HOME » NEWS » State » SIDDARAMAIAH SAYS PM MODI WHO DOESNT KNOW THE CONSTITUTION IS UNFIT TO CONTINUE AS PM MAK

ಸಂವಿಧಾನದ ಬಗ್ಗೆ ಬದ್ಧತೆ ಇಲ್ಲದ ಮೋದಿ ಪ್ರಧಾನಿಯಾಗಿ ಮುಂದುವರೆಯಲು ನಾಲಾಯಕ್; ಸಿದ್ದರಾಮಯ್ಯ ಕಿಡಿ

ಇಂಧನ ಬೆಲೆ, ಗ್ಯಾಸ್ ಬೆಲೆಯನ್ನು ಜಾಸ್ತಿ ಮಾಡುವ ಮೂಲಕ ಪ್ರಧಾನಿ ಮೋದಿ ಜನರ ಸಂಕಷ್ಟದ ಮೇಲೆ ಮತ್ತೆ ಬರೆ ಎಳೆದರು. ವರ್ಷವಿಡೀ ವಿದೇಶ ಪ್ರವಾಸ ಮಾಡಿ ನೆರೆ ರಾಷ್ಟ್ರಗಳ ಜೊತೆಗೆ ವೈಷಮ್ಯ ಹೆಚ್ಚಿಸಿಕೊಂಡರು. ಕೇವಲ ಸುಳ್ಳು ಭರವಸೆಗಳಲ್ಲೇ ಕಾಲ ಕಳೆದರು. ಅಸಲಿಗೆ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಭಾರತ ದೇಶ ಈವರೆಗೆ ಕಂಡಿಲ್ಲ ಎಂದು ಸಿದ್ದರಾಮಯ್ಯ ಕುಹಕವಾಡಿದ್ದಾರೆ.

news18-kannada
Updated:July 2, 2020, 3:38 PM IST
ಸಂವಿಧಾನದ ಬಗ್ಗೆ ಬದ್ಧತೆ ಇಲ್ಲದ ಮೋದಿ ಪ್ರಧಾನಿಯಾಗಿ ಮುಂದುವರೆಯಲು ನಾಲಾಯಕ್; ಸಿದ್ದರಾಮಯ್ಯ ಕಿಡಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
  • Share this:
ಬೆಂಗಳೂರು (ಜುಲೈ 02); ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ, ರೋಗದಲ್ಲೂ ತಬ್ಲಿಘಿ ಎಂದು ಸಮಾಜದಲ್ಲಿ ವಿಷ ಬೀಜ ಬಿತ್ತುವ, ದೇಶದ ಸಂವಿಧಾನದ ಬಗ್ಗೆ ಬದ್ಧತೆ ಇಲ್ಲದ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯಲು ನಾಲಾಯಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ಬಿಜೆಪಿ ಪಕ್ಷವನ್ನು ಆರ್‌ಎಸ್‌ಎಸ್‌ ಬ್ಯಾಕ್‌ಡ್ರೈವ್ ಮಾಡುವವರೆಗೆ ದೇಶದಲ್ಲಿ ಬಡವರು, ದಲಿತರು ಮತ್ತು ಅನ್ಯಕೋಮಿನವರ ಬದುಕು ಕಷ್ಟವಾಗಲಿದೆ. ಧರ್ಮವನ್ನು ಎತ್ತಿಕಟ್ಟಿ ಅದರ ಮೂಲಕ ರಾಜಕಾರಣ ಮಾಡುವುದೇ ಇವರ ಗುರಿ.

ಇನ್ನೂ ಪ್ರಧಾನಿಯಾಗಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ ಕಾರ್ಯಕ್ರಮಗಳನ್ನಷ್ಟೇ ಜಾರಿ ಮಾಡುತ್ತಿದ್ದಾರೆ. ಕೊರೋನಾ ಹರಡದಂತೆ ತಡೆಯುವಲ್ಲಿ ಮೋದಿ ವಿಫಲರಾಗಿದ್ದಾರೆ. ಲಾಕ್‌ಡೌನ್ ಮಾಡಿದ್ದಾಗ ಬಡ ಜನರು ಪರದಾಡಿದ್ದರು. ಈಗ ಮಾಡಬೇಕಾದ ಲಾಕ್‌ಡೌನ್ ಅನ್ನು ಯಾವುದೇ ಪೂರ್ವ ಯೋಜನೆ ಇಲ್ಲದೇ ಮೊದಲೇ ಮಾಡಿದ್ದರು. ಅಲ್ಲದೆ, ಏಪ್ರಿಲ್ 14 ವರೆಗೆ ಮೋದಿ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಿರಲಿಲ್ಲ.

ಬದಲಾಗಿ ಇಂಧನ ಬೆಲೆ, ಗ್ಯಾಸ್ ಬೆಲೆಯನ್ನು ಜಾಸ್ತಿ ಮಾಡುವ ಮೂಲಕ ಜನರ ಸಂಕಷ್ಟದ ಮೇಲೆ ಮತ್ತೆ ಬರೆ ಎಳೆದರು. ವರ್ಷವಿಡೀ ವಿದೇಶ ಪ್ರವಾಸ ಮಾಡಿ ನೆರೆ ರಾಷ್ಟ್ರಗಳ ಜೊತೆಗೆ ವೈಷಮ್ಯ ಹೆಚ್ಚಿಸಿಕೊಂಡರು. ಕೇವಲ ಸುಳ್ಳು ಭರವಸೆಗಳಲ್ಲೇ ಕಾಲ ಕಳೆದರು. ಅಸಲಿಗೆ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಭಾರತ ದೇಶ ಈವರೆಗೆ ಕಂಡಿಲ್ಲ.

ಈ ನಡುವೆ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ ಇದಕ್ಕೆ ತಬ್ಲಿಘಿಗಳೇ ಕಾರಣ ಎಂದು ಬಿಂಬಿಸಲಾಗಿತ್ತು. ಅಮೆರಿಕ , ಪ್ರಾನ್ಸ್ ಗಳಲ್ಲಿ ಯಾವ ತಬ್ಲಿಘಿಗಳು ಇದ್ದಾರೆ? ಹೀಗಾಗಿ ಸಂವಿಧಾನಕ್ಕೆ ವಿರೋಧವಾಗಿ ಸಮಾಜದಲ್ಲಿ ಧರ್ಮದ ವಿಷಬೀಜ ಬಿತ್ತುವ ಮೋದಿ ಪ್ರಧಾನಿಯಾಗಲು ನಾಲಾಯಕ್” ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಕಿಡಿಕಾರಿರುವ ಅವರು, “ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಜನ ಆಶೀರ್ವಾದ ಮಾಡಿರಲಿಲ್ಲ. ಹೀಗಾಗಿ ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಂದಿನ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನಬದ್ಧ ಆದೇಶ ಮಾಡಿದ್ದರೂ ಸಹ ಅದಕ್ಕೂ ಬಿಎಸ್‌ವೈ ಅಪಚಾರ ಮಾಡಿದ್ದರು.

ಇದನ್ನೂ ಓದಿ : ಜೆಡಿಎಸ್‌ ಜೊತೆಗೆ ನಾವು ಮೈತ್ರಿ ಮಾಡಿಕೊಳ್ಳಬಾರದಿತ್ತು, ಜನರಿಗೆ ಈ ದೋಸ್ತಿ ಇಷ್ಟವಾಗಿಲ್ಲ; ದಿನೇಶ್‌ ಗುಂಡೂರಾವ್


ಹೀಗಾಗಿ ದೇಶವನ್ನ ಉಳಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವೀಕರಿಸುವ ಬಿಜೆಪಿ ಇರುವವರೆಗೆ ದೇಶಕ್ಕೆ ಭವಿಷ್ಯವಿಲ್ಲ. ದೇಶದಲ್ಲಿ ಸಾಮರಸ್ಯ, ಐಕ್ಯತೆ ಬರಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಒಟ್ಟಾಗಿ ಪಕ್ಷವನ್ನು ಸಂಘಟಿಸಬೇಕಿದೆ. ಬಿಜೆಪಿಯನ್ನು ರಾಷ್ಟ್ರದಿಂದಲೇ ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಕೂರಿಸಬೇಕಿದೆ” ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
First published: July 2, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories