13, 2023
ಮೋದಿಯವರು ಮಾತೆತ್ತಿದರೆ ನಾ ಖಾವೂಂಗಾ ನಾನ್ ಖಾನೆ ದೇವೊಂಗಾ ಅಂತಾರೆ. ಆದ್ರೆ ಪ್ರಧಾನಿಗಳಿಗೆ ಗುತ್ತಿಗೆದಾರರು ನಿರಂತರವಾಗಿ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆಯುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಸಿಎಂ ಬೊಮ್ಮಾಯಿ ಬಂಡತನದಿಂದ ದಾಖಲಾತಿ ಕೊಡಿ ಎಂದು ಕೇಳುತ್ತಿದ್ದಾರೆ. ಕೆಂಪಣ್ಣ ದಾಖಲಾತಿ ಅಲ್ವಾ ಪತ್ರ ಬರೆದಿದ್ದು ದಾಖಲಾತಿ ಆಗಲಿಲ್ವಾ? ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಎಂಟಿಬಿ ನಾಗರಾಜ್ ಮಾತಾಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ ಬೊಮ್ಮಾಯಿ ಅವರೇ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: HD Kumaraswamy: ನರೇಂದ್ರ ಮೋದಿ ಮಂಡ್ಯಕ್ಕಲ್ಲ ರಾಜ್ಯದ ಯಾವ ಭಾಗಕ್ಕೆ ಬಂದರೂ ನಮಗೆ ಚಿಂತೆ ಇಲ್ಲ: ಎಚ್‌ಡಿಕೆ
ಶಾಸಕ ವಿರೂಪಾಕ್ಷಪ್ಪ ರಕ್ಷಣೆ
ಶಾಸಕ ವಿರೂಪಾಕ್ಷಪ್ಪ (MLA Madal Virupakshappa) ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಬೊಮ್ಮಾಯಿ ಒಬ್ಬ ಬಂಡ, ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಆದ್ರೆ ವಿರೂಪಾಕ್ಷಪ್ಪನನ್ನ ರಕ್ಷಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ