HOME » NEWS » State » SIDDARAMAIAH SAYS THIS IS A FIGHT BETWEEN CONSTITUTION AND MANUSMRITI SRHB SNVS

ಇದು ಸಂವಿಧಾನ ಮತ್ತು ಮನುಸ್ಮೃತಿ ನಡುವಿನ ಯುದ್ಧ: ಸಿದ್ದರಾಮಯ್ಯ

ನನ್ನ ಜನ್ಮ ದಿನಾಂಕದ ದಾಖಲೆಯೇ ಇಲ್ಲ. ಶಾಲೆಯ ಮಾಸ್ತರು ಬರೆದುಕೊಂಡಿದ್ದೇ ಜನ್ಮದಿನಾಂಕ. ಇವರ ಪ್ರಕಾರ ನಾನು ಅನುಮಾನಾಸ್ಪದ ನಾಗರಿಕ. ನನ್ನನ್ನು ಜೈಲಿಗೆ ಹಾಕುತ್ತಾರಾ? ನನ್ನ ವೋಟು ಕಿತ್ತುಕೊಳ್ಳುತ್ತಾರಾ? ಎಂದು ಸಿದ್ದರಾಮಯ್ಯ ಎನ್​ಆರ್​ಸಿ ಯೋಜನೆಯ ಪ್ರಾಯೋಗಿಕ ಸಮಸ್ಯೆಯನ್ನು ಪ್ರಶ್ನಿಸಿದರು.

news18
Updated:February 27, 2020, 3:34 PM IST
ಇದು ಸಂವಿಧಾನ ಮತ್ತು ಮನುಸ್ಮೃತಿ ನಡುವಿನ ಯುದ್ಧ: ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: February 27, 2020, 3:34 PM IST
  • Share this:
ಬೆಂಗಳೂರು(ಫೆ. 27): ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿನಾಶಕಾರಿಗಳಾಗಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಅನ್ನೋ ಗಾದೆ ಇವರಿಗೆ ಅನ್ವಯಿಸುತ್ತೆ. ಪ್ರಜಾಪ್ರಭುತ್ವ ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಇಲ್ಲಿಯ ಕಾಸಿಯಾ ಭವನದಲ್ಲಿ ಸಂವಿಧಾನ ಮತ್ತು ಪೌರತ್ವ ಕಾಯ್ದೆ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ದೆಹಲಿಯ ಹಿಂಸಾಚಾರ ಘಟನೆಗಳ ಬಗ್ಗೆ ಅತೀವ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಅತ್ಯಂತ ಕೆಟ್ಟವರ ಕೈಯಲ್ಲಿ ಅಧಿಕಾರ ಸಿಕ್ಕಿದೆ. ಮನುಷ್ಯತ್ವ ಇಲ್ಲದವರು ಆಡಳಿತ ನಡೆಸುತ್ತಿದ್ದಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ. ದೆಹಲಿಯಲ್ಲಿ ಸಾಕಷ್ಟು ಮಂದಿ ಸತ್ತಿದ್ದಾರೆ. ಬಿಜೆಪಿಯವರೇ ದೆಹಲಿ ವಿವಿ ಒಳಗೆ ನುಗ್ಗಿ ಹೊಡೆದರೂ ಕೇಸ್ ದಾಖಲಾಗಿಲ್ಲ. ಆರೆಸ್ಸೆಸ್​ನವರೇ ಪೊಲೀಸ್ ಬಟ್ಟೆ ಧರಿಸಿ ಹೊಡೆದರೂ ಕೇಸ್ ಹಾಕಲಿಲ್ಲ. ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕೇಸ್ ಹಾಕಿದ್ರಾ ಅಂತ ಕೇಳಿದ ನ್ಯಾಯಾಧೀಶರನ್ನೇ ವರ್ಗಾವಣೆ ಮಾಡಿದ್ದಾರೆ. ಇವರು ಅತ್ಯಂತ ಕ್ರೂರಿಗಳು ಹಾಗೂ ಸಂವಿಧಾನ ವಿರೋಧಿಗಳಾಗಿದ್ದಾರೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ಪಡೆಯುತ್ತಿದ್ದಾರೆ, ದೆಹಲಿ ಗಲಭೆಗೆ ಅವರೇ ಹೊಣೆ; ಹೆಚ್​ಡಿಕೆ

ದೇಶ ಗೊಂದಲದಲ್ಲಿದೆ. ಅಧಿಕಾರದಲ್ಲಿರುವವರು ಸಂವಿಧಾನ ಮುಗಿಸಲು ಹೊರಟಿದ್ದಾರೆ. ಮನು ಸಂಸ್ಕೃತಿ ಜಾರಿಗೆ ತರುವ ಪ್ರಯತ್ನವಾಗುತ್ತಿದೆ. ಇಂದು ಸಂವಿಧಾನ ಮತ್ತು ಮನುಸ್ಮೃತಿ ನಡುವೆ ಯುದ್ಧ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿ ನಿಂತು ಜನರ ಬಳಿ ಹೋಗಬೇಕು. ನಾವು ಶಾಂತಿಯುತವಾಗಿ ವಿರೋಧಿಸುವ ಅವಕಾಶ ಇದೆ ಎಂದು ವಿಪಕ್ಷ ನಾಯಕರು ಕರೆ ನೀಡಿದರು.

ಸಿಎಎ, ಎನ್​ಆರ್​ಸಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಅಸ್ಸಾಮ್​ನ ಉದಾಹರಣೆ ನೀಡಿ ಆ ಕಾನೂನನ್ನು ಅಲ್ಲಗಳೆದರು. “ಅಸ್ಸಾಮ್​ನಲ್ಲಿ 3 ಕೋಟಿ ಜನಸಂಖ್ಯೆ ಇದೆ. 19 ಸಾವಿರ ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿದ್ದಾರೆ. ದೇಶದ ಎಲ್ಲಾ ಕಡೆ ಸರ್ವೆ ಮಾಡಲು 80 ಸಾವಿರದಿಂದ 1 ಲಕ್ಷ ಕೋಟಿ ರೂ ಖರ್ಚಾಗಲಿದೆ. ಅಸ್ಸಾಮ್​ನಲ್ಲಿ 19 ಲಕ್ಷ ಮಂದಿಯನ್ನು ಅನುಮಾನಾಸ್ಪದ ನಾಗರಿಕರೆಂದು ಬಗೆದರು. ಇವರಲ್ಲಿ ಹಿಂದೂಗಳೇ ಹೆಚ್ಚಿದ್ದಾರೆ. ದೇಶದ ಎಲ್ಲಾ ಕಡೆ ಇದನ್ನು ನಡೆಸುವ ಅಗತ್ಯ ಇದೆಯಾ? 10 ರಾಜ್ಯಗಳು ಈ ಕಾಯ್ದೆಯನ್ನು ವಿರೋಧಿಸಿವೆ. ನಾವೆಲ್ಲರೂ ಇದನ್ನು ಖಂಡಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: ದೊರೆಸ್ವಾಮಿಯವರು ಪಕ್ಷಾತೀತರಾಗಿ ನಡೆದುಕೊಳ್ಳಬೇಕು; ಯತ್ನಾಳ್​ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

ನನ್ನ ಜನ್ಮ ದಿನಾಂಕದ ದಾಖಲೆಯೇ ಇಲ್ಲ. ಶಾಲೆಯ ಮಾಸ್ತರು ಬರೆದುಕೊಂಡಿದ್ದೇ ಜನ್ಮದಿನಾಂಕ. ಇವರ ಪ್ರಕಾರ ನಾನು ಅನುಮಾನಾಸ್ಪದ ನಾಗರಿಕ. ನನ್ನನ್ನು ಜೈಲಿಗೆ ಹಾಕುತ್ತಾರಾ? ನನ್ನ ವೋಟು ಕಿತ್ತುಕೊಳ್ಳುತ್ತಾರಾ? ಎಂದು ಸಿದ್ದರಾಮಯ್ಯ ಎನ್​ಆರ್​ಸಿ ಯೋಜನೆಯ ಪ್ರಾಯೋಗಿಕ ಸಮಸ್ಯೆಯನ್ನು ಪ್ರಶ್ನಿಸಿದರು.ಕಾಸಿಯಾ ಭವನದಲ್ಲಿ ಸಂವಿಧಾನ ಮತ್ತು ಪೌರತ್ವ ಬಗ್ಗೆ ನಡೆದ ಈ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕಾಂಗ್ರೆಸ್ ಮಹಿಳಾ ಘಟಕ ಆಯೋಜನೆ ಮಾಡಿತ್ತು. ಸಿದ್ದರಾಮಯ್ಯ ಜೊತೆ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ಮತ್ತು ಎಲ್. ಹನುಮಂತಯ್ಯ, ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರಗತಿಪರ ಚಿಂತಕ ಶಿವಸುಂದರ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ  ಮೊದಲಾದವರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 27, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories