ಹಿಂದಿ ಹೇರಿಕೆ ವಿರುದ್ಧ ಸದಾ ಧ್ವನಿ ಎತ್ತುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಇದೀಗ ಬಾಲಿವುಡ್ ನಟನ (Bollywood Actress) ಮೇಲೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಉತ್ತರ ಭಾರತೀಯರ ಹಿಂದಿ ಹೇರಿಕೆ ವಿರುದ್ಧ ಮತ್ತೇ ತಿರುಗೇಟು ನೀಡಿದ್ದಾರೆ. ರಾಷ್ಟ್ರಭಾಷೆ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಹೇಳಿಕೆಗೆ ಕನ್ನಡ ನಟ ಕಿಚ್ಚ ಸುದೀಪ್ (Sudeep) ಕೂಡ ಖಡಕ್ ಆಗಿ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ. ಈ ಮೂಲಕ ಮತ್ತೆ ಹಿಂದಿ (Hindi) ರಾಷ್ಟ್ರ ಭಾಷೆ ಎಂಬ ವಿವಾದ ಮತ್ತೆ ಕಿಡಿ ಹೊತ್ತಿಸಿದ್ದು, ಬಾಲಿವುಡ್ ನಟನ ವರ್ತನೆ ಕನ್ನಡಿಗರನ್ನು ಕೆಣಕಿದೆ. ಈ ವಿಚಾರ ಕುರಿತು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
ಏನಿದು ವಿವಾದ
ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಆಡಿದ ಮಾತು ಉದ್ದೇಶಿಸಿ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃಭಾಷೆಗಳ ಸಿನಿಮಾಗಳನ್ನು ಯಾಕೆ ಹಿಂದಿಗೆ ಡಬ್ ಮಾಡುತ್ತೀರಾ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕಿಚ್ಚ ಸುದೀಪ್ ನಾನು ಬೇರೆಯದ್ದೇ ರೀತಿಯಲ್ಲಿ ಆ ಮಾತುಗಳನ್ನು ತಿಳಿಸಿದ್ದೆ. ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಯಾಕಂದ್ರೆ, ನಾವು ಪ್ರೀತಿಯಿಂದ ಹಾಗೂ ಗೌರವದಿಂದ ಹಿಂದಿ ಕಲಿತಿದ್ದೇವೆ. ಆದರೆ, ನಿಮ್ಮ ಟ್ವೀಟ್‌ಗೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಕೇಳಿದ್ದಾರೆ.
ಕನ್ನಡಿಗನಾಗಿರಲು ಹೆಮ್ಮೆ ಪಡುತ್ತೇನೆ
ಈ ನಡುವೆ ಅಜಯ್ ದೇವಗನ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹಿಂದಿ ಎಂದು ಹಾಗೂ ಮುಂದೆ ಎಂದಿಗೂ ನಮ್ಮ ರಾಷ್ಟ್ರ ಭಾಷೆ ಆಗಲು ಸಾಧ್ಯವಿಲ್ಲ. ದೇಶದ ವಿವಿಧ ಭಾಷೆಗಳ ವೈವಿದ್ಯಮಯ ಸಂಸ್ಕೃತಿಯನ್ನು ಗೌರವಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಪ್ರತಿಯೊಂದು ಭಾಷೆ ಕೂಡ ತನ್ನದೇ ಆದ ಐತಿಹಾಸಿ ಶ್ರೀಮಂತಿಕೆಯನ್ನು ಹೊಂದಿದೆ. ನಾನೊಬ್ಬ ಕನ್ನಡಿಗ ಎಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದ್ದಾರೆ.
Hindi was never & will never be our National Language.
It is the duty of every Indian to respect linguistic diversity of our Country.
Each language has its own rich history for its people to be proud of.
I am proud to be a Kannadiga!! https://t.co/SmT2gsfkgO
— Siddaramaiah (@siddaramaiah) April 27, 2022
ಸಿಡಿದೆದ್ದ ಕನ್ನಡಿಗರು
ಬಾಲಿವುಡ್ ನಟನ ಈ ಮಾತಿಗೆ ಅನೇಕ ಕನ್ನಡಿಗರು ಕೂಡ ಸಿಡಿದೆದ್ದಿದ್ದಾರೆ. ಹಿಂದಿ ರಾಜ್ಯಗಳ ಜನರು ಇಲ್ಲಿ ಕೆಲಸ ಅರಸಿ ಬರುತ್ತಾರೆ. ನಾವು ಎಂದಿಗೂ ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಅವರ ಮೇಲೆ ಹೇರುವುದಿಲ್ಲ. ಅವರ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿ ರಾಜ್ಯಗಳ ಈ ಜನರು ನಾವು ಅವರ ಭಾಷೆಯಲ್ಲಿ ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಅವರು ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದರು.
ಇದನ್ನು ಓದಿ: ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದ ಕಿಚ್ಚನ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಏನಿದು ಹೊಸ ವಿವಾದ?
ಮತ್ತೊಬ್ಬರು ಹಿಂದಿ ನಿಮ್ಮ ಮಾತೃಭಾಷೆಯಾಗಿರಬಹುದು ಸರ್. ನಾನು ಅದನ್ನು ಗೌರವಿಸುತ್ತೇನೆ. ಪ್ರತಿ ಭಾರತೀಯ ನಾಗರಿಕ ಭಾಷೆ ಹಿಂದಿ ಅಲ್ಲ. ಹಾಗಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಭಾರತವು ವೈವಿಧ್ಯಮಯ ದೇಶವಾಗಿದ್ದು, ಭಾರತದ ವಿವಿಧ ಭಾಗದಲ್ಲಿ ಮಾತನಾಡುವ ಸಾಕಷ್ಟು ಭಾಷೆಗಳಿವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ