HOME » NEWS » State » SIDDARAMAIAH SAYS PRESENT DAY POLITICS HAS STOOPED TOO LOW SNVS

ಪಕ್ಷದ್ರೋಹಿಗಳ ಮೇಲೆ ಸಿಂಪಥಿ ಬರುತ್ತಾ? ಹೇಸಿಗೆ ಪಡುವ ಮಟ್ಟಕ್ಕೆ ರಾಜಕಾರಣ ಬಂದಿದೆ – ಸಿದ್ದರಾಮಯ್ಯ

ಜನರು ಹೇಸಿಗೆ ಪಡುವಷ್ಟರ ಮಟ್ಟಕ್ಕೆ ರಾಜಕಾರಣ ಕುಸಿದಿದೆ ಎಂದು ಹೇಳಿರುವ ಸಿದ್ದರಾಮಯ್ಯ, ಸಿಡಿ ಪ್ರಕರಣದ ಬಗ್ಗೆ ಆಡಳಿತ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

news18-kannada
Updated:March 6, 2021, 1:43 PM IST
ಪಕ್ಷದ್ರೋಹಿಗಳ ಮೇಲೆ ಸಿಂಪಥಿ ಬರುತ್ತಾ? ಹೇಸಿಗೆ ಪಡುವ ಮಟ್ಟಕ್ಕೆ ರಾಜಕಾರಣ ಬಂದಿದೆ – ಸಿದ್ದರಾಮಯ್ಯ
ಸಿದ್ದರಾಮಯ್ಯ.
  • Share this:
ಬೆಂಗಳೂರು(ಮಾ. 06): ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿಹಾಕದಂತೆ ಮಾಧ್ಯಮಗಳನ್ನ ನಿರ್ಬಂಧಿಸಬೇಕೆಂದು ಕೋರಿ ಆರು ಶಾಸಕರು ಕೋರ್ಟ್ ಮೊರೆಹೋಗುತ್ತಿರುವ ಬೆಳವಣಿಗೆ ಬಗ್ಗೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದರು. ಮೈತ್ರಿ ಸರ್ಕಾರವನ್ನು ಬೀಳಿಸಿ ಹೋದವರ ಮೇಲೆ ಮತ್ತು ಪಕ್ಷ ದ್ರೋಹ ಮಾಡಿದವರ ಮೇಲೆ ಅನುಕಂಪ ಬರಲು ಸಾಧ್ಯವಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಆರು ಮಂದಿ ಕೋರ್ಟ್ ಮೆಟ್ಟಿಲು ಹತ್ತುತ್ತಿದ್ದಾರೆ ಎಂದರೆ ಅವರಿಗೆ ತಮ್ಮ ವಿರುದ್ಧ ಸಿಡಿ ಇದೆ ಎಂಬುದು ಗೊತ್ತಿರಬೇಕಲ್ಲವಾ ಎಂದು ಕೇಳಿದ ಸಿದ್ದರಾಮಯ್ಯ, ಈ ವಿಚಾರದಲ್ಲಿ ಸರಿಯಾಗಿ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ರಾಜಕಾರಣದಲ್ಲಿ ಒಟ್ಟಾರೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜನರು ಹೇಸಿಗೆ ಪಡುವಂಥ ಸ್ಥಿತಿಗೆ ರಾಜಕಾರಣ ಬಂದಿದೆ. ಯಾರೋ ಮಾಡುವ ತಪ್ಪಿಗೆ ಎಲ್ಲಾ ರಾಜಕಾರಣಿಗಳನ್ನ ಅನುಮಾನದಿಂದ ನೋಡುವಂತಾಗಿದೆ. ರಾಜಕಾರಣಿಗಳೆಂದರೆ ಹೀಗೆಯೇ ಎಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಪಕ್ಷ ನಾಯಕರೂ ಆದ ಸಿದ್ದರಾಮಯ್ಯ ವಿಷಾದಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಕೈ ಕಾರ್ಯಕರ್ತರ ಅಮಾನತು; ಪಕ್ಷದಲ್ಲಿ ಏಕಾಂಗಿಯಾದರಾ ತನ್ವೀರ್ ಸೇಠ್?

ಈ ಸರ್ಕಾರದಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಹೊಸ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ. ಇರುವ ಯೋಜನೆಗಳನ್ನ ಉಳಿಸಿಕೊಳ್ಳಲೂ ಇವರಲ್ಲಿ ಹಣ ಇಲ್ಲ. ಹಣಕಾಸು ಪರಿಸ್ಥಿತಿ ಬಹಳಷ್ಟು ಕೆಟ್ಟುಹೋಗಿದೆ. ಜನಪರ ಬಜೆಟ್ ಕೊಡಲು ಇವರಿಂದ ಸಾಧ್ಯ ಆಗಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಯಾವ ಅಂಶಗಳೂ ಕಾರ್ಯಗತವಾಗಿಲ್ಲ. ಸಾಲ ಮನ್ನಾ ಮಾಡುತ್ತೇವೆ ಅಂದರು. ಅದನ್ನೂ ಮಾಡಲಿಲ್ಲ. ಐದು ಸಾವಿರ ಕೋಟಿ ರೂ ಆವರ್ತ ನಿಧಿ ಇಡುತ್ತೇವೆ ಎಂದರು. ಅದನ್ನ ಕೊಟ್ಟರಾ? ಮಾತಿನಲ್ಲಿ ಹೇಳಲು ಚೆನ್ನಾಗಿರುತ್ತೆ, ಆದರೆ ಜಾರಿಯಾಗಲ್ಲ. ಯಡಿಯೂರಪ್ಪ ಅವರ ಮಾತುಗಳನ್ನ ನಂಬಿಕೊಳ್ಳಲು ಆಗುವುದಿಲ್ಲ. ಸುಳ್ಳು ಯಡಿಯೂರಪ್ಪ ಅವರ ಮನೆ ದೇವರು ಎಂದು ಸಿದ್ದರಾಮಯ್ಯ ಮೂದಲಿಸಿದರು.

ಸೋಮವಾರ ಬಜೆಟ್ ಮಂಡನೆ ಇರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈ ಪ್ರತಿಕ್ರಿಯೆ ನೀಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಬಗ್ಗೆ ಹೆಚ್ಚಿನ ಜನರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂಬುದು ವಾಸ್ತವ.

ಮಾಹಿತಿ ಕೃಪೆ: ದಶರಥ್
Published by: Vijayasarthy SN
First published: March 6, 2021, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories