Bollywood Movie: ನಾನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲ್ಲ ಎಂದ್ರು ಸಿದ್ದರಾಮಯ್ಯ, ಕಾರಣ ಕೇಳಿದ್ರೆ ನೀವು ಕೂಡ ನಗ್ತೀರಾ?

ನಾನು ಹೆಚ್ಚಾಗಿ ಸಿನಿಮಾ ನೋಡಲ್ಲ, ಇನ್ನು ಈ ಚಿತ್ರ ನೋಡಲು ನನಗೆ ಹಿಂದಿ ಅರ್ಥವಾಗೋದಿಲ್ಲ, ಹೀಗಾಗಿ ನಾನು ಆ ಚಿತ್ರ ನೋಡಲ್ಲ ಅಂತ ಹೇಳಿದ್ರು ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ದೇಶದೆಲ್ಲೆಡೆ ಬಾಲಿವುಡ್ (Bollywood) ಸಿನಿಮಾ (Movie) 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆನೇ ಚರ್ಚೆಯಾಗುತ್ತಿದೆ. 32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಕಾಶ್ಮೀರದಲ್ಲಿ ನಡೆದಿದ್ದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಿದ್ದಾಗಿ ಹೇಳಿದ್ದಾರೆ. ಕೆಲವೆಡೆ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ನೀಡಿದೆ. ಇನ್ನುಕೆಲವು ರಾಜ್ಯಗಳಲ್ಲಿ ಈ ಸಿನಿಮಾವನ್ನು ಉಚಿತವಾಗಿ ತೋರಿಸಲಾಗುತ್ತಿದೆ. ಅದರಂತೆಯೇ ಕರ್ನಾಟಕದಲ್ಲಿಯೂ ಶಾಸಕರಿಗೆ ಸಚಿವರಿಗೆ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸಿನಿಮಾ ನೋಡುವುದಿಲ್ಲ ಎಂದು ಅಂತಿದ್ದಾರೆ

‘ನಾನು ದಿ ಕಾಶ್ಮೀರ್ ಫೈಲ್ಸ್​  ಸಿನಿಮಾ ನೋಡಲ್ಲ’

ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮ ಮತ್ತು ಕಾಶ್ಮೀರದಿಂದ ಹೊರಬಿದ್ದ ಕಾಶ್ಮೀರಿ ಪಂಡಿತರ ಕಥೆಯನ್ನು ಸಿನಿಮಾದಲ್ಲಿ ನೋಡಿ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೆಲವು ರಾಜ್ಯಗಳಲ್ಲಿ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಉಚಿತವಾಗಿ ಸಿನಿಮಾ ನೋಡಲು ಅವಕಾಶ ನೀಡಿದೆ. ಅದೇ ಕರ್ನಾಟಕದಲ್ಲಿ ಶಾಸಕರು ಹಾಗೂ ಸಚಿವರಿಗೆ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿದ್ದಾರೆ ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲವೆಂದು ಹೇಳಿಕೆ ನೀಡಿದ್ದಾರೆ.

‘ಸಿದ್ದರಾಮಯ್ಯ ಯಾಕೆ ಸಿನಿಮಾ ನೋಡಲ್ಲ’

ಸಿದ್ದರಾಮಯ್ಯ ಸಿನಿಮಾ ಯಾಕೆ ನೋಡಲ್ಲ? ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿನಿಮಾ ನೋಡಲ್ಲ ಎಂದಿದ್ದಾರೆ. ಯಾಕೆ ಸಿನಿಮಾ ನೋಡಲ್ಲ ಎನ್ನುವುದಕ್ಕೆ ಕಾರಣವನ್ನೂ ನೀಡಿದ್ದಾರೆ. ''ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿನಿಮಾ ನೋಡಲು ಕರೆದಿದ್ದಾರೆ. ಆ ಸಿನಿಮಾ ನೋಡಲು ಹೋಗುವವರು ಹೋಗಲಿ. ನಾನು ಸಿನಿಮಾ ನೋಡುವುದು ಕಡಿಮೆ. ಈ ಕಾರಣಕ್ಕೆ ನಾಳೆ ಸಿನಿಮಾ ನೋಡಲು ಹೋಗುವುದಿಲ್ಲ.'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಣ ಕೊಟ್ಟಿದ್ದಾರೆ.

ಇದನ್ನೂ ಓದಿ: Hijab Verdict: ಹೈಕೋರ್ಟ್ ತೀರ್ಪು ಗೌರವಿಸುವಂತೆ BSY ಮನವಿ, ನಮಗೆ ಕಪಾಳಮೋಕ್ಷ ಆಗಿದೆ ಎನ್ನಲಾಗಲ್ಲ ಎಂದ್ರು ಸಿದ್ದು

‘ನಂಗೆ ಹಿಂದಿ ಬರಲ್ಲ ನಾನು ನೋಡಲ್ಲ’

ವಿಧಾನಸಭೆಯಿಂದ ಹೊರ ಬಂದ ಸಿದ್ದರಾಮಯ್ಯರನ್ನ ದಿ ಕಾಶ್ಮೀರ ಫೈಲ್ ಚಿತ್ರಕ್ಕೆ ನೀವು ಹೋಗೋದಿಲ್ವಾ ಸರ್​ ಎಂದು ಹಲವರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಹೆಚ್ಚಾಗಿ ಸಿನಿಮಾ ನೋಡಲ್ಲ ಪ್ರೇಮ್​ ನಿರ್ದೇಶನದ ಏಕ್ ಲವ್​ ಯಾ ಚಿತ್ರವನ್ನು ಅವರ ಮನವಿ ಮೇರೆಗೆ ನೋಡಿದೆ. ಪೂರ್ತಿ ನೋಡಿಲ್ಲ ಅರ್ಧಕ್ಕೆ ಎದ್ದು ಬಂದೆ. ಇನ್ನು ಈ ಚಿತ್ರ ನೋಡಲು ನನಗೆ ಹಿಂದಿ ಅರ್ಥವಾಗೋದಿಲ್ಲ, ಹೀಗಾಗಿ ನಾನು ಆ ಚಿತ್ರ ನೋಡಲ್ಲ ಅಂತ ಹೇಳಿ ಹೊರಟ್ರು. ಇದನ್ನ ಕೇಳಿ ನೆರೆದಿದ್ದ ಮಂದಿ ನಕ್ಕು ಸುಮ್ಮನಾದ್ರು.

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆ ವ್ಯವಸ್ಥೆ

ಶಾಸಕರು, ಸಚಿವರಿಂದ ಸಿನಿಮಾ ವೀಕ್ಷಣೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಘೋಷಣೆ ಮಾಡಿದ್ದು, ಇಂದು ಸಂಜೆ 6.45ಕ್ಕೆ ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ಶಾಸಕರು ಹಾಗೂ ಸಚಿವರು, 'ದಿ ಕಾಶ್ಮೀರ್​ಫೈಲ್ಸ್​' ಸಿನಿಮಾ ವೀಕ್ಷಿಸಲಿದ್ದಾರೆ. ವಿಧಾನಸಭೆ ಸಚಿವಾಲಯದಿಂದ ಈ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಸಿನಿಮಾ ವೀಕ್ಷಿಸಲು ಬಹುತೇಕ ಆಡಳಿತ ಪಕ್ಷದ ಶಾಸಕರು ಭಾಗವಹಿಸುವ ಸಾಧ್ಯತೆಗಳಿವೆ. ಇನ್ನೊಂದು ಕಡೆ ಮಾಜಿ ಸಿಎಂ ಯುಡಿಯೂರಪ್ಪ ಕೂಡ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ

ಇದನ್ನೂ ಓದಿ: Digital Water Bank: ಇನ್ನಿಲ್ಲ ಕುಡಿಯುವ ನೀರಿನ ಸಮಸ್ಯೆ; ಬೆಂಗಳೂರಿನಲ್ಲಿ ಸ್ಥಾಪನೆಯಾಯ್ತು ಡಿಜಿಟಲ್ ವಾಟರ್ ಬ್ಯಾಂಕ್!

ಉಚಿತ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ

ಸಿನಿಮಾ ವೀಕ್ಷಿಸಿದ ಸಿಎಂ, ಗೃಹ ಸಚಿವ ಈಗಾಗಲೇ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವೀಕ್ಷಿಸಿದ್ದಾರೆ. ಉಳಿದವರು ಇಂದು ಸಿನಿಮಾ ನೋಡಲಿದ್ದಾರೆ. ಇನ್ನೊಂದು ಕಡೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್​​ ಉಚಿತ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಮಾ.21ರಂದು ಜಿಲ್ಲೆಯಲ್ಲಿ 'ದಿ ಕಾಶ್ಮೀರ ಫೈಲ್ಸ್' ಬಿಡುಗಡೆ ಮಾಡಲಾಗುತ್ತಿದೆ. ಮಧ್ಯ ಪ್ರದೇಶದಲ್ಲಿಯೂ ಪೊಲೀಸರಿಗೆ ಉಚಿತವಾಗಿ ಸಿನಿಮಾ ತೋರಿಸಲಾಗುತ್ತೆ
Published by:Pavana HS
First published: