ಸಿದ್ದರಾಮಯ್ಯ, ಡಿಕೆಶಿ ಭೀಷ್ಮ ಶಪಥ; ಅನರ್ಹ ಶಾಸಕರನ್ನು ಸೋಲಿಸುವ ತನಕ ಗಡ್ಡ ಬೋಳಿಸಲ್ಲ!

ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಅವರಿಗೆ ಸದನದಲ್ಲಿ ಡಿಕೆ ಶಿವಕುಮಾರ್​ ಚಾಲೆಂಜ್​ ಹಾಕಿದ್ದರು. ನನ್ನ - ನಿನ್ನ ಭೇಟಿ ರಣರಂಗದಲ್ಲಿ ಎಂದು ಗುಡುಗಿದ್ದರು. ಈಗ ಉಪಚುನಾವಣೆಯೊಳಗೆ ಡಿಕೆ ಶಿವಕುಮಾರ್​ ಬಿಡುಗಡೆಯಾಗಿ ಬಂದಿದ್ದಾರೆ. ಅನರ್ಹರನ್ನು ಸೋಲಿಸುವವರೆಗೆ ಡಿಕೆಶಿ ಗಡ್ಡ ತೆಗೆಯಲ್ವಾ ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣಿಗರಲ್ಲಿ ಮೊಳೆತಿದೆ. 

Seema.R | news18-kannada
Updated:November 13, 2019, 3:30 PM IST
ಸಿದ್ದರಾಮಯ್ಯ, ಡಿಕೆಶಿ ಭೀಷ್ಮ ಶಪಥ; ಅನರ್ಹ ಶಾಸಕರನ್ನು ಸೋಲಿಸುವ ತನಕ ಗಡ್ಡ ಬೋಳಿಸಲ್ಲ!
ಗಡ್ಡ ಬಿಟ್ಟ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ನ.13): ಇತ್ತೀಚಿನ ದಿನಗಳಲ್ಲಿ ಗಡ್ಡ ಬಿಡುವುದು ಎಲ್ಲೆಡೆ ಟ್ರೆಂಡ್​ ಸೃಷ್ಟಿಯಾಗಿದೆ. ಉದ್ದುದ್ದ ಗಡ್ಡ ಬಿಡುವ ಹೊಸ ಪ್ಯಾಷನ್​ಗೆ ಯುವ ಜನತೆ ಮಾರು ಹೋಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್​ ಕೂಡ ಇದೇ ಗಡ್ಡದ ಲುಕ್​ನಲ್ಲಿ ಕಾಣಿಸಿಕೊಂಡು ಎಲ್ಲರಿಂದ ಮೆಚ್ಚುಗೆ ಪಡೆದಿದ್ದರು. ಈಗ ಅವರ ಬೆನ್ನ ಹಿಂದೆ ಸಿದ್ದರಾಮಯ್ಯ ಕೂಡ ಗಡ್ಡದ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜಕೀಯ ನಾಯಕರನ್ನು ಈ ಗಡ್ಡದ ಮೋಹ ಕಾಡುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

ಕಳೆದ ಎರಡು ಮೂರು ದಿನಗಳಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಲುಕ್​ ಬದಲಾಗಿದೆ. ಸಿದ್ದರಾಮಯ್ಯ ಗಡ್ಡ ಬಿಡಲು ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಕಾರಣವೋ? ಅಥವಾ ಆಂತರಿಕ ಒತ್ತಡಗಳು ಕಾರಣವೋ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನನ್ನ ಹಳೆಯ ಸ್ಟೈಲ್​ ಎಂದು ಉತ್ತರಿಸಿದ್ದಾರೆ.

ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ​ ತೀರ್ಪಿನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿಗೆ, ಗಡ್ಡದ ಕುರಿತು ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ನಾನು ಈಗಿನಿಂದ ಅಲ್ಲ. 1974ರಿಂದಲೂ ಗಡ್ಡ ಬಿಡುತ್ತಿದ್ದೇನೆ. ಸಿಎಂ ಆದ ಬಳಿಕ ನಾನು ಗಡ್ಡವನ್ನು ಟ್ರಿಮ್​ ಮಾಡಲು ಶುರುಮಾಡಿದೆ. ಬಿಳಿ ಗಡ್ಡ ಬಂದ ಕಾರಣ ನಾನು ಟ್ರಿಮ್​ ಮಾಡುತ್ತಿದ್ದೆ. ಈಗ ಹಳೇ ಲುಕ್​ಗೆ ಮರಳಿದ್ದು, ಇನ್ಮುಂದೆ ಸದಾ ನನ್ನನ್ನು ಗಡ್ಡದಲ್ಲಿಯೇ ನೋಡುತ್ತೀರಾ ಎಂದಿದ್ದಾರೆ.

siddaramaiah old look
ಕುಟುಂಬದೊಂದಿಗೆ ಸಿದ್ದರಾಮಯ್ಯರವರ ಹಳೆ ಚಿತ್ರ


ಇನ್ನು ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೂಡ ಸಿದ್ದರಾಮಯ್ಯ ಗಡ್ಡದ ಕುರಿತು ಸದನದಲ್ಲಿ ಚರ್ಚೆಯಾಗಿತ್ತು. ಸಿದ್ದರಾಮಯ್ಯ ಈ ಹಿಂದೆ ಗಡ್ಡ ಬಿಟ್ಟು, ರಗಡ್​ ಲುಕ್​, ಖಡಕ್​ ಮಾತಿನಿಂದ ಜನಪ್ರಿಯರಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಆ ರೀತಿಯ ಸಿದ್ದರಾಮಯ್ಯ ಅವರನ್ನು ಕಾಣುತ್ತಿಲ್ಲ. ಅವರ ಮುಖದಲ್ಲಿ ಗಡ್ಡ ಕೂಡ ಕಣ್ಮರೆಯಾಗಿದೆ ಎಂದು ಬಸವರಾಜ್​ ಬೊಮ್ಮಾಯಿ ಕಾಲೆಳೆದಿದ್ದರು. ಇದಕ್ಕೆ ಸಿದ್ದರಾಮಯ್ಯ ನಕ್ಕು ಸುಮ್ಮನಾಗಿದ್ದರು.

ಇದನ್ನು ಓದಿ: ಹಾವೂ ಸಾಯಬಾರದು, ಕೋಲೂ ಮುರಿಯಬಾರದು: ಸುಪ್ರೀಂ ತೀರ್ಪಿಗೆ ಪ್ರಕಾಶ್ ರಾಜ್​ ಮಾರ್ಮಿಕ ಪ್ರತಿಕ್ರಿಯೆ

ಬೊಮ್ಮಯಿ ಮಾತಿಗೋ, ಅಥವಾ ಸ್ಟೈಲ್​ಗೋ ತಮ್ಮ ಹಳೆ ಲುಕ್​ಗೆ ಮರಳಿರುವ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಗಡ್ಡದಲ್ಲಿಯೇ ಕಾಣಲಿದ್ದಾರೆ. ಅದರಲ್ಲಿಯೂ ಅನರ್ಹ ಶಾಸಕರ ತೀರ್ಪಿನ ದಿನವೇ ಅವರ ಗಡ್ಡ ಎಲ್ಲರನ್ನು ಸೆಳೆದಿದೆ. ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವ ತನಕ ಗಡ್ಡ ತೆಗೆಯಲ್ಲ ಎಂಬ ಶಪಥ ಮಾಡಿದ್ದಾರ ಎಂದೂ ಕೆಲವರು ಕುತೂಹಲ ವ್ಯಕ್ತಪಡಿಸಿದ್ದಾರೆ.ಜತೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಡಿಕೆ ಶಿವಕುಮಾರ್​ ಕೂಡ ಗಡ್ಡವನ್ನು ತೆಗೆದಿಲ್ಲ. ಜೈಲಿನಲ್ಲಿರುವಾಗ ರೇಸರ್​ ಕಿಟ್​ ಬೇಕು ಮತ್ತು ಶೇವಿಂಗ್​ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಡಿಕೆಶಿ ಕೋರ್ಟ್​ಗೆ ಮನವಿ ಮಾಡಿದ್ದರು. ಆದರೆ ಜಾಮೀನು ಪಡೆದು ಬಿಡುಗಡೆಯಾದಾಗ ನೋಡಿದರೆ ಡಿಕೆಶಿ ಗಡ್ಡ ಬಿಟ್ಟುಕೊಂಡಿದ್ದರು. ಅದಾದ ನಂತರವಾದರೂ ತೆಗೆಯುತ್ತಾರ ಎಂದು ಕಾದು ನೋಡಿದರೆ ಈಗಲೂ ಅದೇ ಲುಕ್​ ಮುಂದುವರೆಸಿದ್ದಾರೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಅವರಿಗೆ ಸದನದಲ್ಲಿ ಡಿಕೆ ಶಿವಕುಮಾರ್​ ಚಾಲೆಂಜ್​ ಹಾಕಿದ್ದರು. ನನ್ನ - ನಿನ್ನ ಭೇಟಿ ರಣರಂಗದಲ್ಲಿ ಎಂದು ಗುಡುಗಿದ್ದರು. ಈಗ ಉಪಚುನಾವಣೆಯೊಳಗೆ ಡಿಕೆ ಶಿವಕುಮಾರ್​ ಬಿಡುಗಡೆಯಾಗಿ ಬಂದಿದ್ದಾರೆ. ಅನರ್ಹರನ್ನು ಸೋಲಿಸುವವರೆಗೆ ಡಿಕೆಶಿ ಗಡ್ಡ ತೆಗೆಯಲ್ವಾ ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣಿಗರಲ್ಲಿ ಮೊಳೆತಿದೆ.
First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ