ನಿರೂಪಕಿ ಕ್ಷಮೆಯಾಚಿಸಿ, ಸೆಲ್ಫಿಗೆ ಫೋಸ್​ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಗುರುಪೀಠದ ವತಿಯಿಂದ ನಿರ್ಮಿಸಿರುವ ಏಳು ಕೋಟಿ ಭಕ್ತರ ಕುಟೀರವನ್ನು ಉದ್ಘಾಟನೆ ಕಾರ್ಯಕ್ರಮದ ವೇಳೆ  ನಿರೂಪಕಿ ಸುಮತಿ ಜಯಪ್ಪ ಅವರನ್ನು ಸಿದ್ದರಾಮಯ್ಯ ತಳ್ಳಿದ್ದರು. 

Seema.R | news18
Updated:May 9, 2019, 4:36 PM IST
ನಿರೂಪಕಿ ಕ್ಷಮೆಯಾಚಿಸಿ, ಸೆಲ್ಫಿಗೆ ಫೋಸ್​ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದ ನಿರೂಪಕಿ ಜೊತೆ ಸಿದ್ದರಾಮಯ್ಯ
  • News18
  • Last Updated: May 9, 2019, 4:36 PM IST
  • Share this:
ಬಳ್ಳಾರಿ (ಮೇ.8):  ಹೂವಿನ ಹಡಗಲಿ ತಾಲೂಕಿನ ಶ್ರೀ ಕ್ಷೇತ್ರ ಮೈಲಾರದಲ್ಲಿ ಕನಕ ಗುರುಪೀಠ ಕಾರ್ಯಕ್ರಮದ ನಿರೂಪಕಿ ಬಳಿ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆಯಾಚಿಸಿದ್ದಾರೆ.

ಗುರುಪೀಠದ ವತಿಯಿಂದ ನಿರ್ಮಿಸಿರುವ ಏಳು ಕೋಟಿ ಭಕ್ತರ ಕುಟೀರವನ್ನು ಉದ್ಘಾಟನೆ ಕಾರ್ಯಕ್ರಮದ ವೇಳೆ  ನಿರೂಪಕಿ ಸುಮತಿ ಜಯಪ್ಪ ಅವರನ್ನು ಸಿದ್ದರಾಮಯ್ಯ ತಳ್ಳಿದ್ದರು.

ಸಿದ್ದರಾಮಯ್ಯ  ಭಾಷಣ ಮಾಡಲು ಮುಂದಾದಾಗ ನಿರೂಪಕಿ ಕಾರ್ಯಕ್ರಮದ ಬಗ್ಗೆ ವರ್ಣನೆ ಮಾಡುತ್ತಿದ್ದರು. ಈ ವೇಳೆ ಮೈಕ್ ಕಸಿದು ಕೊಂಡು ಸಾಕು ನಡಿಯಮ್ಮ ಎಂದು ತಳ್ಳಿದರು.  ಕಾರ್ಯಕ್ರಮದ ವೇಳೆ ನಡೆದ ಈ ಆಚಾತುರ್ಯದಿಂದ ಎಚ್ಚೆತ್ತ ಸಿದ್ದರಾಮಯ್ಯ ಬಳಿಕ ನಿರೂಪಕಿಯ ಕ್ಷಮೆಯಾಚಿಸಿದ್ದಾರೆ.

ತಮ್ಮ ಭಾಷಣದ ಬಳಿಕ ನಿರೂಪಕಿ ಬಳಿ ಬಂದ ಸಿದ್ದರಾಮಯ್ಯ, ನನಗೆ ಕಾರ್ಯಕ್ರಕ್ಕೆ ಹೋಗಲು ತಡವಾಗುತ್ತಿತ್ತು. ಹೀಗಾಗಿ ನಾನು ಹಾಗೆ ನಡದುಕೊಂಡೆ. ತಮ್ಮ ವರ್ತನೆಯಿಂದ ನೋವಾಗಿದ್ದರೆ ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಸಿಎಂ ಒಂದು ಗಂಟೆ ವಿಳಂಬವಾಗಿ ಹೋಗಿದ್ದಕ್ಕೆ ಸಭಿಕರಲ್ಲೂ ಕ್ಷಮೆಯಾಚಿಸಿದ್ದರು. ನಿರೂಪಕಿ ದಾವಣಗೆರೆ ಮೂಲದವರಾಗಿದ್ದು, ಸರ್ಕಾರಿ ಕಾಲೇಜಿನ ಉಪನ್ಯಾಸಕಿಯಾಗಿ ಕಾರ್ಯನಿರ್ವಯಿಸುತ್ತಿದ್ದಾರೆ

ಇದನ್ನು ಓದಿ: 'ಸಿಎಂ ಖುರ್ಚಿ ಖಾಲಿ ಇಲ್ಲ, ಕುಮಾರಸ್ವಾಮಿಯೇ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ'; ಸಿದ್ದರಾಮಯ್ಯ ಸ್ಪಷ್ಟನೆ

ಸಿದ್ದರಾಮಯ್ಯ ಅವರು ಕ್ಷಮೆ ಕೇಳುತ್ತಿದ್ದಂತೆ ನಿರೂಪಕಿ ಹೋಗಲಿ ಬಿಡಿ ಸರ್. ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಕ್ಷಮೆಯಾಚಿಸಬೇಡಿ ಎಂದು ಮನವಿ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಬಳಿ ಸೆಲ್ಫಿ ಕೇಳಿದ್ದಾರೆ. ನಿರೂಪಕಿ ಮಾತಿಗೆ ಸಮ್ಮತಿ ಸೂಚಿಸಿ ಆಕೆಯೊಂದಿಗೆ ಸಿದ್ದರಾಮಯ್ಯ ಸೆಲ್ಫಿಗೆ ಫೋಸ್​ ನೀಡಿದ್ದಾರೆ.

ಕುಂದಗೋಳ ಉಪಚುನಾವಣಾ ಪ್ರಚಾರದ ಬಳಿಕ ಕಳೆದ ಮೂರು ನಾಲ್ಕು ದಿನಗಳಿಂದ ಕೊಡಗಿನಲ್ಲಿ ಮಗನೊಂದಿಗೆ ರೆಸಾರ್ಟ್​ನಲ್ಲಿದ್ದ ವಿಶ್ರಾಂತಿಯಲ್ಲಿದ್ದ ಸಿದ್ದರಾಮಯ್ಯ ಮಾಧ್ಯಮ, ಕಾರ್ಯಕ್ರಮಗಳೊಂದಿಗೆ ಅಂತರ ಕಾಯ್ದುಕೊಂಡಿದ್ದರು
First published:May 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ