Siddaramaiah: ತಪ್ಪಿತಸ್ಥ ಭಾವನೆಯಿಂದ ಸುಧಾಕರ್​ ಹೇಳಿಕೆ ನೀಡಿದ್ದಾರೆ; ಸಿದ್ದರಾಮಯ್ಯ

ಸಚಿವರಾಗಿ ಬೇಜವಾಬ್ದಾರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅದು ಸದನ ನಡೆಯುವಾಗ ಸುಧಾಕರ್ ಈ ರೀತಿ ಮಾತನಾಡಿರುವುದರಿಂದ ಇದು ಸದನದ ಹಕ್ಕುಚ್ಯುತಿ ಮಾಡಿದಂತೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಹಿಂದೂ ಸಂಪ್ರದಾಯದಲ್ಲಿ ಒಬ್ಬರನ್ನೇ ಮದುವೆಯಾಗುವುದು. ಎಲ್ಲರೂ ಏಕಪತ್ನಿವ್ರತಸ್ಥರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸುಧಾಕರ್​ ಹೇಳಿಕೆಗೆ ತಿರುಗೇಟು ನೀಡಿದರು. ಸುಧಾಕರ್ ತಪ್ಪಿತಸ್ಥ ಭಾವನೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಮಾತು ಸಿಎಂ ಅನ್ವಯಿಸುತ್ತದೆ. ಈ ಹಿನ್ನಲೆ ಸಚಿವರ ಹೇಳಿಕೆ ಬಗ್ಗೆ ತನಿಖೆಯಾಗಬೇಕು.​ ಸಚಿವರಾಗಿ ಬೇಜವಾಬ್ದಾರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅದು ಸದನ ನಡೆಯುವಾಗ ಸುಧಾಕರ್ ಈ ರೀತಿ ಮಾತನಾಡಿರುವುದರಿಂದ ಇದು ಸದನದ ಹಕ್ಕುಚ್ಯುತಿ ಮಾಡಿದಂತೆ. ನನ್ನ, ರಮೇಶ್​ಕುಮಾರ್ ಹೆಸರು ಹೇಳಿದ್ದಾರೆ. 224 ಶಾಸಕರು ಎಂದರೆ ಹೆಣ್ಮಕ್ಕಳ ಬಗ್ಗೆಯೂ ಸುಧಾಕರ್ ಮಾತುಗಳನ್ನಾಡಿದ್ದಾರೆ ಎಂದು ಟೀಕಿಸಿದರು.

  ಮಾನ ಮರ್ಯಾದೆ ಎಲ್ಲಕ್ಕಿಂತ ದೊಡ್ಡದು. ನ್ಯಾಯಾಲಯದ ಮೊರೆ ಹೋದ ಸಚಿವರ ಬಗ್ಗೆ ತನಿಖೆ ನಡೆಯಬೇಕು. ಯಾಕಾಗಿ ಅವರ ಹೋದರು ಎಂಬುದು ಹೊರಬರಬೇಕು. ಸುಧಾಕರ್ ಹೇಳಿಕೆ ಬಗ್ಗೆಯೂ ತನಿಖೆಯಾಗಲಿ. ಸುಧಾಕರ್ ಹೇಳಿಕೆ ಪ್ರಶ್ನಿಸಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ಕಾನೂನು ಹೋರಾಟ ಮಾಡುತ್ತೇವೆ. ಸಿಎಂ ಹಾಗೂ ಸ್ಪೀಕರ್​ಗೂ ಪತ್ರ ಕೊಡುತ್ತೇವೆ. ಸಚಿವರ ಈ ಹೇಳಿಕೆಯಿಂದ ಜನರಲ್ಲಿ ಎಲ್ಲರ ಬಗ್ಗೆ ಈಗ ಸಂಶಯ ಬಂದಿದೆ. ಹೀಗಾಗಿ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ನಿಗಾ ದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

  ಬಜೆಟ್​​ ಮೇಲಿನ ಸಿಎಂ ಉತ್ತರ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕರು, ನಿಮ್ಮದ್ದು ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ. ಪ್ರತಿ ಇಲಾಖೆ ಸೇರಿ 6 ಸೆಕ್ಟಾರ್ ಮಾಡಿಕೊಂಡಿದ್ದಾರೆ. ಎಷ್ಟು ಖರ್ಚು ಆಯ್ತು ಎನ್ನುವ ಮಾಹಿತಿ ಇಲ್ಲ . ರೆವಿನ್ಯೂ ಸರ್ಪ್ಲೆಸ್ ಗೆ ಹೋಗಿದೆ. ಜೂನ್ 2022ಕ್ಕೆ ರಿಂದ ಜಿಎಸ್ ಟಿ ಕಾಂಪಾನ್ಸೆಷನ್ ನಿಲ್ಲುತ್ತದೆ. ನಮ್ಮ ಪಾಲು ಕಡಿಮೆ ಮಾಡಿದರು. ನಮ್ಮ ಅನುದಾನ ಕಡಿಮೆ ಮಾಡಿದರು. ಇವರ ಕೈನಲ್ಲಿ ರಾಜ್ಯ ಸರ್ಕಾರ ಇದ್ದರೆ ಸುರಕ್ಷಿತವಾಗಿ ಇರುತ್ತದೆ. ದಿವಾಳಿಯತ್ತ ರಾಜ್ಯ ಸರ್ಕಾರ ಹೋಗುತ್ತಲ್ಲ ಇವರ ಕೈನಲ್ಲಿ ನಿಯಂತ್ರಣ ಮಾಡುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.

  ತುಪ್ಪ ತಿನ್ನಲು ನಾವು ಸಾಲ ಮಾಡಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನೀವು ತಪ್ಪನಾದರೂ ತಿನ್ನಿ , ಬೆಣ್ಣೆನಾದರೂ ತಿನ್ನಿ , ಮಜ್ಜಿಗೆನಾದರೂ ಕುಡಿರಿ. ಸಾಲ ಸಿಗುತ್ತದೆ ಎಂದು ಸಾಕ ಮಾಡುವುದಲ್ಲ. ಸಾಲ ತೀರಿಸುವುದಕ್ಕೆ ನಮಗೆ ಶಕ್ತಿ ಇದೆಯಾ ಎಂದು ನೋಡಿಕೊಳ್ಳಬೇಕು. ಯಡಿಯೂರಪ್ಪ ಅವರ ಮನೆಗೆ ಖರ್ಚು ಮಾಡಿದರು ಎಂದು ನಾನು ಹೇಳುತ್ತಿಲ್ಲ. ಸಾಲ ಮಾಡಿ ವೇತನ ಯಾವತ್ತಾದ್ರು ಕೊಟ್ಟಿದರಾ ಮಿಸ್ಟರ್ ಯಡಿಯೂರಪ್ಪ ಎಂದು ಕೇಳಿದರು
  Published by:Seema R
  First published: