Karnataka ByPolls : ಶ್ರೀರಾಮುಲು ನನ್ನ ಜೊತೆ ಮಾತೇ ಆಡುವುದಿಲ್ಲ; ಸಿದ್ದರಾಮಯ್ಯ ದೂರು

ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆಗೆ ಕೇಳಿದ ಕಾರ್ಯಕರ್ತನಿಗೆ ಉತ್ತರಿಸಿದ ಅವರು, ನನ್ನ ವಿರುದ್ಧ ನಿಂತಿದಲ್ಲ ಯಾವನವನು ಶ್ರೀರಾಮುಲು. ಅವನೇ  ಆರೋಗ್ಯ ಮಂತ್ರಿ ಇದ್ದಾರೆ. ಅವರಿಗೆ  ಹೇಳಿದರೆ ಕೇಳುವಲ್ಲ ಅವನು. ಅವನಿಗೆ ಇನ್ನೊಂದು ಸಾರಿ ಹೇಳುತ್ತೇನೆ. ನನ್ನ ಜೊತೆ ಅವನು ಮಾತೇ ಆಡೋಲ್ಲ.

Seema.R | news18-kannada
Updated:December 5, 2019, 3:28 PM IST
Karnataka ByPolls : ಶ್ರೀರಾಮುಲು ನನ್ನ ಜೊತೆ ಮಾತೇ ಆಡುವುದಿಲ್ಲ; ಸಿದ್ದರಾಮಯ್ಯ ದೂರು
ಸಚಿವ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ
  • Share this:
ಬಾಗಲಕೋಟೆ (ಡಿ.5): ಜನರ ಸಮಸ್ಯೆಗಳನ್ನು ಕೇಳದೇ ಬಿಜೆಪಿಯವರು ಸುಮ್ಮನೆ ನಾವು ಅದು ಮಾಡುತ್ತೇವೆ. ಇದು ಮಾಡುತ್ತೇವೆ ಎಂದು ಬುರುಡೆ ಹೊಡೆಯುತ್ತಾರೆ. ಏನು ಮಾಡುವುದಿಲ್ಲ. ಜನ ಅದು ಯಾವ ಕಾರಣಕ್ಕೆ ಅವರಿಗೆ ಮತ ಹಾಕುತ್ತಾರೋ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. 

ಕೆರೂರು ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಹಾಲು, ಶೂ, ವಿದ್ಯಾಸಿರಿ, ಅನ್ನಭಾಗ್ಯ ಕೊಟ್ಟೆವು.  ಆದರೆ, ಹಿಂಬಾಗಿಲಿನಿಂದ ಬಂದು ಕುಳಿತುಕೊಂಡು ಬಿಟ್ಟರು. ನಾವು ಇನ್ನು ಅಧಿಕಾರದಲ್ಲಿ ಮುಂದುವರೆದಿದ್ದರೆ, ಮಧ್ಯಾಹ್ನದ ಊಟಕ್ಕೆ ಮಕ್ಕಳಿಗೆ ಮೊಟ್ಟೆಯನ್ನು ಕೊಡುತ್ತಿದ್ದೇವು ಎಂದರು.

ಶಾಲಾ ಮಕ್ಕಳಿಗಾಗಿ ತಾವು ಯಾವ ಕಾರ್ಯಗಳನ್ನು ಜಾರಿಗೆ ತಂದೆವು ಎಂದು  ಬಿಇಓ ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ. ಇವನ್ನೆಲ್ಲಾ ಮತ್ತೆ ನೆನಪಿಸಿದರು. ಜೊತೆಗೆ ಎಸ್​ಸಿ/ಎಸ್​ಟಿ ಮಕ್ಕಳಿಗೆ ಫ್ರೀ ಬಸ್ ಪಾಸ್ ಘೋಷಿಸಿದ್ದೆ. ಇವೆಲ್ಲವೂ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದೇವು. ದುರಾದೃಷ್ಟವಶಾತ್ ನಾವು ಸೋತು ಬಿಟ್ಟೆವು.

 

 

ನಮ್ಮ ಜನ ಜನ ಬುದ್ಧಿವಂತರಾಗ ಬೇಕಷ್ಟೆ. ನಾನು ಎಷ್ಟೊಂದು ಕೆಲಸ ಮಾಡಿದೆ.  ಮತ್ತೆ ಅಧಿಕಾರಕ್ಕೆ ಬಂದಿದ್ದರೆ, ಬಾದಾಮಿಯನ್ನು ಅಭಿವೃದ್ಧಿ ಮಾಡುತ್ತಿದ್ದೆ ಎಂದು ನೋವಿನಿಂದ ಹೇಳಿದರು.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಯೋಜನೆ , ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆ ಮೈತ್ರಿ ಸರ್ಕಾರದಲ್ಲಿ ಪ್ರಸ್ತಾಪಿಸಿದೇವು. ಆದರೆ ಪುಣ್ಯಾತ್ಮ ಕುಮಾರಸ್ವಾಮಿ ಜಾರಿ ಮಾಡಲಿಲ್ಲ. ಹೊಟ್ಟೆ ತುಂಬಿದವರ ಕೈಯಿಂದ ಮಾಡೋಕಾಗುತ್ತಾ? ಹಸಿವು ಮುಕ್ತ ಆಗ್ಬೇಕು ಅಂತ ಅನ್ನ, ಹಾಲು, ನೀಡಿದೇವು.  7 ಕೆಜಿ ಅಕ್ಕಿ ಉಚಿತ, ಇಂದಿರಾ ಕ್ಯಾಂಟೀನ್ ಜಾರಿ ತಂದೆವು ಎಂದರು.ಇದನ್ನು ಓದಿ: Karnataka ByPolls: ಹಿಂಬಾಗಿಲಿನಿಂದ ಸರ್ಕಾರ ರಚಿಸಿರುವ ಯಡಿಯೂರಪ್ಪಗೆ ಯಾವಾಗಲೂ ಜನ ಆಶೀರ್ವಾದಿಸಿಲ್ಲ; ಸಿದ್ದರಾಮಯ್ಯ

 

ಕೆರೂರಿಗೆ ಸರ್ಕಾರಿ ಪಿಯುಸಿ ಕಾಲೇಜು ಬೇಕಂತಿದ್ದಾರೆ. ನಮ್ಮ ಸರ್ಕಾರ ಇದ್ದಿದ್ದರೆ ಇಲ್ಲೆ ಆದೇಶ ಮಾಡಿಬಿಡುತ್ತಿದ್ದೆ. ಈಗ ಯಾವುದೊ ಇನ್ನೊಂದು ಪಕ್ಷದ  ಸರ್ಕಾರ ಇದೆ. ಅವರಿಗೆ ಹೇಳಬೇಕು. ಅವರು ಏನು ಮಾಡುತ್ತಾರೋ ಏನೊ ಗೊತ್ತಿಲ್ಲ ಎಂದರು.

ಇದೇ ವೇಳೆ ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆಗೆ ಕೇಳಿದ ಕಾರ್ಯಕರ್ತನಿಗೆ ಉತ್ತರಿಸಿದ ಅವರು, ನನ್ನ ವಿರುದ್ಧ ನಿಂತಿದಲ್ಲ ಯಾವನವನು ಶ್ರೀರಾಮುಲು. ಅವನೇ  ಆರೋಗ್ಯ ಮಂತ್ರಿ ಇದ್ದಾರೆ. ಅವರಿಗೆ  ಹೇಳಿದರೆ ಕೇಳುವಲ್ಲ ಅವನು. ಅವನಿಗೆ ಇನ್ನೊಂದು ಸಾರಿ ಹೇಳುತ್ತೇನೆ. ನನ್ನ ಜೊತೆ ಅವನು ಮಾತೇ ಆಡೋಲ್ಲ. ಅದಕ್ಕಾಗಿ ಕ್ಷೇತ್ರದ ಹೆಲ್ತೋ, ಡಿಎಚ್​ಓ ಪತ್ರ ಬರಿಯಿರಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿನಿಗೆ ಹುರುದುಂಬಿಸಿದ ಸಿದ್ದರಾಮಯ್ಯ

ಸಮಸ್ಯೆ ಹೇಳಿಕೊಂಡು ಭಾಷಣ ಮಾಡುವ ಮಧ್ಯೆ ತಡವರಿಸಿದ ವಿದ್ಯಾರ್ಥಿನಿಗೆ ಸಿದ್ದರಾಮಯ್ಯ ಧೈರ್ಯತುಂಬಿದ ಘಟನೆ ನಡೆಯಿತು. ಸುಮಾ ಎಂಬ ವಿದ್ಯಾರ್ಥಿನಿ ವೇದಿಕೆ ಮೇಲೆ ಮಾತನಾಡುವಾಗ ತಡವರಿಸಿದಾಗ ಬೆನ್ನು ತೊಟ್ಟಿ ಸಮಸ್ಯೆ ಹೇಳುವಂತೆ ತಿಳಿಸಿದರು. ನಮ್ಮ ಶಾಲೆಗೆ ಕಟ್ಟಡ ಬೇಕು. ನಮ್ಮ ಗೆಳತಿಯರು ಬಸ್ ಇಲ್ಲದೇ ಟಂಟಂನಲ್ಲಿ ಬರುತ್ತಾರೆ ಎಂದು ಸಮಸ್ಯೆ ಹೇಳಿಕೊಂಡಳು.

(ವರದಿ: ರಾಚಪ್ಪ ಬನ್ನಿದಿನ್ನಿ)
First published: December 5, 2019, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading