• Home
  • »
  • News
  • »
  • state
  • »
  • Siddaramaiah: ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ; ಸಿದ್ದರಾಮಯ್ಯ

Siddaramaiah: ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ; ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ನಾವು ಸರ್ಕಾರ ನಡೆಸಿದ್ದೇವೆ. ನಾವು ಯಾವತ್ತು ಪ್ರತಿಭಟನೆ ಹತ್ತಿಕ್ಕಿಲ್ಲ. ನಮಗೆ ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇತ್ತು. ಪ್ರತಿಭಟನೆ ಹತ್ತಿಕ್ಕಿದರೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಿಗಡಾಯಿಸುತ್ತೆ. ಈ ಎಚ್ಚರಿಕೆ‌ ನಾವು ನೀಡ್ತಿವಿ. ಈ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಜನ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

ಮುಂದೆ ಓದಿ ...
  • Share this:

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education minister B C Nagesh) ಮನೆ ಮುಂದೆ NSUI ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ  ಕ್ಲಾರ್ಕ್ಸ್ ಎಕ್ಸಾಟಿಕದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಸುದ್ದಿಗೋಷ್ಠಿ ನಡೆಸಿದರು. ಜೂನ್ 1 ರಂದು NSUI ಅಧ್ಯಕ್ಷ ಕೀರ್ತಿ ಗಣೇಶ್ (Kirtiganesh) ನೇತೃತ್ವದಲ್ಲಿ ಶಿಕ್ಷಣ ಸಚಿವ ನಾಗೇಶ್ ಮನೆ ಮುಂದೆ ನಡೆಯುತ್ತದೆ. ಪಠ್ಯ ಪುಸ್ತಕ ಅಕ್ರಮದ ಬಗ್ಗೆ ಹೋರಾಟ ಮಾಡ್ತಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಹಕ್ಕಿದೆ. ಪ್ರತಿಭಟನೆಯಲ್ಲಿ ಚಡ್ಡಿ ಸುಟ್ಟಿದ್ದಾರೆ. RSSನವರು ಆವಾಗ ಚಡ್ಡಿ ಹಾಕ್ತಿದರು. ಈಗ ಪ್ಯಾಂಟ್ ಹಾಕ್ತಿದ್ದಾರೆ . ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jananedra) ಹೇಳಿದಂತೆ ಪೊಲೀಸರು ಕೇಸ್ ಹಾಕಿದ್ದಾರೆ. ಈ ಹೋಮ್ ಮಿನಿಸ್ಟರು ಎಲ್ಲಿ ಕ್ರಮ ತಗೊಳ್ಳಬೇಕು ಅಲ್ಲಿ ತಗೊಳ್ಳಲ್ಲ. ಎಲ್ಲಿ ಕ್ರಮ ತಗೊಬಾರದೋ ಅಲ್ಲಿ ತಗೊಳ್ತಾರೆ ಎಂದು ಆಕ್ರೋಶ ಹೊರ ಹಾಕಿದರು.


ಪ್ರಜಾಪ್ರಭುತ್ವದಲ್ಲಿ ಹೋರಾಟದ ಹಕ್ಕಿದೆ. ಅದರಂತೆ ಅವರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ‌ ಚಡ್ಡಿ‌ ಸುಟ್ಟಿದ್ದಾರೆ. ಚಡ್ಡಿ ಸುಟ್ಟಿದ್ದೇ ದೊಡ್ಡ ಅಪರಾಧವಾಗಿದೆ. ಪ್ರತಿಭಟನೆ ಒಬ್ಬರೇ ಮಾಡೋಕೆ ಆಗುತ್ತಾ? ಕಾರ್ಯಕರ್ತರು ಸೇರಿ ಪ್ರತಿಭಟನೆ ಮಾಡಿದ್ದಾರೆ. ಸಚಿವರ ಮನೆ ಒಳಗೆ ನುಗ್ಗಿಲ್ಲ. ಕಾಂಪೌಂಡ್ ಗೇಟ್ ಮುಂದೆ ಧರಣಿ ಮಾಡಿದ್ದಾರೆ  ಎಂದು ಹೇಳಿದರು.


ಅದು ಕಾನೂನಿಗೆ ವಿರುದ್ಧವಾಗಲಿಲ್ಲವೇ?


ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆಯಾದಾಗ ಮಾಜಿ ಸಚಿವ ಈಶ್ವರಪ್ಪ 144 ಸೆಕ್ಷನ್ ಇದ್ದಾಗಲೇ ಪ್ರತಿಭಟನೆ ಮಾಡಿ, ಮೆರವಣಿಗೆ ಮಾಡಿದರು. ಅದು ಕಾನೂನಿಗೆ ವಿರುದ್ಧವಾಗಲಿಲ್ವೇ? ಆಗ ಅವರ ಮೇಲೆ ಏನು ಕ್ರಮ ತೆಗೆದುಕೊಂಡಿದ್ರು? ಗೃಹ ಸಚಿವರು ಏನು ಕ್ರಮ ಜರುಗಿಸಿದ್ರು? ಕೇಂದ್ರ ಸಚಿವ ಖೂಬಾ ಮೇಲೆ ಏನು ಕ್ರಮ ಜರುಗಿಸಿದ್ರು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.


ಇದನ್ನೂ ಓದಿ:  Karnataka Textbook Row: ಪಠ್ಯ ಪುಸ್ತಕ ವಿವಾದದ ಬಗ್ಗೆ ಸಿದ್ದಗಂಗಾ ಶ್ರೀಗಳು ಹೇಳಿದ್ದಿಷ್ಟು


ಸಾಹಿತಿಗಳಿಂದ ಸಿಎಂಗೆ ಪತ್ರ


ಪಠ್ಯ ಪರಿಷ್ಕರಣ ಗೊಂದಲದ ಬಗ್ಗೆ ಚರ್ಚೆಯಾಗ್ತಿದೆ. ಪಠ್ಯವನ್ನ ಕೇಸರೀಕರಣ ಮಾಡೋಕೆ ಹೊರಟಿದ್ದಾರೆ. ಅದರ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ. ಪಠ್ಯ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥ ತೆಗೆಯೋಕೆ ಒತ್ತಾಯವಿದೆ. ಸಾಹಿತಿಗಳೇ ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ. ಇದರ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ.


ಸುಳ್ಳು ಕೇಸ್ ಹಾಕಿಸಿದ್ದಾರೆ


ಪ್ರತಿಭಟನೆ ಮಾಡುವುದು ಮೂಲಭೂತ ಹಕ್ಕು . ಪ್ರತಿಯೊಬ್ಬ ನಾಗರಿಕನಿಗೆ ಹಕ್ಕಿದೆ. ಅದನ್ನೆ ವಿದ್ಯಾರ್ಥಿ ಗಳು ಮಾಡಿದ್ರು. ಅವರ ಮೇಲೆ ಗಂಭೀರ ಪ್ರಕರಣ ದಾಖಲಿಸಿದ್ದಾರೆ. ಸಾಮಾನ್ಯವಾಗಿ ಪೊಲೀಸರು ಸಹಿ ಮಾಡಿಸಿ ಬಿಡ್ತಾರೆ. ಅವತ್ತೇ ಕೆಡಿಪಿ ಮೀಟಿಂಗ್ ಇರುತ್ತೆ. ಅರಗ ಜ್ಙಾನೇಂದ್ರ ಅವರೇ ಪೊಲೀಸರಿಗೆ ಹೇಳಿ ಕೇಸ್ ಹಾಕಿಸಿದ್ದಾರೆ ಎಂದು ಆರೋಪಿಸಿದರು.


ಚಡ್ಡಿ ಸುಡುವ ಅಭಿಯಾನ


ಎಲ್ಲಾದ್ರು ಮನೆಗೆ ಬೆಂಕಿ ಹಾಕ್ತಾರ? ಚಡ್ಡಿ ಸುಟ್ಟಿರೋದು ಅದು ಒಂದೆ ಒಂದು ಚಡ್ಡಿ ಸುಟ್ಟಿರೋದು. ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು  ಇಲ್ಲದಿದ್ದರೆ ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ  ಎಂದು ಹೇಳಿದರು.


ಹಿಟ್ಲರ್ ಕಾಲದ ನೀತಿ ಮಾಡಲು ಆಗಲ್ಲ


ಯಾರು ಪ್ರತಿಭಟನಾಕಾರರು ಹಲ್ಲೆ ಮಾಡಿದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಕ್ರಮ ಕೈಗೊಳ್ಳಲಿಲ್ಲ ಅಂದರೆ ಅಂದರೆ ನಾವು ಹೋರಾಟವನ್ನು ರೂಪಿಸಬೇಕಾಗ್ತದೆ . ಇದು ಗೂಂಡಾಗಳ ರಾಜ್ಯ, ಸರ್ವಾಧಿಕಾರಿ ರಾಜ್ಯ ಅಗ್ತಾ ಇದೆ. ಇದು ಹಿಟ್ಲರ್ ಕಾಲದ ನೀತಿಯಲ್ಲಿ ಮಾಡೋಕೆ ಆಗಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.


ನಾವು ಸರ್ಕಾರ ನಡೆಸಿದ್ದೇವೆ. ನಾವು ಯಾವತ್ತು ಪ್ರತಿಭಟನೆ ಹತ್ತಿಕ್ಕಿಲ್ಲ. ನಮಗೆ ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇತ್ತು. ಪ್ರತಿಭಟನೆ ಹತ್ತಿಕ್ಕಿದರೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಿಗಡಾಯಿಸುತ್ತೆ. ಈ ಎಚ್ಚರಿಕೆ‌ ನಾವು ನೀಡ್ತಿವಿ. ಈ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಜನ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ:  SL Bhyrappa: ಸತ್ಯ ಹೇಳಿ ಎಂದಿದ್ದಕ್ಕೆ ನನ್ನನ್ನು ಹೊರಗಿಟ್ಟಿದ್ದರು! ಪಠ್ಯಪುಸ್ತಕ ವಿವಾದಕ್ಕೆ ಭೈರಪ್ಪ ಪ್ರತಿಕ್ರಿಯೆ


ನಾಮಪತ್ರ ವಾಪಸ್ ಪಡೆಯಲ್ಲ


ಪ್ರಜಾಪ್ರಭುತ್ವ ಸಂವಿಧಾನ ನಾಶ ಮಾಡುವ ಕೆಲಸ ಆಗುತ್ತಿದೆ. ಪೊಲೀಸರು ತೆಗೆದುಕೊಂಡಿರುವ ಕ್ರಮವನ್ನು ಖಂಡಿಸುತ್ತೇವೆ.  ನಾವು ಏಕೆ ಎರಡನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಬೇಕು? ನಮಗೆ ಗೆಲ್ಲುವ ವಿಶ್ವಾಸದಿಂದಲೇ ಎರಡನೇಅಭ್ಯರ್ಥಿಯನ್ನ ಕಣಕ್ಕಿಳಿಸಿರುವುದು. ಬಿಜೆಪಿ ಹಾಗೂ ಜೆಡಿಎಸ್’ಗೇನು  ಪೂರ್ಣಸಂಖ್ಯೆ ಇದೆಯಾ? ನಾವು ಆತ್ಮ ಸಾಕ್ಷಿಗೆ ಮತಹಾಕಲು ಕೇಳಿದ್ದೇವೆ. ನಮಗೆ ಬೇರೆಯವರು ಕೂಡ ಆತ್ಮಸಾಕ್ಷಿಯ ಮತ ಹಾಕ್ತಾರೆ. ಆದರೆ ಯಾರು ಮತ ಹಾಕ್ತಾರೆ ಅಂತಾ ಹೇಳೋಲ್ಲ. ಎರಡನೇ ಪ್ರಾಶಸ್ತ್ಯದ ಮತಗಳು ನಮಗಿದೆ. ಹೈಕಮಾಂಡ್ ಸೂಚನೆ ಮೇರೆಗೇ ನಾವು ಮನ್ಸೂರ್ ಅಲಿ ಖಾನ್ ಕಣಕ್ಕಿಳಿಸಿದ್ದು, ನಾಮಪತ್ರ ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು.

Published by:Mahmadrafik K
First published: