HOME » NEWS » State » SIDDARAMAIAH SAYS WE ARE BUILDING RAM MANDIR IN OUR VILLAGE TOO PMTV SESR

ನಮ್ಮೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ; ಮಾಜಿ ಸಿಎಂ ಸಿದ್ದರಾಮಯ್ಯ

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದರಲ್ಲೇನಿದೆ.  ದೇವರು ಎನ್ನುವುದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ದ ಹರಿಹಾಯ್ದರು. 

news18-kannada
Updated:February 20, 2021, 3:27 PM IST
ನಮ್ಮೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ; ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಮೈಸೂರು (ಫೆ. 20):  ರಾಮ ಮಂದಿರಕ್ಕೆ ದೇಣಿಗೆ ವಿಚಾರವಾಗಿ ಮತ್ತೆ ಬಿಜೆಪಿ ವಿರುದ್ದ ಹರಿಹಾಯ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಜನರು ರಾಮಮಂದಿರ ನಿರ್ಮಾಣಕ್ಕೆ ಹಣ ನೀಡುತ್ತಿದ್ದಾರೆ. ಹೊರೆತು ಅದು ಬಿಜೆಪಿಗಾಗಿ ಅಲ್ಲ, ನಾನು ಈ ದೇಶದ ಪ್ರಜೆ.  ಮಂದಿರ ನಿರ್ಮಾಣಕ್ಕೆ ನಾನು ದುಡ್ಡು ಕೊಡಲಿ, ಬಿಡಲಿ. ಲೆಕ್ಕ ಕೇಳುವ ಅಧಿಕಾರ ನನಗೆ ಇದೆ ಎಂದು ಗುಡುಗಿದ್ದಾರೆ. ಈ ವಿಚಾರ ಕುರಿತು ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ, ಕೇಳುವುದು ನಮ್ಮ ಹಕ್ಕು. ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ ಎಂದು. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಈಗಲೂ ಲೆಕ್ಕ ಕೊಡುತ್ತಿಲ್ಲ. ಇದರ ಅರ್ಥ ಏನು ಅವರೇ ಹೇಳಬೇಕು ಎಂದರು.

ಇದೇ ವೇಳೆ ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ.  ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮ ಮಂದಿರ ಕಟ್ಟುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದರಲ್ಲೇನಿದೆ.  ದೇವರು ಎನ್ನುವುದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ದ ಹರಿಹಾಯ್ದರು.

ಬಜೆಟ್​ ಮೇಲೆ ನಿರೀಕ್ಷೆ ಇಲ್ಲ

ಮಾರ್ಚ್ 8ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ ಮೇಲೆ ಯಾವ ನಿರೀಕ್ಷೆಯೂ ಇಲ್ಲ.  ಕಾರಣ ಇವರ ಬಳಿ ಹಣವೇ ಇಲ್ಲ. ಸದನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ, ನಾನು ಕೇಳಿದ ಪ್ರಶ್ನೆಗಳಿಗೂ ಇನ್ನು ಉತ್ತರ ಕೊಟ್ಟಿಲ್ಲ. ಇನ್ನು ಬಜೆಟ್‌ನಲ್ಲಿ ಏನು ಉತ್ತರ ಕೊಡುತ್ತಾರೆ. ಬಿಪಿಎಲ್ ಕಾರ್ಡ್ ವಿಚಾರವಾಗಿ ಆಹಾರ ಸಚಿವ ತೆಗೆದುಕೊಂಡ ನಿರ್ಧಾರದಿಂದಲೇ ಅವರ ಮನಸ್ಥಿತಿಯನ್ನು ಏನು ಎಂಬುದು ತೋರಿಸುತ್ತದೆ ಎಂದು ಕತ್ತಿ ವಿರುದ್ದವು ಅಸಮಾಧಾನ ವ್ಯಕ್ತಪಡಿಸಿದರು. 

ಕೊರೋನಾ ಎರಡನೇ ಅಲೆ ಗಂಭೀರವಾಗಿ ಪರಿಗಣಿಸಿ

ಇನ್ನು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ  ಸೃಷ್ಟಿಯಾಗಿದ್ದು.  ಸರ್ಕಾರ ಹಾಗೂ ಸಚಿವರು ಭ್ರಷ್ಟಾಚಾರ ಮಾಡಲು ಕಾಯುತ್ತಿರುವಂತಿದೆ. ಭ್ರಷ್ಟಾಚಾರವೇ ಇವರ ಕೆಲಸ. ಎಲ್ಲಿ ಕೆಲಸ ಇದೆಯೋ ಅಲ್ಲಿ ದುಡ್ಡು ಹೊಡೆಯುತ್ತಾರೆ. ಕೊರೋನಾ ಮೊದಲ ಅಲೆಯಲ್ಲೂ ಭ್ರಷ್ಟಾಚಾರ ನಡೆಸಿದರು. ಇದನ್ನು ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ ಈಗಲೂ ಅದೇ ನಡೆಯುತ್ತದೆ. ಈ ಸರ್ಕಾರ ಯಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎರಡನೇ ಅಲೆ ವಿಚಾರವನ್ನಾದರೂ ಗಂಭೀರವಾಗಿ ಪರಿಗಣಿಸಬೇಕು. ಆ ಎರಡನೇ ಅಲೆ ಕೇರಳದಿಂದಾದರೂ ಬರಲಿ, ಆಫ್ರಿಕಾದಿಂದಲೇ ಬರಲಿ. ಅಗತ್ಯ ಮುಂಜಾಗ್ರತೆ ವಹಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿಗೆ ಹಸಿರುವ ನಿಶಾನೆಮೈಸೂರು ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ವಿಚಾರವಾಗಿ, ಜೆಡಿಎಸ್ ತಾನಾಗಿ ಬಂದು ಮೈತ್ರಿ ಮಾಡಿಕೊಂಡರೆ ನನ್ನ ವಿರೋಧ ಇಲ್ಲ ಎನ್ನುವ ಮೂಲಕ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿಗೆ ಹಸಿರುವ ನಿಶಾನೆ ತೋರಿದರು. ಹಳೆಯ ಒಪ್ಪಂದದಂತೆ ನಮಗೆ ಮೇಯರ್ ಸ್ಥಾನ ಅವರು ನೀಡಬೇಕು. ಅದನ್ನ ಕೊಟ್ಟರೆ ಮೈತ್ರಿ ಮುಂದುವರಿಸಲು ಹೇಳಿದ್ದೇನೆ. ಎಲ್ಲರಿಗೂ ಒಗ್ಗಟ್ಟಾಗಿರಿ ಜಗಳ ಮಾಡಿಕೊಳ್ಳಬೇಡಿ ಎಂದು ಹೇಳಿದ್ದೇನೆ ಎನ್ನುವ  ಮೂಲಕ ಮೈಸೂರು ಪಾಲಿಕೆ ಮೇಯರ್ ಚುನಾವಣೆ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚು ಮಾಡಿದರು.
Published by: Seema R
First published: February 20, 2021, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories